Skincare Tips: ಮಳೆಗಾಲದಲ್ಲಿ ಕಂಡು ಬರುವ 5 ಸಾಮಾನ್ಯ ಚರ್ಮದ ಸಮಸ್ಯೆ, ತಡೆಯಲು ಇಲ್ಲಿದೆ ಸರಳ ಸಲಹೆಗಳು

ಮಳೆಗಾಲದಲ್ಲಿ ನಿಮ್ಮ ಚರ್ಮವು ಇಸುಬು, ಹೈಪರ್ಪಿಗ್ಮೆಂಟೇಶನ್ ನಂತಹ ಹಲವಾರು ಚರ್ಮದ ಸಮಸ್ಯೆಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಮಾನ್ಸೂನ್ ನಲ್ಲಿ 5 ಸಾಮಾನ್ಯ ಚರ್ಮದ ಸಮಸ್ಯೆಗಳು ಮತ್ತು ಅವುಗಳನ್ನು ತಡೆಯಲು ತಜ್ಞರ ಸಲಹೆಗಳು ಇಲ್ಲಿವೆ.

Skincare Tips: ಮಳೆಗಾಲದಲ್ಲಿ ಕಂಡು ಬರುವ 5 ಸಾಮಾನ್ಯ ಚರ್ಮದ ಸಮಸ್ಯೆ, ತಡೆಯಲು ಇಲ್ಲಿದೆ ಸರಳ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 22, 2023 | 3:10 PM

ಮಳೆಗಾಲದಲ್ಲಿ ನಮ್ಮ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ,  ಏಕೆಂದರೆ ತೇವಾಂಶ ಚರ್ಮವನ್ನು ರಕ್ಷಿಸುತ್ತದೆ ಎಂದು ಸಾಮಾನ್ಯವಾಗಿ ನಂಬಿಕೆ, ಆದರೆ ಅದು ಸತ್ಯವಲ್ಲ. ಮಾನ್ಸೂನ್​​​ನೊಂದಿಗೆ ಬರುವ ತೇವಾಂಶವು ನಿಮ್ಮ ಚರ್ಮವನ್ನು ಹಾಳು ಮಾಡುತ್ತದೆ. ಮಳೆಗಾಲದ ಚರ್ಮದ ಸಮಸ್ಯೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಮಾಹಿತಿ ನೀಡಲಾಗಿದೆ.

ಅತಿಯಾದ ಬೆವರುವಿಕೆಯಿಂದ ಹಿಡಿದು ಕಿರಿಕಿರಿ ಉಂಟುಮಾಡುವ ಅಲರ್ಜಿಗಳಿಂದ ಹಿಡಿದು ಸೋಂಕುಗಳವರೆಗೆ, ಮಳೆ ನೀರು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ, ಬಿಸಿ ಚಹಾ ಎಲ್ಲವೂ ನಿಮ್ಮ ಚರ್ಮದ ಅಂದವನ್ನು ಹೆಚ್ಚಿಸುವುದಿಲ್ಲ ಬದಲಾಗಿ ಕುಗ್ಗಿಸುತ್ತವೆ. ನಿಮ್ಮ ಮಂದ ಮತ್ತು ನಿರ್ಜೀವ ಚರ್ಮವನ್ನು ತ್ವರಿತವಾಗಿ ಮತ್ತೆ ಮೊದಲಿನ ಸ್ಥಿತಿಗೆ ತರಲು ನೀವು ಬಯಸಿದಲ್ಲಿ, ಕೆಲವು ಸರಳ ಸಲಹೆಗಳು ಇಲ್ಲಿದೆ.

ಮಳೆಗಾಲದಲ್ಲಿ ಸಾಮಾನ್ಯ ಚರ್ಮದ ಸಮಸ್ಯೆಗಳು:

1. ಮೊಡವೆ ಅಥವಾ ಗುಳ್ಳೆಗಳು, ಬ್ಲ್ಯಾಕ್ ಹೆಡ್ಸ್:

ವಾತಾವರಣದಲ್ಲಿನ ತೇವಾಂಶದಿಂದಾಗಿ ಅತಿಯಾದ ಬೆವರುವಿಕೆ ಮತ್ತು ಚರ್ಮವನ್ನು ಅತಿಯಾಗಿ ಉಜ್ಜುವುದು ಹಾಗೂ ಸ್ವಚ್ಛಗೊಳಿಸುವುದರಿಂದ ಮೊಡವೆ, ಗುಳ್ಳೆಗಳು ಮತ್ತು ಬಿರುಕುಗಳಿಗೆ ಕಾರಣವಾಗಬಹುದು. ಬೆವರು ಮತ್ತು ತೇವಾಂಶವು ಚರ್ಮವನ್ನು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಸ್ಥಳವನ್ನಾಗಿ ಮಾಡುತ್ತದೆ. ಹಾಗಾಗಿ ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಉತ್ತಮ ಸ್ಯಾಲಿಸಿಲಿಕ್ ಆಮ್ಲ ಆಧಾರಿತ ಕ್ಲೆನ್ಸರ್ ಬಳಸಿ. ಜೊತೆಗೆ ಒಮ್ಮೆ ಈ ಬಗ್ಗೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.

