AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸೇವೆ ಸುಧಾರಿಸಲು ಸರ್ಕಾರ ಮಹತ್ವದ ಹೆಜ್ಜೆ; ಆರೋಗ್ಯ ಕವಚ 108 ಅನುಷ್ಠಾನಕ್ಕಾಗಿ ತಾಂತ್ರಿಕ ಸಮಿತಿ ರಚನೆ

ಹಳೆಯ ಸರ್ಕಾರದ GVK ಟೆಂಡರ್​ಗೆ ನೂತನ ಸರ್ಕಾರ ಕೊಕ್ ಕೊಟ್ಟಿದೆ. 108 ಆಂಬುಲೆನ್ಸ್ ಸೇವೆಯಲ್ಲಿ ಮಹತ್ವದ ಬದಲಾವಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಆರೋಗ್ಯ ಸೇವೆ ಸುಧಾರಿಸಲು ಸರ್ಕಾರ ಮಹತ್ವದ ಹೆಜ್ಜೆ; ಆರೋಗ್ಯ ಕವಚ 108 ಅನುಷ್ಠಾನಕ್ಕಾಗಿ ತಾಂತ್ರಿಕ ಸಮಿತಿ ರಚನೆ
108 ಆಂಬ್ಯುಲೆನ್ಸ್
Vinay Kashappanavar
| Updated By: ಆಯೇಷಾ ಬಾನು|

Updated on: Jul 22, 2023 | 9:04 AM

Share

ಬೆಂಗಳೂರು, ಜುಲೈ 22: ಕರ್ನಾಟಕ ರಾಜ್ಯದಲ್ಲಿನ ಆರೋಗ್ಯ ಸೇವೆ(Health Service) ಸುಧಾರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ(Karnataka Government). ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದ್ದು 108 ಆಂಬ್ಯುಲೆನ್ಸ್ ಕಿರಿಕ್​ಗೆ ಇನ್ಮುಂದೆ ಬ್ರೇಕ್ ಬೀಳಲಿದೆ(108 Ambulance). ರಾಜ್ಯದಲ್ಲಿ 108 ಆರೋಗ್ಯ ಕವಚ ಹಾಗೂ 104 ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತ್ತೀಕರಣ ಹಾಗೂ ಮಾರ್ಗದರ್ಶನಕ್ಕೆ ಸರ್ಕಾರ ಸಮಿತಿ ರಚನೆ ಮಾಡಿದೆ.

ಹಳೆಯ ಸರ್ಕಾರದ GVK ಟೆಂಡರ್​ಗೆ ನೂತನ ಸರ್ಕಾರ ಕೊಕ್ ಕೊಟ್ಟಿದೆ. 108 ಆಂಬುಲೆನ್ಸ್ ಸೇವೆಯಲ್ಲಿ ಮಹತ್ವದ ಬದಲಾವಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಡಾ. ಜಿ ಗುರುರಾಜ್, ನಿಮ್ಹಾನ್ಸ್ ಪ್ರಭಾರ ನಿರ್ದೇಶಕರು ಹಾಗೂ ಐಐಐಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದೆ. ಈ ಮೂಲಕ ಆರೋಗ್ಯ ಸೇವೆಗಳ ಟೆಂಡರ್ ನ್ಯೂನತೆ ಲೋಪದೋಷ ಅಧ್ಯಯನಕ್ಕೆ ಮುಂದಾಗಿದೆ. ಟೆಂಡರ್ ನ್ಯೂನತೆ ಲೋಪದೋಷ ಅಧ್ಯಯನ ಹಾಗೂ ಸಲಹೆ ನೀಡಲು ತಜ್ಞರ ಸಲಹಾ ಸಮಿತಿ ರಚನೆ ಮಾಡಲಾಗಿದ್ದು GVK ಆಂಬುಲೆನ್ಸ್ ಸೇವೆಗೆ ಬಿಗ್ ಶಾಕ್ ಕೊಟ್ಟಂತಾಗಿದೆ.

