Attractive Personality: ಮಹಿಳೆಯರ ವ್ಯಕ್ತಿತ್ವವನ್ನು ಆಕರ್ಷಕವಾಗಿ ರೂಪಿಸುವ ಕೆಲವು ಅಭ್ಯಾಸಗಳು

ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವುದು ಬಹಳ ಮುಖ್ಯ. ಕೇವಲ ಫ್ಯಾಷನ್ ಮಾತ್ರವಲ್ಲದೆ ನಮ್ಮ ನಡವಳಿಕೆಗಳು ಮತ್ತು ಮನಸ್ಥಿತಿಗಳು ಕೂಡ ನಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಹೀಗಿರುವಾಗ ಮಹಿಳೆಯರು ತಮ್ಮ ದಿನಚರಿಯಲ್ಲಿ ಕೆಲವು ಅಭ್ಯಾಸಗಳನ್ನು ಸೇರಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಸುಧಾರಿಸಬಹುದು.

Attractive Personality: ಮಹಿಳೆಯರ ವ್ಯಕ್ತಿತ್ವವನ್ನು ಆಕರ್ಷಕವಾಗಿ ರೂಪಿಸುವ ಕೆಲವು ಅಭ್ಯಾಸಗಳು
Attractive Personality
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Jul 23, 2023 | 10:36 AM

ಮಹಿಳೆಯರು ತಮ್ಮ ಆಕರ್ಷಕ ನೋಟವನ್ನು ಹೆಚ್ಚಿಸಲು ಅತ್ಯುತ್ತಮ ಡ್ರೆಸ್ಸಿಂಗ್ ಸೆನ್ಸ್, ಹಾಗೂ ಇತರೆ ಫ್ಯಾಷನ್ ಜ್ಞಾನ ಇದ್ದರೆ ಸಾಕು ಎಂದು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಬದಲಾಗಿ ನಿಮ್ಮ ಕೆಲವು ಅಭ್ಯಾಸಗಳು, ನಡವಳಿಕೆಗಳು ಕೂಡಾ ನಿಮ್ಮ ವ್ಯಕ್ತಿತ್ವನ್ನು ಆಕರ್ಷಕವಾಗಿ ರೂಪಿಸುತ್ತದೆ. ಸೌಂದರ್ಯವೊಂದೇ ಆಕರ್ಷಣೆಯ ಕೇಂದ್ರವಲ್ಲ. ನಿಮ್ಮ ಒಳ್ಳೆಯ ವ್ಯಕ್ತಿತ್ವ ಕೂಡಾ ಇತರ ಜನರ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಸುಂದರ ವ್ಯಕ್ತಿತ್ವನ್ನು ರೂಪಿಸಲು ಕೆಲವೊಂದು ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಬೇಕು.

ಮಹಿಳೆಯರ ವ್ಯಕ್ತಿತ್ವನ್ನು ಆಕರ್ಷಕವಾಗಿ ರೂಪಿಸಲು ಸಹಕಾರಿಯಾಗುವ ಕೆಲವೊಂದು ಅಭ್ಯಾಸಗಳು:

ಸಕಾರಾತ್ಮಕ ಚಿಂತನೆಗಳನ್ನು ಇಟ್ಟುಕೊಳ್ಳಿ:

ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದರೆ, ನಿಮ್ಮ ವ್ಯಕ್ತಿತ್ವವೂ ಕೂಡಾ ಆಕರ್ಷಕವಾಗಿ ಕಾಣುತ್ತದೆ. ಯಾವಾಗಲೂ ನಿಮ್ಮ ಶಕ್ತಿಯ ಮೇಲೆ ನೀವು ನಂಬಿಕೆ ಇಡಿ ಮತ್ತು ಧನಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿ. ಇದು ನಿಮಗೆ ಮನಸ್ಸಿನಿಂದ ಸಂತೋಷದ ಭಾವನೆಯನ್ನು ನೀಡುತ್ತದೆ. ಅದೇ ಸಮಯದಲ್ಲಿ ಆ ಸಂತೋಷವು ನಿಮ್ಮ ವ್ಯಕ್ತಿತ್ವದ ಮೇಲೆ ಪ್ರತಿಫಲಿಸುತ್ತದೆ.

ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸಿ:

ಸೌಜನ್ಯದ ವರ್ತನೆ ಮತ್ತು ಮನಸ್ಸಿನಲ್ಲಿ ದಯೆಯ ಭಾವನೆಯನ್ನು ಹೊಂದಿರುವ ಅಂಶವು ಕೂಡಾ ನಿಮ್ಮ ವ್ಯಕ್ತಿತ್ವನ್ನು ಆಕರ್ಷಕವಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ, ಅವರೊಂದಿಗೆ ಸಹಾನೂಭೂತಿಯಿಂದ ನಡೆದುಕೊಳ್ಳಿ, ಮತ್ತು ಮೃದುವಾದ ಮಾತುಗಳನ್ನಾಡಿ. ಖಂಡಿತವಾಗಿಯೂ ಈ ನಿಮ್ಮ ಸಕರಾತ್ಮಕ ಗುಣವು ನಿಮ್ಮ ವ್ಯಕ್ತಿತ್ವನ್ನು ಸುಂದರವನ್ನಾಗಿ ರೂಪಿಸುವಲ್ಲಿ ಯಾವುದೇ ಸಂಶಯವಿಲ್ಲ.