2. ಇಸುಬು (ಎಸ್ಜಿಮಾ):

ಖಾಜ್ ಎಂದೂ ಕರೆಯಲ್ಪಡುವ ಈ ಸ್ಥಿತಿಯು ಶುಷ್ಕ ಮತ್ತು ಚರ್ಮದ ಮೇಲೆ ಕೆಂಪು ಗುಳ್ಳೆ ಯಾಗಲು ಕರಣವಾಗುತ್ತದೆ, ಅದು ನಿರಂತರವಾಗಿ ತುರಿಕೆಯನ್ನು ಉಂಟುಮಾಡುವುದರಿಂದ ಕಿರಿಕಿರಿ ಉಂಟಾಗುತ್ತದೆ. ಇದು ದುರ್ಬಲವಾದ ಚರ್ಮವಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ಚರ್ಮವನ್ನು ತೇವವಾಗಿಡುವುದು. ಇದರ ಹೊರತಾಗಿ ನೀವು ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಜೊತೆಗೆ ಅವರ ಅಭಿಪ್ರಾಯಗಳನ್ನು ನಿರ್ಲಕ್ಷ ಮಾಡದಿರಿ.

3. ಪಾದಗಳಲ್ಲಿ ಸೋಂಕು:

ಇದು ಸಾಮಾನ್ಯ ಮಾನ್ಸೂನ್ ಸೋಂಕಾಗಿದ್ದು, ಗುಳ್ಳೆಗಳು, ಕಾಲ್ಬೆರಳ ಉಗುರುಗಳ ಮೇಲೆ ದಪ್ಪದಾದ ಹಳದಿ ತೇಪೆಗಳನ್ನು ಉಂಟುಮಾಡುತ್ತದೆ. ಜೊತೆಗೆ ಪಾದಗಳಲ್ಲಿ ಬಿರುಕುಗಳು ಉಂಟಾಗುತ್ತವೆ ಮತ್ತು ಸಾಕಷ್ಟು ತುರಿಕೆಗೆ ಕಾರಣವಾಗುತ್ತವೆ. ಇದು ಇನ್ನಷ್ಟು ಹದಗೆಡಬಹುದು ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು. ಹಾಗಾಗಿ ಇದನ್ನು ತಡೆಗಟ್ಟುವ ಸುಲಭ ಮಾರ್ಗವೆಂದರೆ ಪಾದಗಳನ್ನು ಶುಷ್ಕವಾಗಿಡುವುದು ಮತ್ತುಇದಕ್ಕೆ ಸಿಗುವ ಔಷಧ ವನ್ನು ಸರಿಯಾಗಿ ಬಳಸುವುದು. ಅದ್ಕಕಿಂತ ಮೊದಲು ವೈದ್ಯರ ಸಲಹೆಯನ್ನು ಅನುಸರಿಸುವುದನ್ನು ಮರೆಯದಿರಿ.

4. ಹೈಪರ್ಪಿಗ್ಮೆಂಟೇಶನ್:

ಮಾನ್ಸೂನ್ ಋತುವಿಗೆ ಸನ್ಸ್ಕ್ರೀನ್ ಅಗತ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಇದು ತಪ್ಪು ಕಲ್ಪನೆ. ಪ್ರತೀ ಋತುವಿನಲ್ಲಿಯೂ ನಿಮಗೆ ಸನ್ ಸ್ಕ್ರೀನ್ ಅಗತ್ಯವಿರುತ್ತದೆ. ಹಾಗಾಗಿ ಒಂದೊಳ್ಳೆ ಬ್ರಾಂಡ್ ನ ಸನ್ಸ್ಕ್ರೀನ್ ಖರೀದಿಸಿ, ಪ್ರತಿದಿನ ಸರಿಯಾಗಿ ಬಳಸಿ.

ಇದನ್ನೂ ಓದಿ: ಈ ಆಹಾರಗಳು ನಿಮ್ಮ ಮುಖದಲ್ಲಿ ಮೊಡವೆ ಹುಟ್ಟಲು ಕಾರಣವಾಗಬಹುದು

5. ಫೋಲಿಕ್ಯುಲಿಟಿಸ್ (ಕೂದಲಿನ ಬುಡದ (ರಂಧ್ರ) ಮೇಲೆ ಪರಿಣಾಮ ಬೀರುವ ಒಂದು ಸೋಂಕು):

ಮಳೆಗಾಲದಲ್ಲಿ ಕೂದಲು ಹುಟ್ಟುವ ಜಾಗ ಅಥವಾ ರಂಧ್ರ ಮುಚ್ಚಿ, ಅದು ಉರಿಯೂತಕ್ಕೆ ಒಳಗಾಗಿ ಚರ್ಮದ ಮೇಲ್ಮೈಯಲ್ಲಿ ಸಣ್ಣ ಉಬ್ಬುಗಳಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿದ್ದರರೂ ನಿರ್ಲಕ್ಷಿಸಬಾರದು. ಏಕೆಂದರೆ ಬಳಿಕ ಅವು ಕೀವು ತುಂಬಿದ ಗುಳ್ಳೆಗಳಾಗಬಹುದು. ಈ ಸ್ಥಿತಿಯನ್ನು ತಪ್ಪಿಸಲು ಸುಲಭ ಮಾರ್ಗವೆಂದರೆ ಚರ್ಮದ ರಂಧ್ರಗಳನ್ನು ಸ್ವಚ್ಛವಾಗಿಡುವುದು.