GVK ಸಂಸ್ಥೆಯ ವಿರುದ್ಧ ಸಾಲು ಸಾಲು ಆರೋಪ ಹಾಗೂ ದೂರು ಬಂದ ಹಿನ್ನಲೆ ಸರ್ಕಾರ ಜಿವಿಕೆ ಟೆಂಡರ್​ಗೆ ಕೊಕ್ ಕೊಟ್ಟಿದೆ. ಕಳೆದ ಮೂರು ತಿಂಗಳ ಹಿಂದೆ ಆರೋಗ್ಯ ಕವಚ ಅಡಿಯಲ್ಲಿನ 108 ಆಂಬುಲೆನ್ಸ್ ಸೇವೆಗೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ನಲ್ಲಿಯೂ ಜಿವಿಕೆ ತೆರೆ ಹಿಂದಿನಿಂದ ಭಾಗವಹಿಸಿತ್ತು. ಆದ್ರೆ ಈಗ ಸರ್ಕಾರ ಟೆಂಡರ್ ಪ್ರಕ್ರಿಯೇ ಕೈ ಬಿಟ್ಟಿದೆ. ಟೆಂಡರ್ ಪ್ರಕ್ರಿಯೆ ಖರೀದಿಯಲ್ಲಿನ ವಿಧಾನ, ಟೆಂಡರ್ ಪ್ಲೋಟೀಂಗ್ ನಲ್ಲಿನ ನ್ಯೂನತೆ, ಆಕ್ಷಪಣೆಗಳು, ತಾಂತ್ರಿಕ ದೋಷ, ಪರಿಶೀಲಿಸಿ ಉತ್ತಮ ಸೇವೆ ನೀಡಲು ಸಮಿತಿ ರಚನೆ ಮಾಡಲಾಗಿದೆ. ಉತ್ತಮ ಆರೋಗ್ಯ ಸೇವೆಗೆ ಯಾವ ರೀತಿಯ ಸೌಲಭ್ಯ? ಏನೆಲ್ಲ ತಂತ್ರಜ್ಞಾನ ಇರಬೇಕು? ಯಾವೆಲ್ಲ ಮಾರ್ಗಸೂಚಿ ಸೌಲಭ್ಯ ಅಳವಡಿಸಿಕೊಂಡಿರಬೇಕು? ಈ ಎಲ್ಲ ಮಾನದಂಡಗಳ ಆಧಾರದ ಮೇಲೆ ಸಲಹೆ ಹಾಗೂ ವರದಿ ನೀಡಲು ತಜ್ಞರ ಸಲಹಾ ಸಮಿತಿ ರಚನೆ ಮಾಡಲಾಗಿದೆ.

ಇದನ್ನೂ ಓದಿ: TV9 Impact: ಟಿವಿ9 ವರದಿ ಬೆನ್ನಲ್ಲೇ ಮಕ್ಕಳ ಮೊಬೈಲ್ ಬಳಕೆ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕೆ ಇಳಿದ ಸರ್ಕಾರ, ತಜ್ಞರ ಸಮಿತಿ ರಚನೆ

ತಾಂತ್ರಿಕ ಸಮಿತಿಯಲ್ಲಿ ಯಾರೆಲ್ಲ ತಜ್ಞರಿದ್ದಾರೆ?

ಐಐಐಟಿ ನಿರ್ದೇಶಕರು, ನಿಮ್ಹಾನ್ಸ್ ನಿರ್ದೇಶಕರು, ವಿಟಿಯು ಮಾಜಿ ಕುಲಪತಿಗಳು, ಕಾರ್ಮಿಕ ಇಲಾಖೆಯ ಆಯುಕ್ತರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ( IISC ) ತಜ್ಞರನ್ನ ಈ ಸಮಿತಿಯೊಳಗೊಂಡಿದೆ. ಟೆಂಡರ್ ಹಾಗೂ ಸೇವಾದರ ಆಯ್ಕೆ ಸಂಬಂಧ ಸಲಹೆ ಮಾರ್ಗದರ್ಶನವನ್ನ ನೀಡಲು ಈ ಸಮಿತಿ ರಚನೆಯಾಗಿದೆ. ಈ ಸಮಿತಿ ಟೆಂಡರ್ ಪ್ರಕ್ರಿಯೆ ಖರೀದಿಯಲ್ಲಿನ ವಿಧಾನ, ಟೆಂಡರ್ ಪ್ಲೋಟೀಂಗ್ ನಲ್ಲಿನ ನ್ಯೂನತೆ, ಆಕ್ಷಪಣೆಗಳು, ತಾಂತ್ರಿಕ ದೋಷ, ಪರಿಶೀಲಿಸಿ ಸೇವೆ ನೀಡಲು ಮುಂದಿನ ಒಂದು ತಿಂಗಳೊಳಗೆ ಕಾಲಾವಕಾಶ ನೀಡಲಾಗಿದ್ದು ಒಂದು ತಿಂಗಳೊಳಗೆ ಈ ಸಮಿತಿ ವರದಿ ನೀಡಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!