Parents’ Day 2023: ಪ್ರತೀ ಪೋಷಕರು ಸ್ವಯಂ ಆರೈಕೆಗೆ ಆದ್ಯತೆ ನೀಡಿ; ಪ್ರಕೃತಿ ಪೊದ್ದಾರ್

|

Updated on: Jul 22, 2023 | 10:59 AM

ತಮ್ಮ ಒತ್ತಡ ನಡುವೆಯೂ ಮಕ್ಕಳಿಗಾಗಿ ತಮ್ಮ ಸ್ವಯಂ ಕಾಳಜಿಯನ್ನು ಮರೆತು ಬಿಡುತ್ತಾರೆ. ಆದ್ದರಿಂದ ಪ್ರತೀ ಪೋಷಕರಿಗೂ ತಮ್ಮ ಸ್ವಯಂ ಕಾಳಜಿ ಹಾಗೂ ಆರೈಕೆ ಎಷ್ಟು ಮುಖ್ಯ ಎಂದು ಆರೋಗ್ಯ ತಜ್ಞರಾದ ಪ್ರಕೃತಿ ಪೊದ್ದಾರ್ ವಿವರಿಸುತ್ತಾರೆ.

Parents Day 2023: ಪ್ರತೀ ಪೋಷಕರು ಸ್ವಯಂ ಆರೈಕೆಗೆ ಆದ್ಯತೆ ನೀಡಿ; ಪ್ರಕೃತಿ ಪೊದ್ದಾರ್
Parents' Day 2023
Follow us on

ಪ್ರತೀ ವರ್ಷ ಜುಲೈ 23 ಪೋಷಕರ ದಿನವನ್ನು ಆಚರಿಸಲಾಗುತ್ತದೆ. ಆದರೆ ವರ್ಷದ ಒಂದು ನಿರ್ದಿಷ್ಟ ದಿನದಂದು ಆಚರಿಸಲು ಸಾಧ್ಯವಿಲ್ಲ. ಯಾಕೆಂದರೆ ಪೋಷಕರು ಪ್ರತೀ ದಿನ ತಮ್ಮ ಮಕ್ಕಳ ಬಗ್ಗೆ ಸದಾ ಕಾಳಜಿಯನ್ನು ಹೊಂದಿರುತ್ತಾರೆ. ಜೊತೆಗೆ ತಮ್ಮ ಒತ್ತಡ ನಡುವೆಯೂ ಮಕ್ಕಳಿಗಾಗಿ ತಮ್ಮ ಸ್ವಯಂ ಕಾಳಜಿಯನ್ನು ಮರೆತು ಬಿಡುತ್ತಾರೆ. ಆದ್ದರಿಂದ ಪ್ರತೀ ಪೋಷಕರಿಗೂ ತಮ್ಮ ಸ್ವಯಂ ಕಾಳಜಿ ಹಾಗೂ ಆರೈಕೆ ಎಷ್ಟು ಮುಖ್ಯ ಎಂದು ಆರೋಗ್ಯ ತಜ್ಞರಾದ ಪ್ರಕೃತಿ ಪೊದ್ದಾರ್ ವಿವರಿಸುತ್ತಾರೆ. ಪ್ರತಿಯೊಂದು ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಅವರಿಗಾಗಿ ಹೆಚ್ಚಿನದನ್ನು ಮಾಡಲು ನಾವು ಆಗಾಗ್ಗೆ ಸ್ವಯಂ-ಆರೈಕೆಯನ್ನು ತ್ಯಾಗ ಮಾಡುತ್ತಾರೆ. 2015 ರ ಪ್ಯೂ ರಿಸರ್ಚ್ ಸೆಂಟರ್ ಸಮೀಕ್ಷೆಯಲ್ಲಿ, ಶೇಕಡಾ 59ರಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಸರಿಯಾದ ಸಮಯವನ್ನು ಕಳೆಯುತ್ತಾರೆ ಎಂದು ತಿಳಿದುಬಂದಿದೆ.

ಪಾಲಕರು ತಮಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಮತ್ತು ಅವರ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು. ಏಕೆಂದರೆ ಅವರ ಮಾನಸಿಕ ಯೋಗಕ್ಷೇಮವು ಅವರ ಮಕ್ಕಳ ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಗುಣಮಟ್ಟದ ನಿದ್ರೆ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿದರೆ ಮಕ್ಕಳು ಕೂಡ ಆರೋಗ್ಯಕರ ಮತ್ತು ಸಂತೋಷದಿಂದ ಇರುತ್ತಾರೆ, ಎಂದು ಪೊದ್ದಾರ್ ಹೇಳುತ್ತಾರೆ.

ಇದನ್ನೂ ಓದಿ: ಏಕಾಗ್ರತೆಯಿಂದ ಕೆಲಸ ಮಾಡಲು ಉತ್ಪಾದಕ ಮತ್ತು ಸುಂದರವಾದ ಕೆಲಸದ ಸ್ಥಳವನ್ನು ರಚಿಸಿ

ಸ್ವಯಂ-ಆರೈಕೆಯನ್ನು ತೆಗೆದುಕೊಳ್ಳಲು ಕೆಲವು ಸರಳ ಮಾರ್ಗಗಳಿವೆ:

ಸಹಾಯಕ್ಕಾಗಿ ಕೇಳಲು ಹಿಂಜರಿಯಬೇಡಿ:

ನೀವು ಎಂದಾದರೂ ಅತಿಯಾದ ನೋವು ಅಥವಾ ಖುಷಿ, ಏನಾದರೂ ಸಹಾಯ ಬೇಕಿದ್ದರೆ, ದೂರ ಸರಿಯಬೇಡಿ. ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಮುಕ್ತವಾಗಿ ಮಾತನಾಡಿ. ಜೊತೆಗೆ ಶಿಶುಪಾಲನಾ ಕರ್ತವ್ಯಗಳನ್ನು ಹಂಚಿಕೊಳ್ಳುವ ಬಗ್ಗೆ ಚಿಂತಿಸಬೇಡಿ.

ಪ್ರತಿದಿನ ಸ್ವಯಂ-ಆರೈಕೆ ಸಮಯವನ್ನು ಹೊಂದಿಸಿ:

ನಿಮ್ಮ ಆಯ್ಕೆಯ ಚಟುವಟಿಕೆಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ ಅದು ನಿಮಗೆ ವಿಶ್ರಾಂತಿ ಮತ್ತು ಪುನಶ್ಚೇತನಕ್ಕೆ ಸಹಾಯ ಮಾಡುತ್ತದೆ. ನಿಮ್ಮ ಮಕ್ಕಳು ದೊಡ್ಡವರಾಗಿದ್ದರೆ, ಸ್ವಯಂ-ಆರೈಕೆಯ ಅಗತ್ಯವನ್ನು ಅರ್ಥಮಾಡಿಸಿ. ಪಾಲಕರು ಮಾನಸಿಕ ಯೋಗಕ್ಷೇಮವನ್ನು ತಮಗಾಗಿ ಮಾತ್ರವಲ್ಲದೆ ತಮ್ಮ ಮಕ್ಕಳಿಗಾಗಿಯೂ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಪೋಷಕರು ತನ್ನನ್ನು ತಾನೇ ಕಾಳಜಿ ವಹಿಸುವುದು ಸ್ವಾರ್ಥವಲ್ಲ, ಆದರೆ ಅದು ಸರಿಯಾದ ಕೆಲಸ ಎಂದು ತಿಳಿದಿರಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:58 am, Sat, 22 July 23