Quick and Easy Recipes: ರುಚಿಯಾದ ಸ್ಟೀಮ್ಡ್ ಕಾರ್ನ್ ಬಾಲ್ ತಯಾರಿಸಿ

ನೀವು ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಸ್ಟೀಮ್ಡ್ ಕಾರ್ನ್ ಬಾಲ್ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಕೇವಲ ಬೆರಳೆಣೆಕೆಯಷ್ಟು ಪದಾರ್ಥಗಳನ್ನು ಬಳಸಿ ನೀವು ಇದನ್ನು ತಯಾರಿಸಬಹುದಾಗಿದೆ.

Quick and Easy Recipes: ರುಚಿಯಾದ ಸ್ಟೀಮ್ಡ್ ಕಾರ್ನ್ ಬಾಲ್ ತಯಾರಿಸಿ
Image Credit source: times food
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Jan 29, 2023 | 7:30 AM

ಚಳಿಗಾಲ ಸಮಯದಲ್ಲಿ ಆಹಾರದ ಕಡು ಬಯಕೆಗಳು ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಕ್ಯಾಲೋರಿ ಭರಿತ ಆಹಾರವನ್ನು ಸೇವಿಸುವ ಬದಲಾಗಿ ಆರೋಗ್ಯಕರ ಹಾಗೂ ರುಚಿಕರವಾದ ಆಹಾರವನ್ನು ಸವಿಯಿರಿ. ನೀವು ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಸ್ಟೀಮ್ಡ್ ಕಾರ್ನ್ ಬಾಲ್ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಕೇವಲ ಬೆರಳೆಣೆಕೆಯಷ್ಟು ಪದಾರ್ಥಗಳನ್ನು ಬಳಸಿ ನೀವು ಇದನ್ನು ತಯಾರಿಸಬಹುದಾಗಿದೆ. ಇದರಲ್ಲಿ ದೇಹಕ್ಕೆ ಪೌಷ್ಟಿಕಾಂಶಗಳನ್ನು ನೀಡುವ ಪದಾರ್ಥಗಳನ್ನು ಬಳಸಲಾಗುವುದರಿಂದ ಮಕ್ಕಳಿಗೂ ನೀಡಬಹುದಾಗಿದೆ. ಸಂಜೆಯ ಬಿಸಿ ಬಿಸಿ ಚಹಾದ ಸಮಯದಲ್ಲಿ ನೀವು ಇದನ್ನು ಸವಿಯಬಹುದಾಗಿದೆ. ಇದರ ಜೊತೆಗೆ ನಿಮ್ಮ ಮನೆಗೆ ಸ್ನೇಹಿತರು, ಸಂಬಂಧಿಗಳು ಭೇಟಿ ನೀಡಿದಾಗ ಸ್ಟೀಮ್ಡ್ ಕಾರ್ನ್ ಬಾಲ್ ತಯಾರಿಸಿ, ಸವಿಯಲು ನೀಡಿ.

ಸ್ಟೀಮ್ಡ್ ಕಾರ್ನ್ ಬಾಲ್ ರೆಸಿಪಿ:

ಬೇಕಾಗುವ ಪದಾರ್ಥಗಳು:

500 ಗ್ರಾಂ ಕಾರ್ನ್ 2 ತುಂಡು ನಿಂಬೆ ಹುಲ್ಲು 1 ಚಮಚ ನಿಂಬೆ ರಸ 1/2 ಚಮಚ ಬೇಕಿಂಗ್ ಪೌಡರ್ ಅಗತ್ಯವಿರುವಷ್ಟು ಕರಿಮೆಣಸು 50 ಮಿಲಿ ಗ್ರೀನ್​​ ಕರಿ ಪೇಸ್ಟ್ 50 ಗ್ರಾಂ ತೆಂಗಿನ ಹಾಲಿನ ಪುಡಿ 100 ಗ್ರಾಂ ಜೋಳದ ಹಿಟ್ಟು ಅಗತ್ಯವಿರುವಷ್ಟು ಉಪ್ಪು

ಸ್ಟೀಮ್ಡ್ ಕಾರ್ನ್ ಬಾಲ್ ಮಾಡುವ ವಿಧಾನ:

