ಆಹಾರದಲ್ಲಿನ ನಾರಿನಾಂಶ ಎಂದರೆ ಏನು? ಮಲಬದ್ಧತೆಯಿಂದ ದೂರವಿರಲು ಇದು ಹೇಗೆ ಸಹಕಾರಿಯಾಗಿದೆ
ನಾರಿನಾಂಶ ಎಂದರೆ ಇದು ಸಸ್ಯಜನ್ಯ ಆಹಾರಗಳಾದ ತರಕಾರಿ, ಹಣ್ಣು, ಧಾನ್ಯ. ಉದಾಹರಣೆಗೆ ಬೀನ್ಸ್. ಜೀರ್ಣಕ್ರಿಯೆಗೆ ಈ ನಾರಿನಾಂಶವು ಹೆಚ್ಚು ಒತ್ತು ನೀಡುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.
ಸಾಮಾನ್ಯವಾಗಿ ಜನರಿಗೆ ನಿಮಗಿಷ್ಟವಾದ ಆಹಾರ ಯಾವುದು ಎಂದು ಕೇಳಿದರೆ ಐಸ್ ಕ್ರೀಮ್, ಕ್ಯಾಲೋರಿ ಭರಿತ ಪೇಸ್ಟ್ರಿಗಳು, ಖಾರವಾದ ಚಿಕನ್ ಊಟ, ಇನ್ನಿತರ ಹೆಸರನ್ನು ಹೇಳುತ್ತಾರೆ. ಇನ್ನು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲವು ಮಂದಿ ಮಾತ್ರ ಓಟ್ಸ್, ಮೊಸರು, ಹಣ್ಣು, ತರಕಾರಿಗಳಿಂದ ಮಾಡಿದ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ನಾವು ಸೇವಿಸುವ ಆಹಾರ ಹೇಗಿರಬೇಕು ಮತ್ತು ನಾವು ಈಗ ಸೇವಿಸುತ್ತಿರುವ ಆಹಾರದಲ್ಲಿ ಯಾವೇಲ್ಲಾ ಅಂಶಗಳು ಸೇರಿವೆ, ಇವುಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾವನ್ನು ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ. ಇನ್ನು ಆರೋಗ್ಯಯುತ ಜೀವನಕ್ಕಾಗಿ ನಾರಿನಾಂಶ ಹೆಚ್ಚಾಗಿರುವ ಆಹಾರದ ಸೇವನೆ ಮುಖ್ಯ ಎನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು ಮತ್ತು ಇವುಗಳ ಸೇವನೆಯನ್ನು ಹೆಚ್ಚಿಸಬೇಕು.
ಆಹಾರದಲ್ಲಿ ನಾರಿನಾಂಶ ಎಂದರೇನು? ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ಕ್ಯಾನ್ಸರ್ನಂತಹ ಅಪಾಯವನ್ನು ಎದುರಿಸುತ್ತಿರುವವರು ನಾರಿನಾಂಶ ಭರಿತ ಆಹಾರವನ್ನು ಸೇವಿಸುವುದು ಸೂಕ್ತ. ಇದು ತೂಕವನ್ನು ಸಮತೋಲನದಲ್ಲಿಡಲು ಕೂಡ ಸಹಾಯಕವಾಗಿದೆ. ನಾರಿನಾಂಶ ಎಂದರೆ ಇದು ಸಸ್ಯಜನ್ಯ ಆಹಾರಗಳಾದ ತರಕಾರಿ, ಹಣ್ಣು, ಧಾನ್ಯ. ಉದಾಹರಣೆಗೆ ಬೀನ್ಸ್. ಜೀರ್ಣಕ್ರಿಯೆಗೆ ಈ ನಾರಿನಾಂಶವು ಹೆಚ್ಚು ಒತ್ತು ನೀಡುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.
ಆಹಾರದ ನಾರಿನಾಂಶದಲ್ಲಿ ಎರಡು ವಿಧಗಳಿವೆ ಕರಗುವ ನಾರು ಸಾಮಾನ್ಯವಾಗಿ ನೀರಿನಲ್ಲಿ ಕರಗಬಲ್ಲ ನಾರಿನಾಂಶವನ್ನು ಸೋಲಿಬಲ್ ಫೈಬರ್ ಅಥವಾ ನಾರಿನಾಂಶ ಎಂದು ಕರೆಯುತ್ತಾರೆ. ಇದು ನಮ್ಮ ಹೊಟ್ಟೆ ಖಾಲಿಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆ ಮೂಲಕ ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ಇದು ರಕ್ತದ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಅಲ್ಲದೆ ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಓಟ್ಸ್, ಬಟಾಣಿ, ಬೀನ್ಸ್, ಸೇಬು, ಸಿಟ್ರಸ್ ಹಣ್ಣುಗಳು, ಕ್ಯಾರೆಟ್, ಬಾರ್ಲಿ ಇತ್ಯಾದಿಗಳಲ್ಲಿ ಕರಗುವ ನಾರಿನಾಂಶ ಇರುತ್ತದೆ.