ಯಾವಾಗಲೂ ಮುಖದಲ್ಲಿ ಮುಗುಳ್ನಗೆಯಿರಲಿ:

ಮುಖದಲ್ಲಿ ಯಾವಾಗಲೂ ಒಂದು ಸಣ್ಣ ನಗುವಿರಲಿ. ಈ ನಗು ನಿಮ್ಮನ್ನು ಇನ್ನಷ್ಟು ಸುಂದರವನ್ನಾಗಿಸುತ್ತದೆ. ಒಂದು ನಗುವಿಗೆ ಎಲ್ಲರನ್ನು ಆಕರ್ಷಿಸುವ ಶಕ್ತಿಯಿದೆ. ಕಛೇರಿಯಲ್ಲಾಗಲಿ ಅಥವಾ ಹೊರಗಡೆ, ಇತರರನ್ನು ಕಂಡಾಗ ಒಂದು ಸಣ್ಣ ಮುಗುಳ್ನಗೆಯನ್ನು ಬೀರಿ. ಈ ನಿಮ್ಮ ನಗು ಇತರರನ್ನು ಆಕರ್ಷಿಸುತ್ತದೆ ಮತ್ತು ಅವರಲ್ಲಿ ನಿಮ್ಮ ಬಗ್ಗೆ ಧನಾತ್ಮಕ ಭಾವನೆ ಮೂಡುತ್ತದೆ.

ಇದನ್ನೂ ಓದಿ: ಕಣ್ಣಿನ ಕೆಳಗಿರುವ ಕಪ್ಪು ಕಲೆಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಪ್ರತಿಯೊಂದು ಕೆಲಸದಲ್ಲೂ ಕ್ರಿಯಾಶೀಲರಾಗಿರಿ:

ದಿನನಿತ್ಯದ ಕೆಲಸದಲ್ಲಿ ಕ್ರಿಯಾಶೀಲರಾಗಿರಿ ಮತ್ತು ಆತ್ಮವಿಶ್ವಾಸದಿಂದ ಕಾರ್ಯವನ್ನು ನಿರ್ವಹಿಸಿ. ನಿಮ್ಮ ಆತ್ಮವಿಶ್ವಾಸವು ನಿಮ್ಮ ವ್ಯಕ್ತಿತ್ವನ್ನು ಆಕರ್ಷಕವಾಗಿ ಕಾಣಲು ಸಹಾಯ ಮಾಡುತ್ತದೆ. ಇದು ಜನರ ಮೇಲೆ ನೀವು ಉತ್ತಮ ಪ್ರಭಾವ ಬೀರಲು ಸಹಕಾರಿಯಾಗಿದೆ.

ಪ್ರಾಮಾಣಿಕತೆ ಮುಖ್ಯ:

ನಿಮ್ಮ ಮನೋಭಾವವನ್ನು ಪ್ರಾಮಾಣಿಕವಾಗಿಟ್ಟುಕೊಳ್ಳುವುದು ಮುಖ್ಯ. ನೀವು ಪ್ರಾಮಾಣಿಕರಾಗಿದ್ದಾಗ, ನಿಮ್ಮ ವ್ಯಕ್ತಿತ್ವವೂ ಸಹ ಸುಂದರವಾಗಿರುತ್ತದೆ.

ನಿಮ್ಮ ಬಗ್ಗೆ ಕಾಳಜಿ ವಹಿಸಿ:

ಅನೇಕ ಬಾರಿ ಮಹಿಳೆಯರು ಕುಟುಂಬ ಮತ್ತು ಕಛೇರಿ ಕೆಲಸದ ಕಾರಣದಿಂದಾಗಿ ತಮ್ಮನ್ನು ತಾವು ನಿರ್ಲಕ್ಷಿಸುತ್ತಾರೆ. ಹೀಗಿರುವಾಗ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಮುಖ್ಯವಾಗಿದೆ. ಏಕೆಂದರೆ ನಿಮ್ಮ ಸ್ವಯಂ ಪ್ರೀತಿಯ ಮನೋಭಾವವೂ ಕೂಡ ನಿಮ್ಮ ವ್ಯಕ್ತಿತ್ವವನ್ನು ಸುಂದರವನ್ನಾಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:35 am, Sun, 23 July 23

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