AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dark Circles: ಕಣ್ಣಿನ ಕೆಳಗಿರುವ ಕಪ್ಪು ಕಲೆಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಕಣ್ಣುಗಳ ಕೆಳಗೆ ಕಪ್ಪಾಗಿದ್ದರೆ, (ಡಾರ್ಕ್ ಸರ್ಕಲ್) ಆ ಕಣ್ಣು ಅಂದವಾಗಿ ಕಾಣಲಾರದು. ಹಾಗಾಗಿ ನಿಮ್ಮ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳಾಗದಂತೆ ತಡೆಯಲು ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ. ಈ ಬಗ್ಗೆ ಇಲ್ಲಿದೆ ಮಾಹಿತಿ.

Dark Circles: ಕಣ್ಣಿನ ಕೆಳಗಿರುವ ಕಪ್ಪು ಕಲೆಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು
ಸಾಂದರ್ಭಿಕಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 22, 2023 | 3:40 PM

Share

ನಿಮ್ಮ ಕಣ್ಣಿನ ಕೆಳಗೆ ಕಪ್ಪಾಗಿದ್ದರೆ ಅದಕ್ಕೆ ಕಾರಣ ಆನುವಂಶಿಕತೆ, ನಿದ್ರೆಯ ಕೊರತೆ, ಒತ್ತಡ ಮತ್ತು ನಿರ್ಜಲೀಕರಣ ಸೇರಿದಂತೆ ವಿವಿಧ ಅಂಶಗಳಿಂದ ಈ ರೀತಿ ಉಂಟಾಗುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ಇದಕ್ಕೆ ಪರಿಹಾರವೆಂಬಂತೆ ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಕಪ್ಪು ವಲಯಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಆಗದಿದ್ದರೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಆ ಕಪ್ಪು ಕಲೆಗಳನ್ನು ಕಡಿಮೆ ಮಾಡುವುದರೊಂದಿಗೆ ನಿಮ್ಮ ಕಣ್ಣುಗಳು ಅಂದವಾಗಿ ಕಾಣುವಂತೆ ಮಾಡುತ್ತದೆ. ಡಾರ್ಕ್ ಸರ್ಕಲ್ ತಡೆಯಲು ಸಹಾಯ ಮಾಡುವ ಕೆಲವು ಅಡುಗೆ ಮನೆ ಪರಿಹಾರಗಳು ಇಲ್ಲಿವೆ:

ಸೌತೆಕಾಯಿ ಚೂರುಗಳು: ನಿಮ್ಮ ಕಣ್ಣುಗಳ ಮೇಲೆ ಕಪ್ಪಾಗಿರುವ ವಲಯಗಳ ಮೇಲೆ ತಣ್ಣಗಿನ ಸೌತೆಕಾಯಿ ತುಂಡುಗಳನ್ನು ಇರಿಸಿ. ಸುಮಾರು 10-15 ನಿಮಿಷಗಳ ಕಾಲ ಹಾಗೇ ಬಿಡಿ. ಸೌತೆಕಾಯಿಗಳು ನಿಮ್ಮ ಕಣ್ಣುಗಳನ್ನು ತಂಪಾಗಿಸುತ್ತವೆ ಮತ್ತು ಕಣ್ಣು ಉಬ್ಬಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಚರ್ಮವನ್ನು ಹಗುರಗೊಳಿಸುತ್ತದೆ.

ಆಲೂಗೆಡ್ಡೆ ಚೂರುಗಳು ಅಥವಾ ಅದರ ರಸ: ಸೌತೆಕಾಯಿಯಂತೆಯೇ, ನೀವು ತಂಪಾದ ಆಲೂಗಡ್ಡೆ ತುಂಡುಗಳನ್ನು ನಿಮ್ಮ ಕಣ್ಣುಗಳ ಮೇಲೆ ಇರಿಸಬಹುದು ಅಥವಾ ಆಲೂಗಡ್ಡೆ ರಸವನ್ನು ಮಾಡಿಕೊಂಡು ಕಪ್ಪು ವೃತ್ತಗಳಿರುವಲ್ಲಿ ಸರಿಯಾಗಿ ಹಚ್ಚಬಹುದು. ಆದರೆ ಹಚ್ಚಿ ತೊಳೆಯುವ ಮೊದಲು 10-15 ನಿಮಿಷಗಳ ಕಾಲ ಹಾಗೇ ಬಿಡಿ.

ಟೊಮೆಟೊ ರಸ: ಒಂದು ಟೀ ಸ್ಪೂನ್ ಟೊಮೆಟೊ ರಸವನ್ನು ಕೆಲವು ಹನಿ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಪ್ಪು ವರ್ತುಲಗಳ ಸುತ್ತಲೂ ಹಚ್ಚಿಕೊಳ್ಳಿ ಮತ್ತು ತೊಳೆಯುವ ಮೊದಲು 10 ನಿಮಿಷಗಳ ಕಾಲ ಹಾಗೇ ಬಿಡಿ. ಟೊಮೆಟೊಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಮತ್ತು ಚರ್ಮವನ್ನು ಹಗುರಗೊಳಿಸಿ, ಚರ್ಮ ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ.

