ಕರ್ನಾಟಕದಲ್ಲಿ ನಂದಿನಿ ಹಾಲು ದರ 3 ರೂಪಾಯಿ ಏರಿಕೆ; ಸರ್ಕಾರದ ನಿರ್ಧಾರಕ್ಕೆ ಜನರ ಆಕ್ರೋಶ
ಕರೆಂಟ್ ಫ್ರೀ, ಬಸ್ ಫ್ರೀ ಎಂದು ಯೋಚಿಸುತ್ತಿರುವ ಜನರಿಗೆ ಸರ್ಕಾರ ದೊಡ್ಡ ಶಾಕ್ ಕೊಟ್ಟಿದೆ. ಹೌದು ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ. ಈ ಹಿನ್ನಲೆ ರಾಜ್ಯದ ಹಲವು ಕಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು, ಜು.22: ಕರೆಂಟ್ ಫ್ರೀ, ಬಸ್ ಫ್ರೀ ಎಂದು ಯೋಚಿಸುತ್ತಿರುವ ಜನರಿಗೆ ಸರ್ಕಾರ ದೊಡ್ಡ ಶಾಕ್ ಕೊಟ್ಟಿದೆ. ಹೌದು ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ. ಹೀಗ ಹೆಚ್ಚುವರಿ ಹಣವನ್ನ ರೈತರಿಗೆ ವರ್ಗಾವಣೆ ಮಾಡಲಿ ಮಂಡಳಿ ನಿರ್ಧಾರ ಮಾಡಿದೆ. ಆರ್ಥಿಕ ನಷ್ಟದ ಕಾರಣ ಹೇಳಿ ಕೆಎಂಎಫ್(KMF) ಹಾಲಿನ ದರವನ್ನ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿತ್ತು. ಆದ್ರೆ, ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದೆ. ಮತ್ತು ಆಗಸ್ಟ್ 1 ರಿಂದಲೇ ಹೊಸ ದರ ಜಾರಿಯಾಗಲಿದೆ.
ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆ ಆಗಲಿದೆ
ಇನ್ನು ಸದ್ಯ ಕೆಎಂಎಫ್ ರೈತರಿಂದ 31.14 ರೂ. ಜತೆಗೆ ಸರ್ಕಾರದಿಂದ ಐದು ಪ್ರೋತ್ಸಾಹ ಧನ ಸೇರಿ 36 ರೂಪಾಯಿಗೆ ಖರೀದಿ ಮಾಡುತ್ತಿದ್ದು, ಪ್ರತಿ ಲೀಟರ್‌ಗೆ ಗ್ರಾಹಕರಿಗೆ 39 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಇದೀಗ ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆ ಆಗಲಿದ್ದು, ರೈತರಿಂದ ಖರೀದಿ ಮಾಡುವ ದರವೂ ಹೆಚ್ಚಳವಾಗಲಿದೆ.
ಇದನ್ನೂ ಓದಿ:IIT-M’s 3D: 30 ಸೆಕೆಂಡುಗಳಲ್ಲಿ ಹಾಲಿನ ಕಲಬೆರಕೆಯನ್ನು ಪತ್ತೆ ಮಾಡುತ್ತೆ ಈ ಪೋರ್ಟಬಲ್ ಸಾಧನ!
ಈಗಿರುವ ದರ ಹಾಗೂ ಅಗಸ್ಟ್ 1 ರ ಬಳಿಕ ಜಾರಿಯಾಗಲಿರೋ ರೇಟ್
ಲೀ. ಟೋನ್ಡ್ ಹಾಲು – 39ರೂ 42ರೂ.
ಲೀ. ಹೋಮೋಜಿನೈಸ್ಡ್ ಟೋನ್ಡ್ ಹಾಲು 40ರೂ 43ರೂ.
ಲೀ. ಸ್ಪೆಷಲ್ ಹಾಲು 45 ರೂ 48ರೂ
ಲೀ. ಶುಭಂ ಹಾಲು 45ರೂ 48ರೂ
ಲೀ. ಸಮೃದ್ದಿ ಹಾಲು 50ರೂ 53ರೂ
ಲೀ. ಸಂತೃಪ್ತಿ ಹಾಲು 52ರೂ 55 ರೂ
ಲೀ. ಡಬ್ಬಲ್ ಟೋನ್ಡ್ ಹಾಲು 38 ರೂ 41 ರೂ
ಲೀ. ಮೊಸರು ಪ್ರತಿ ಲೀ 47 ರೂ 51ರೂ
ಹಾಲಿನ ದರ ಏರಿಕೆ ಹಿನ್ನಲೆ ಆಕ್ರೋಶ ಹೊರ ಹಾಕಿದ ಗ್ರಾಹಕರು
ಹಾಲಿನ ದರ 3 ರೂಪಾಯಿ ಏರಿಕೆ ಹಿನ್ನಲೆ ಗ್ರಾಹಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಹೀಗೆ ಬೆಲೆ ಜಾಸ್ತಿ ಮಾಡ್ತಿದ್ರೆ ಹೇಗೆ?, ಒಂದು ಕಡೆ ಫ್ರೀ ಅಂತಾ ಅನೌನ್ಸ್ ಮಾಡ್ತಾರೆ. ಕೆಲವರಿಗೆ ಫ್ರೀ ಫ್ರೀ ಅಂತಾ ಕೊಡ್ತಾರೆ ಮತ್ತೊಂದು ಕಡೆ ಎಲ್ಲಾ ವಸ್ತು ಬೆಲೆ ಜಾಸ್ತಿ ಮಾಡ್ತಾರೆ. ಇವರಿಗೆ ಫ್ರೀ ಕೊಡಿ ಅಂತಾ ಹೇಳಿದವರ್ಯಾರು?, ಮಧ್ಯಮ ವರ್ಗದ ಜನ ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಹುಬ್ಬಳ್ಳಿಯಲ್ಲೂ ಹಾಲಿನ ಬೆಲೆ ಹೆಚ್ಚಳ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಬೇಡಿ. ಬೆಳಗಾದ್ರೆ ಹಾಲು ಬೇಕು. ರೇಟ್ ಹೆಚ್ಚಾದ್ರೆ ಏನ ಮಾಡೋಣ. ನೀವು ಮದ್ಯದ ಬೆಲೆ ಇನ್ನು ಹೆಚ್ಚಳ ಮಾಡಿ. ಕೊನೆಗೆ ಕುಡಿಯೋದನ್ನ ಆದ್ರೂ ಬಿಡ್ತಾರೆ. ಆದ್ರೆ, ಹಾಲಿನ ಬೆಲೆ ಮಾತ್ರ ಹೆಚ್ಚಳ ಮಾಡಬೇಡಿ ಎಂದು ಜನರು ಮನದ ನೋವುನ್ನ ಹೊರ ಹಾಕಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Sat, 22 July 23