ಹಂತ 1 ಜೋಳವನ್ನು ಕುದಿಸಿ ಮತ್ತು ಪೇಸ್ಟ್​​ ಮಾಡಿ:

ಜೋಳವನ್ನು ಕನಿಷ್ಠ 5 ನಿಮಿಷಗಳ ಕಾಲ ಸಾಕಷ್ಟು ನೀರಿನಲ್ಲಿ ಕುದಿಸಿ. ಜೋಳ ಬೆಂದ ನಂತರ ಅದರ ನೀರನ್ನು ಸೋಸಿ. ನಂತರ ಮಿಕ್ಸಿ ಜಾರ್​​ನಲ್ಲಿ ಬೇಯಸಿದ ಜೋಳ ಹಾಕಿ ಪೇಸ್ಟ್ ಮಾಡಿ. ಸಾಧ್ಯವಾದರೆ ಅಮೇರಿಕನ್ ಕಾರ್ನ್ ಬಳಸಲು ಪ್ರಯತ್ನಿಸಿ.

ಹಂತ 2 ಗ್ರೀನ್​ ಪೇಸ್ಟ್ ತಯಾರಿಸಿ:

ನೀವು ಗ್ರೀನ್​​ ಪೇಸ್ಟ್ ತಯಾರಿಸಲು ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿನ ಹಾಗೂ ಕಾಳು ಮೆಣಸಿನ ಹುಡಿ, ಲೆಮನ್ ಗ್ರಾಸ್​​ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ಪೇಸ್ಟ್​ ಮಾಡಿ.

ಇದನ್ನೂ ಓದಿ: ಆರೋಗ್ಯಕರ ಕಡಲೆ ಕ್ಯಾರೆಟ್ ಸೂಪ್ ರೆಸಿಪಿ ಇಲ್ಲಿದೆ

ಹಂತ 3 ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ:

ಒಂದು ಬಟ್ಟಲಿಗೆ ಈಗಾಗಲೇ ತಯಾರಿಸಿಟ್ಟ ಕಾರ್ನ್ ಪೇಸ್ಟ್ ಹಾಕಿ. ನಂತರ ಇದಕ್ಕೆ ತೆಂಗಿನ ಹಾಲಿನ ಪುಡಿ, ಸಣ್ಣದಾಗಿ ಕೊಚ್ಚಿದ ನಿಂಬೆ ಹುಲ್ಲು, ನಿಂಬೆ ರಸ, ಗ್ರೀನ್​​ ಪೇಸ್ಟ್​​, ಜೋಳದ ಹಿಟ್ಟು, ಬೇಕಿಂಗ್ ಪೌಡರ್, ಮೆಣಸು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.

ಹಂತ 4 ಸ್ಟೀಮ್ ಮಾಡಿ:

ಈಗ ಮಿಶ್ರಣದಿಂದ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿ. ಎಲ್ಲಾ ಉಂಡೆಗಳನ್ನು ಒಂದು ತಟ್ಟೆಯಲ್ಲಿ ಇರಿಸಿ ಮತ್ತು ಸ್ಟೀಮ್ ಮಾಡಿ. ಸ್ಟೀಮರ್​​ ಇಲ್ಲದಿದ್ದರೆ, ನೀವು ಇಡ್ಲಿ ಮಾಡುವ ರೀತಿಯಲ್ಲಿಯೇ ಇದನ್ನು ಸ್ಟೀಮ್ ಮಾಡಬಹುದಾಗಿದೆ. 10-12 ನಿಮಿಷಗಳ ಕಾಲ ಸ್ಟೀಮ್ ಮಾಡಿ.

ಹಂತ 5 ಸವಿಯಿರಿ:

ಈಗ ಆರೋಗ್ಯಕರ ರುಚಿಯಾದ ಸ್ಟೀಮ್ಡ್ ಕಾರ್ನ್ ಬಾಲ್‌ಗಳು ಸಿದ್ಧವಾಗಿದೆ. ನಿಮ್ಮ ಇದನ್ನು ಚಟ್ನಿ ಅಥವಾ ಸಾಸ್​​ನೊಂದಿಗೆ ಸವಿಯಬಹುದಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