Peanut and Jaggery Benefits: ಶೇಂಗಾ ಚಿಕ್ಕಿ ತಿನ್ನಲು ಎಷ್ಟು ರುಚಿಯೋ ಆರೋಗ್ಯಕ್ಕೆ ಅಷ್ಟೇ ಪ್ರಯೋಜನವೂ ಇದೆ!

ಹೆಚ್ಚು ಕಬ್ಬಿಣ ಅಂಶವನ್ನು ಹೊಂದಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೃಷ್ಟಿ ಕೂಡಾ ಸುಧಾರಿಸುತ್ತದೆ. ವಿಟಮಿನ್​ ಎ ಯುಕ್ತ ಪೋಷಕಾಂಶವನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ.

Peanut and Jaggery Benefits: ಶೇಂಗಾ ಚಿಕ್ಕಿ ತಿನ್ನಲು ಎಷ್ಟು ರುಚಿಯೋ ಆರೋಗ್ಯಕ್ಕೆ ಅಷ್ಟೇ ಪ್ರಯೋಜನವೂ ಇದೆ!
ಶೇಂಗಾ ಚಿಕ್ಕಿ
Follow us
TV9 Web
| Updated By: shruti hegde

Updated on: Jun 10, 2021 | 12:22 PM

ಶೇಂಗಾ ಚಿಕ್ಕಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಅದರ ರುಚಿ ಸವಿಯದವರೇ ಇಲ್ಲ. ಮನೆಯಲ್ಲಿಯೇ ಸುಲಭದಲ್ಲಿ ಮಾಡುವ ಸಿಹಿತಿಂಡಿಯಿದು. ಶೇಂಗಾವನ್ನು ಹುರಿದು ಬೆಲ್ಲದೊಂದಿಗೆ ಮಿಶ್ರಣ ಮಾಡಿ ಸವಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

ಬೆಲ್ಲ ಮತ್ತು ನೆಲಗಡಲೆ ಅಥವಾ ಶೇಂಗಾ ಪ್ರೊಟೀನ್​​ ಅಂಶವನ್ನು ಒಳಗೊಂಡಿದೆ. ರಂಜಕ, ನಿಯಾಸಿನ್​ ಮತ್ತು ಥಯಾಮಿನ್​ನಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಗರ್ಭಿಣಿಯರು, ಮಕ್ಕಳಿಂದ ಹಿಡಿದು ವಯಸ್ಕರೂ ಕೂಡಾ ಶೇಂಗಾ ಚಿಕ್ಕಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹೆಚ್ಚು ಕಬ್ಬಿಣ ಅಂಶವನ್ನು ಹೊಂದಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೃಷ್ಟಿ ಕೂಡಾ ಸುಧಾರಿಸುತ್ತದೆ. ವಿಟಮಿನ್​ ಎ ಯುಕ್ತ ಪೋಷಕಾಂಶವನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಹಾಗೂ ಪ್ರತಿನಿತ್ಯ ಬೆಲ್ಲವನ್ನು ತಿನ್ನುವುದರಿಂದ ಹೃದಯರೋಗದಿಂದ ದೂರವಿರಬಹುದು. ಬರಿ ಬೆಲ್ಲ ತಿನ್ನಲು ಇಷ್ಟ ಪಡದವರು ನೆಲಗಡಲೆಯಿಂದ(ಶೇಂಗಾ) ತಯಾರಿಸಿದ ಚಿಕ್ಕಿ ಸವಿದು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಶೇಂಗಾ ಚಿಕ್ಕಿ ಸೇವಿಸುವುದರ ಪ್ರಯೋಜನಗಳೇನು? * ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ * ರಕ್ತಹೀನತೆಯ ಸಮಸ್ಯೆಯಿಂದ ಪರಿಹಾರ ಪಡೆಯಬಹುದು * ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ * ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ * ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕ * ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಮತ್ತು ಚರ್ಮ ರೋಗದಿಂದ ದೂರವಿರಬಹುದು

ಸೂಚನೆ: ಆರೋಗ್ಯದಲ್ಲಿ ಏನೇ ಏರು-ಪೇರಾದರೂ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಮತ್ತು ನಿಮ್ಮ ಆರೋಗ್ಯ ಕ್ರಮದ ಕುರಿತಾಗಿ ಅವರಿಂದ ಮಾಹಿತಿ ತಿಳಿಯಿರಿ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಹಾಗಾಗಿ ಯಾವುದೇ ಪದಾರ್ಥವಾಗಲಿ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹಿತ-ಮಿತವಾಗಿ ಆಹಾರ ಸೇವಿಸಿ ಆರೋಗ್ಯದ ಸಮಸ್ಯೆಗಳಿಂದ ದೂರವಿರಿ.

ಇದನ್ನೂ ಓದಿ:

Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್