ಗ್ರೀನ್ ಟೀ ಬ್ಯಾಗ್​​ಗಳು: ಎರಡು ಗ್ರೀನ್ ಟೀ ಬ್ಯಾಗ್​​​ಗಳನ್ನು ಕೆಲವು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಮುಳುಗಿಸಿ, ನಂತರ ಅವು ತಣ್ಣಗಾಗುವವರೆಗೆ ಫ್ರಿಡ್ಜ್​​​​ನಲ್ಲಿಡಿ. ತಣ್ಣಗಾದ ಚಹಾದ ಬ್ಯಾಗ್​​ಗಳನ್ನು ಕಣ್ಣು ಮುಚ್ಚಿ, ಬಳಿಕ ಕಪ್ಪು ವರ್ತುಲಗಳ ಮೇಲೆ ಸುಮಾರು 15 ನಿಮಿಷಗಳ ಕಾಲ ಇರಿಸಿಕೊಳ್ಳಿ.

ಹಾಲು ಮತ್ತು ಅರಿಶಿನ ಪೇಸ್ಟ್: ಒಂದು ಚಿಟಿಕೆ ಅರಿಶಿನವನ್ನು ಕೆಲವು ಹನಿ ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಕಪ್ಪು ವರ್ತುಲಗಳಿಗೆ ಹಚ್ಚಿ ಮತ್ತು ತೊಳೆಯುವ ಮೊದಲು 10-15 ನಿಮಿಷಗಳ ಕಾಲ ಬಿಡಿ.

ಇದನ್ನೂ ಓದಿ:ಡಾರ್ಕ್ ಸರ್ಕಲ್ಸ್​ ಬರಲು ಕಾರಣವೇನು? ಜೀವನಶೈಲಿಯೋ..ಅನುವಂಶಿಕ ಸಮಸ್ಯೆಯೋ?

ಬಾದಾಮಿ ಎಣ್ಣೆ: ಮಲಗುವ ಮೊದಲು ನಿಮ್ಮ ಕಣ್ಣುಗಳ ಸುತ್ತಲೂ ಕೆಲವು ಹನಿ ಬಾದಾಮಿ ಎಣ್ಣೆಯನ್ನು ನಿಧಾನವಾಗಿ ಹಚ್ಚಿಕೊಳ್ಳುತ್ತಾ ಮಸಾಜ್ ಮಾಡಿ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೆ ಇದ್ದು, ಇದು ಕಾಲಾನಂತರದಲ್ಲಿ ಕಪ್ಪು ವರ್ತುಲಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ.

ರೋಸ್ ವಾಟರ್: ಹತ್ತಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ನೆನೆಸಿಡಿ. ಎರಡು ನಿಮಿಷದ ಬಳಿಕ ನೀವು ಕಣ್ಣು ಮುಚ್ಚಿಕೊಂಡು ಅವುಗಳನ್ನು ಕಪ್ಪಾಗಿರುವ ಜಾಗದ ಮೇಲೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. 10-15 ನಿಮಿಷಗಳ ಕಾಲ ಇರಿಸಿಕೊಂಡು ಬಳಿಕ ಮುಖ ತೊಳೆಯಿರಿ. ರೋಸ್ ವಾಟರ್ ಹಿತವಾದ ಗುಣಗಳನ್ನು ಹೊಂದಿರುವುದರಿಂದ ಕಣ್ಣು ಉಬ್ಬಿಕೊಳ್ಳುವುದನ್ನು ಕಡಿಮೆ ಮಾಡುವುದರ ಜೊತೆಗೆ ಚರ್ಮದಲ್ಲಿ ತಾಜಾತನ ಮೂಡಿಸಲು ಸಹಾಯ ಮಾಡುತ್ತದೆ.

ಕೋಲ್ಡ್ ಮಿಲ್ಕ್ ಕಂಪ್ರೆಸ್: ಹತ್ತಿ ಪ್ಯಾಡ್​​ಗಳನ್ನು ತಣ್ಣನೆಯ ಹಾಲಿನಲ್ಲಿ ನೆನೆಸಿ ಮತ್ತು ಅವುಗಳನ್ನು ಕಣ್ಣು ಮುಚ್ಚಿಕೊಂಡು ಅದರ ಮೇಲೆ 10-15 ನಿಮಿಷಗಳ ಕಾಲ ಇರಿಸಿಕೊಂಡು ಮಸಾಜ್ ಮಾಡಿಕೊಳ್ಳಿ. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಇದು ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡಲು ಮತ್ತು ಹೊಳಪು ನೀಡಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