AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ಹಂಚಿಕೊಂಡ ಬಿಸಿಸಿಐ

IND vs ENG: ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ಹಂಚಿಕೊಂಡ ಬಿಸಿಸಿಐ

ಪೃಥ್ವಿಶಂಕರ
|

Updated on:Jun 21, 2025 | 4:04 PM

Share

India Dominates England in 1st Test: ಭಾರತದ ಯುವ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಶುಭ್‌ಮನ್ ಗಿಲ್ (127 ರನ್) ಮತ್ತು ರಿಷಭ್ ಪಂತ್ (65 ರನ್) ಅವರ ಅದ್ಭುತ ಬ್ಯಾಟಿಂಗ್ ಹಾಗೂ ಜೈಸ್ವಾಲ್ ಅವರ ಶತಕದಿಂದ ಭಾರತ ದೊಡ್ಡ ಮೊತ್ತ ಕಲೆಹಾಕಿದೆ. ಪಂದ್ಯದ ನಂತರ ಕೆ.ಎಲ್. ರಾಹುಲ್, ರಿಷಭ್ ಪಂತ್‌ಗೆ ಕೈ ಮುಗಿದು ನಮಸ್ಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಯುವ ಭಾರತ ತಂಡ ಬಲಿಷ್ಠ ಆಂಗ್ಲರ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಸಾಯಿ ಸುದರ್ಶನ್ ಹೊರತುಪಡಿಸಿ, ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಯಶಸ್ವಿ ಜೈಸ್ವಾಲ್ (101 ರನ್) ಮತ್ತು ಹೊಸ ನಾಯಕ ಶುಭ್‌ಮನ್ ಗಿಲ್ (ಔಟಾಗದೆ 127) ಪಂದ್ಯದ ಮೊದಲ ದಿನದಂದು ಶತಕಗಳನ್ನು ಬಾರಿಸುವ ಮೂಲಕ ಇಂಗ್ಲಿಷ್ ಬೌಲರ್​ಗಳ ಬೆವರಿಳಿಸಿದರು. ಕನ್ನಡಿಗ ಕೆಎಲ್ ರಾಹುಲ್ (48 ರನ್) ಮತ್ತು ರಿಷಭ್ ಪಂತ್ (ಔಟಾಗದೆ 65) ಕೂಡ ಆತಿಥೇಯ ತಂಡಕ್ಕೆ ದುಸ್ವಪ್ನವಾಗಿ ಕಾಡಿದರು. ಮೊದಲ ದಿನದ ಆಟ ಮುಗಿದ ನಂತರ, ರಿಷಭ್ ಪಂತ್ ಹಾಗೂ ಗಿಲ್ ಡ್ರೆಸ್ಸಿಂಗ್ ಕೋಣೆಗೆ ಬಂದಾಗ ಕೆಎಲ್ ರಾಹುಲ್, ರಿಷಭ್ ಪಂತ್​ಗೆ ಕೈ ಮುಗಿದ ವಿಡಿಯೋ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

ಕೈ ಮುಗಿದ ರಾಹುಲ್

ಮೊದಲ ದಿನದಾಟದ ಅಂತ್ಯದ ವೇಳೆಗೆ, ನಾಯಕ ಶುಭ್‌ಮನ್ ಗಿಲ್ ಮತ್ತು ರಿಷಭ್ ಪಂತ್ ನಡುವೆ 138 ರನ್‌ಗಳ ಅಜೇಯ ಪಾಲುದಾರಿಕೆ ಇತ್ತು. ಹೀಗಾಗಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಡ್ರೆಸ್ಸಿಂಗ್ ಕೋಣೆಗೆ ಬಂದಾಗ, ಎಲ್ಲರೂ ಅವರನ್ನು ಹರ್ಷಚಿತ್ತದಿಂದ ಸ್ವಾಗತಿಸಿದರು. ಎಲ್ಲಾ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಅವರನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

ಈ ಸಮಯದಲ್ಲಿ ಇವರಿಬ್ಬರನ್ನು ಸ್ವಾಗತಿಸಲು ಮೆಟ್ಟಿಲುಗಳ ಬಳಿ ನಿಂತಿದ್ದ ರಾಹುಲ್, ರಿಷಭ್ ಪಂತ್ ಸನಿಹಕ್ಕೆ ಬಂದ ಕೂಡಲೇ ಕೈ ಮುಗಿದು ನಮಸ್ಕರಿಸಿದರು. ಇದಾದ ನಂತರ ಇಬ್ಬರೂ ಆಟಗಾರರು ನಕ್ಕರು. ಮುಖ್ಯ ಕೋಚ್ ಗೌತಮ್ ಗಂಭೀರ್ ರಿಷಭ್ ಪಂತ್ ಅವರನ್ನು ಅಪ್ಪಿಕೊಂಡರು. ಇದೀಗ ಬಿಸಿಸಿಐ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 21, 2025 04:04 PM