Nandini Milk Price: ಇಂದು ಮಹತ್ವದ ಸಭೆ, ನಂದಿನಿ ಹಾಲಿನ ದರ ಏರಿಕೆ ಭವಿಷ್ಯ ಇಂದೇ ನಿರ್ಧಾರ ಸಾಧ್ಯತೆ
ಕಳೆದ ಹಲವು ದಿನಗಳಿಂದ ಚರ್ಚೆಯಾಗುತ್ತಿರುವ ಹಾಲಿನ ದರ ಹೆಚ್ಚಳ ಬಗ್ಗೆ ಇಂದು ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.
ಬೆಂಗಳೂರು, (ಜುಲೈ 21): ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಮಧ್ಯೆ ದಿನಸಿ, ತರಕಾರಿ ಬೆಲೆ ಗಗನಕ್ಕೇರಿವೆ. ಇದರ ನಡುವೆ ಇದೀಗ ಹಾಲಿನ ದರ(nandini milk )ಏರಿಕೆ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತಿದೆ. ಪ್ರತಿ ಲೀಟರ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆಗೆ ಎಲ್ಲಾ ಹಾಲು ಮಾರಾಟ ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿವೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಇಂದು (ಜುಲೈ 21) ಸಂಜೆ 6 ಗಂಟೆಗೆ ಹಾಲು ಒಕ್ಕೂಟಗಳು, KMF ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದು, ನಂದಿನಿ ಹಾಲಿನ ದರ ಏರಿಕೆ ಭವಿಷ್ಯ ಇಂದೇ ನಿರ್ಧಾರವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ನಂದಿನಿ ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ; ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಸುಳಿವು
ಇಂದು ಸಂಜೆ 6 ಗಂಟೆಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆಯಲರಿಉವ ಮಹತ್ವದ ಸಭೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ, ಅಧಿಕಾರಿಗಳು ಭಾಗಿಯಾಗಲಿದ್ದು, ನಂದಿನಿ ಹಾಲಿನ ದರ ಏರಿಕೆ ಭವಿಷ್ಯ ಇಂದೇ ನಿರ್ಧಾರ ಸಾಧ್ಯತೆ ಇದೆ.
ಪ್ರತಿದಿನ ಬೆಂಗಳೂರಿಗೆ 13 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರಿಂದ ಪ್ರತಿದಿನ 15 ರಿಂದ 16 ಲಕ್ಷ ಪ್ರತಿನಿತ್ಯ ನಷ್ಟವಾಗುತ್ತೆ. ಪ್ರತಿ ಲೀ ಗೆ ಮಾರಾಟ ದರದ ಮೇಲೆ 5 ರುಪಾಯಿ ಹೆಚ್ಚಳ ಮಾಡಲು ಅವಕಾಶ ಕೊಡಬೇಕು. ಹೆಚ್ಚಳ ಮಾಡದಿದ್ದರೆ ಒಕ್ಕೂಟಗಳು ಸಾಲದ ಸುಳಿಯಲ್ಲಿ ಸಿಲುಕುತ್ತವೆ. ಹೀಗಾಗಿ ಈ ಬಾರಿ ಹಾಲಿನ ದರ ಪರಿಷ್ಕರಣೆ ಮಾಡುವಂತೆ ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯ ಮಾಡಿವೆ.
ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಹಾಲಿದ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ 15 ಒಕ್ಕೂಟಗಳು ನಷ್ಟದ ಪರಿಸ್ಥಿತಿಯಲ್ಲಿವೆ. ಸದ್ಯ ಹಾಲು ಮಾರಾಟ ಪ್ರತಿ ಲೀಟರ್ 39 ರೂಪಾಯಿ ಇದೆ ( ಲೀ ಟೋನ್ಡ್ ಹಾಲು ). ಇದರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಹೋಗುತ್ತಿದೆ. ಮಾರಾಟಗಾರರಿಗೆ ಪ್ರತಿ ಲೀಟರ್ ಗೆ 2 ರೂ ಕಮೀಷನ್. ಉಳಿದ 1.50 ಪೈಸೆ ಲಾಭದಿಂದ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಒಕ್ಕೂಟಗಳ ಅಭಿಪ್ರಾಯ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:40 am, Fri, 21 July 23