ಮಳೆಗಾಲದಲ್ಲಿ ಈ ಸಾಮಾನ್ಯ ಚರ್ಮದ ಸಮಸ್ಯೆಯನ್ನು ತಡೆಯುವುದು ಹೇಗೆ? ನಿಮಗೆ ಸಹಾಯ ಮಾಡುವ ಈ ಸಲಹೆಗಳನ್ನು ಅನುಸರಿಸಿ.

1. ಒದ್ದೆಯಾದ ನೆತ್ತಿ ಮತ್ತು ಚರ್ಮವು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿವೆ ಹಾಗೂ ಚರ್ಮದ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಆದ್ದರಿಂದ ನೆತ್ತಿಯನ್ನು ಒದ್ದೆ ಮಾಡದೇ ಆದಷ್ಟು ಒಣಗಿರುವಂತೆ ನೋಡಿಕೊಳ್ಳಿ.

2. ಇದು ಪಾದಗಳಿಗೂ ಸಹ ಅನ್ವಯಿಸುತ್ತದೆ. ಒದ್ದೆಯಾಗಿರುವ ಪಾದಗಳನ್ನು ಚೆನ್ನಾಗಿ ಒರೆಸಿಕೊಳ್ಳಿ. ಜೊತೆಗೆ ಒದ್ದೆಯಾದ ಬೂಟುಗಳು ಅಥವಾ ಸಾಕ್ಸ್ ಗಳೊಂದಿಗೆ ಎಲ್ಲೆಂದರಲ್ಲಿ ತಿರುಗಾಡಬೇಡಿ ಏಕೆಂದರೆ ಇದು ಬಹುಬೇಗ ಸೋಂಕುಗಳಿಗೆ ಕಾರಣವಾಗಬಹುದು.

3. ಸೋಪ್ ಮುಕ್ತ ಕ್ಲೆನ್ಸರ್ ಬಳಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಮುಖವನ್ನು ತೊಳೆಯಿರಿ.

4. ಮುಖ ತೊಳೆದ ನಂತರ ಟೋನರ್ ಬಳಸಿ.

5. ಸೌತೆಕಾಯಿ, ಅಲೋವೆರಾ ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುವ ಉತ್ತಮ ಜೆಲ್ ಆಧಾರಿತ ಮಾಯಿಶ್ಚರೈಸರ್ ಬಳಸಿ.

6. ನಿಯಮಿತವಾಗಿ ನೀರು ಕುಡಿಯುವ ಮೂಲಕ ಹೈಡ್ರೇಟ್ ಆಗಿರಿ. ಒಳಗಿನಿಂದ ಹೈಡ್ರೇಟ್ ಆಗಿರುವ ಚರ್ಮವು ಹೊರಗಿನಿಂದ ಶೈನ್ ಆಗುತ್ತದೆ.

7. ಮಲಗುವ ಮೊದಲು ಮೇಕಪ್ ತೆಗೆಯುವುದನ್ನು ಮರೆಯಬೇಡಿ. ಚರ್ಮ ಅಂದವಾಗಿರಲು ಪುಡಿ ಆಧಾರಿತ ಮೇಕಪ್ ಉತ್ಪನ್ನಗಳನ್ನು ಬಳಸಿ.

8. ಸ್ನಾನ ಮಾಡುವಾಗ ಅಥವಾ ಬೇರೆ ಸಮಯದಲ್ಲಿಯೂ ಚರ್ಮವನ್ನು ಬಿಸಿ ನೀರಿನಿಂದ ತೊಳೆಯುವುದನ್ನು ತಪ್ಪಿಸಿ.

9. ಇನ್ನು ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಕೃತಕ ಆಭರಣಗಳನ್ನು ಧರಿಸುವುದನ್ನು ತಪ್ಪಿಸುವುದು ಒಳ್ಳೆಯದು.

ಈ ಸಲಹೆಗಳು ಸಹಾಯ ಮಾಡದಿದ್ದರೆ, ಮಳೆಗಾಲದಲ್ಲಿ ಈ ಸಾಮಾನ್ಯ ಚರ್ಮದ ಸಮಸ್ಯೆಗಳಿಗೆ ವಿದಾಯ ಹೇಳಲು ಚರ್ಮರೋಗ ತಜ್ಞರನ್ನು ಭೇಟಿ ಮಾಡುವುದನ್ನು ಮರೆಯಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