ಅಗಸೆ ಬೀಜದಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಇದು ನಿಮ್ಮ ಚರ್ಮದ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಜೊತೆಗೆ ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಮದ್ಧವಾಗಿದೆ. ಆದ್ದರಿಂದ ಆರೋಗ್ಯಕರವಾದ ಈ ಪಾಕ ವಿಧಾನವನ್ನು ಪ್ರಯತ್ನಿಸಿ. ಈ ಸಿಹಿ ಪಾಕವಿಧಾನವನ್ನು ಹುರಿದ ಓಟ್ಸ್, ಪೀನಟ್ ಬಟರ್, ಅಗಸೆ ಬೀಜಗಳು, ತೆಂಗಿನ ತುರಿ ಮತ್ತು ಡಾರ್ಕ್ ಚಾಕೊಲೇಟ್ ಬಳಸಿ ತಯಾರಿಸಲಾಗುತ್ತದೆ. ಇದನ್ನು ಮಕ್ಕಳಂತೂ ಖಂಡಿತಾ ಇಷ್ಟಪಡುತ್ತಾರೆ. ನೀವು ಸಾಮಾನ್ಯ ಸಿಹಿತಿಂಡಿಗಳಿಂದ ಬೇಸರಗೊಂಡಿದ್ದರೆ, ಮುಂದಿನ ಹಬ್ಬಕ್ಕೆ ಈ ಹೊಸ ರೆಸಿಪಿಯನ್ನು ಪ್ರಯತ್ನಿಸಿ. ಇದರಲ್ಲಿ ಫೈಬರ್ ಮತ್ತು ಪ್ರೊಟೀನ್‌ನಗಳು ಹೇರಳವಾಗಿದ್ದು, ಇದು ಆರೋಗ್ಯಕರ ಜೀವನಶೈಲಿಗೆ ಉತ್ತಮ ಆಯ್ಕೆಯಾಗಿದೆ.
2 ಕಪ್ ಓಟ್ಸ್
1 ಕಪ್ ಅಗಸೆ ಬೀಜಗಳು
1/2 ಕಪ್ ಜೇನುತುಪ್ಪ
3 ಚಮಚ ವೆನಿಲ್ಲಾ ಎಸೆನ್ಸ್
12 ಚಮಚ ಡಾರ್ಕ್ ಚಾಕೊಲೇಟ್ ಚಿಪ್ಸ್
1 ಕಪ್ ತೆಂಗಿನ ತುರಿ
1 ಕಪ್ ಪೀನಟ್ ಬಟರ್
ಇದನ್ನೂ ಓದಿ: ರುಚಿಯಾದ ಸ್ಟೀಮ್ಡ್ ಕಾರ್ನ್ ಬಾಲ್ ತಯಾರಿಸಿ
ಹಂತ 1: ಪ್ಯಾನ್ ತೆಗೆದುಕೊಂಡು ಅದಕ್ಕೆ ಓಟ್ಸ್ ಹಾಕಿ ಮಧ್ಯಮ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿ. ನಂತರ ಓಟ್ಸ್ ತೆಗೆದು ಅಗಸೆ ಬೀಜಗಳನ್ನು ಹುರಿಯಿರಿ. ನಂತರ, ಮಧ್ಯಮ ಗಾತ್ರದ ಬೌಲ್ ತೆಗೆದುಕೊಂಡು ಅದರಲ್ಲಿ ವೆನಿಲ್ಲಾ ಎಸೆನ್ಸ್, ಪೀನಟ್ ಬಟರ್ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಬಟ್ಟಲಿನಲ್ಲಿ ತೆಂಗಿನ ಕಾಯಿ ತುರಿ, ಅಗಸೆ ಬೀಜಗಳು ಮತ್ತು ಡಾರ್ಕ್ ಚಾಕೊಲೇಟ್ ಚಿಪ್ಸ್ ಸೇರಿಸಿ. ಈಗ ಓಟ್ಸ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಹಂತ 2: ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಮತ್ತು ಈ ಮಿಶ್ರಣವನ್ನು 25 ನಿಮಿಷಗಳ ರೆಫ್ರಿಜರೇಟರ್ನಲ್ಲಿ ಇರಿಸಿ. ನಂತರ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ. ಈಗ ಆರೋಗ್ಯಕರ ಓಟ್ಸ್ ಮತ್ತು ಅಗಸೆ ಬೀಜದ ಲಡ್ಡು ಸಿದ್ದವಾಗಿದೆ. ನೀವು ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಬಯಸಿದರೆ ಒಣದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:58 pm, Sun, 29 January 23