ಕರಗದ ನಾರು ಇದು ನೀರಿನಾಂಶವನ್ನು ಹೀರಿಕೊಂಡು ನಮ್ಮ ಹೊಟ್ಟೆಯಲ್ಲಿರುವ ಆಹಾರವನ್ನು ಮೃದುಗೊಳಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆಗೆ ಒತ್ತು ನೀಡಿ, ನಿಯಮಿತ ಮಲವಿಸರ್ಜನೆಗೆ ನೆರವಾಗುತ್ತದೆ. ಇದರಿಂದ ಮಲಬದ್ಧತೆಯ ಸಮಸ್ಯೆ ಕೂಡ ದೂರವಾಗುತ್ತದೆ. ಗೋಧಿ ಹೊಟ್ಟು, ಬ್ರೆಡ್, ಬೀಜಗಳು, ಕಾಳುಗಳು, ಹಣ್ಣು ಮತ್ತು ತರಕಾರಿಯ ಸಿಪ್ಪೆ, ಆಲೂಗಡ್ಡೆ, ಹೂಕೋಸು ಇವುಗಳಲ್ಲಿ ಕರಗದ ನಾರಿನಾಂಶಗಳಿದೆ.
ಯುಎಸ್ನ ಮೇಯೊ ಕ್ಲಿನಿಕ್ ತಜ್ಞರ ಪ್ರಕಾರ, ಆಹಾರದಲ್ಲಿ ಹೆಚ್ಚಿನ ಫೈಬರ್ ಪದಾರ್ಥಗಳನ್ನು ಸೇರಿಸುವುದರಿಂದ ಹಲವಾರು ಪ್ರಯೋಜನಗಳಿವೆ.
ಕರುಳಿನ ಚಲನೆ ಸುಗಮವಾಗುತ್ತದೆ ಆಹಾರದ ನಾರಿನಾಂಶವು ಮಲದ ತೂಕ ಮತ್ತು ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಮೃದುಗೊಳಿಸುತ್ತದೆ. ಆಗ ಕರುಳುಗಳು ಮಲವನ್ನು ಹೊರಹಾಕುವ ಪ್ರಕ್ರಿಯೆಯು ಸುಲಭವಾಗುತ್ತದೆ. ಅಂದರೆ ಮಲಬದ್ಧತೆಯ ಸಮಸ್ಯೆ ದೂರ ಮಾಡುತ್ತದೆ. ಇನ್ನು ಕೆಲವರು ನೀರಾದ ಅಥವಾ ದ್ರವರೂಪದ ಮಲದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹ ಸಮಸ್ಯೆ ಇರುವವರಿಗೆ ನೀರಿನಾಂಶವನ್ನು ಹೀರಿಕೊಂಡು ಮಲವನ್ನು ಘನವಾಗಿಸಲು ನಾರಿನಾಂಶ ಹೊಂದಿದ ಆಹಾರ ಸಹಕಾರಿಯಾಗಿದೆ.
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಅಧಿಕ ನಾರಿನ ಆಹಾರವು ಕೊಲೊರೆಕ್ಟರಲ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾರಿನಾಂಶ ಭರಿತ ಆಹಾರ ಸಹಾಯಕವಾಗಿದೆ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಬೀನ್ಸ್, ಓಟ್ಸ್, ಅಗಸೆಬೀಜ ಮತ್ತು ಓಟ್ ಹೊಟ್ಟನ್ನು ಸೇರಿಸುವುದರಿಂದ ದೇಹವು ಕೆಲವು ಕರಗುವ ನಾರಿನಂಶವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಫೈಬರ್ ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಒಟ್ಟು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಮತ್ತು ಉರಿಯೂತದಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜತೆಗೆ ಕರಗಬಲ್ಲ ನಾರಿನಾಂಶವು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮಧುಮೇಹ ಇರುವವರಲ್ಲಿ ನಾರಿನಾಂಶ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಕರಗಬಲ್ಲ ನಾರಿನಾಂಶ ಸಕ್ಕರೆಯ ಪ್ರಮಾಣವನ್ನು ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕರಗದ ನಾರಿನಾಂಶ ಒಳಗೊಂಡಿರುವ ಆರೋಗ್ಯಕರ ಆಹಾರವು ಮಧುಮೇಹವನ್ನು ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.
ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಕಾರಿ ನಾರಿನಾಂಶ ಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ ಕಡಿಮೆ ಸೇವಿಸುತ್ತಾರೆ. ನಾರಿನಾಂಶ ಭರಿತ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ಸಮತೋಲನದಲ್ಲಿರುತ್ತದೆ. ಈ ಕಾರಣದಿಂದಾಗಿ ತೂಕ ಇಳಿಸಲು ನಾರಿನಾಂಶ ಸಹಕಾರಿಯಾಗಿದೆ.
ದೀರ್ಘಾಯುಷ್ಯಕ್ಕೆ ಸಹಕಾರಿ ನಾರಿನಾಂಶಯುಕ್ತ ಆಹಾರ ಅದರಲ್ಲೂ ವಿಶೇಷವಾಗಿ ಏಕದಳ ನಾರು ಹೃದಯದ ರಕ್ತನಾಳದ ಕಾಯಿಲೆ ಮತ್ತು ಎಲ್ಲಾ ರೀತಿಯ ಕ್ಯಾನ್ಸರ್ಗಳಿಂದ ನಮ್ಮನ್ನು ದೂರವಾಗಿಸುತ್ತದೆ.
ಇದನ್ನೂ ಓದಿ:
Weight loss Tips: ತೂಕವನ್ನು ಇಳಿಸಲು ದೇಹದಂಡನೆ ಮಾಡುವುದನ್ನು ಬಿಡಿ; ಈ ಸರಳ ಆಹಾರ ಪದ್ಧತಿಯನ್ನು ಅನುಸರಿಸಿ