Health Tips: ಹಾಲಿನ ಜತೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಒಗ್ಗುವುದಿಲ್ಲ. ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಆಹಾರ ಪದ್ಧತಿ ಇರಬೇಕು. ಹೀಗಿರುವಾಗ ನಿಮ್ಮ ದೇಹಕ್ಕೆ ಒಗ್ಗುವ ಆಹಾರ ಪದಾರ್ಥದ ಕುರಿತಾಗಿ ಗಮನವಿರಲಿ

Health Tips: ಹಾಲಿನ ಜತೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಹಾಲು ಮತ್ತು ಜೇನುತುಪ್ಪ
Follow us
TV9 Web
| Updated By: shruti hegde

Updated on: Jun 11, 2021 | 2:57 PM

ಜೇನುತುಪ್ಪ ಮತ್ತು ಹಾಲು ಎರಡೂ ಆಹಾರ ಪದಾರ್ಥವೂ ಕೂಡಾ ಮನುಷ್ನ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಜೇನುತುಪ್ಪವು ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್​ ಅಂಶವನ್ನು ಹೊಂದಿದೆ. ಹಾಲು ಪ್ರೊಟೀನ್​​, ಕ್ಯಾಲ್ಸಿಯಂ ಮತ್ತು ಲ್ಯಾಕ್ಟಿಕ್​ ಆಮ್ಲವನ್ನು ಹೊಂದಿರುತ್ತದೆ. ಇವುಗಳು ನಮ್ಮ ದೇಹದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ದೇಹವು ತಂಪಾಗಿರಲು ಹಾಲು ಮತ್ತು ಜೇನಿನ ಮಿಶ್ರಣವನ್ನು ಸೇವಿಸುವುದು ಉತ್ತಮ. ಔಷಧಗಳ ತಯಾರಿಕೆಯಲ್ಲಿಯೂ ಸಹ ಜೇನುತುಪ್ಪವನ್ನು ಬಳಸಲಾಗುತ್ತದೆ. ಸಕ್ಕರೆಯ ಬದಲಾಗಿ ಹಾಲಿನ ಜತೆಗೆ ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುವುದರಿಂದ ದೇಹಕ್ಕೆ ಬಹಳಷ್ಟು ಪ್ರಯೋಜನಗಳಿವೆ.

ಮೂಳೆಗಳನ್ನು ಬಲಪಡಿಸುತ್ತದೆ ಹಾಲಿನಲ್ಲಿ ಅತಿಹೆಚ್ಚು ಕ್ಯಾಲ್ಸಿಯಂ ಅಂಶವಿರುತ್ತದೆ. ದೇಹದಲ್ಲಿನ ಎಲುಬನ್ನು ಗಟ್ಟಿಯಾಗಿಡಲು ಸಹಾಯ ಮಾಡುತ್ತದೆ. ಪೊಟ್ಯಾಷಿಯಂ​ ಅಂಶ ಕೂಡಾ ಸಮೃದ್ಧಿಯಾಗಿರುವದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕಾರಿ.

ಶ್ವಾಸಕೋಶಕ್ಕೆ ಪ್ರಯೋಜನಕಾರಿ ಹಾಲಿನ ಜತೆ ಜೇನುತುಪ್ಪ ಸೇವಿಸುವದರಿಂದ ಉಸಿರಾಟದ ತೊಂದರೆಯನ್ನು ತಡೆಯಬಹುದಾಗಿದೆ. ಗಂಟಲು ನೋವು, ಅಶಕ್ತತೆ, ಸುಸ್ತು ಅಥವಾ ಆಯಾಸದಂತಹ ಸಮಸ್ಯೆಗೆ ಪರಿಹಾರವಾಗಿ ಹಾಲು ಮತ್ತು ಜೇನುತುಪ್ಪವನ್ನು ಬಳಸಬಹುದು.

ಹೊಟ್ಟೆ ನೋವಿನಿಂದ ಮುಕ್ತಿ ಹಾಲು ಮತ್ತು ಜೇನುತುಪ್ಪದಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಹೆಚ್ಚಾಗಿರುವುದರಿಂದ ದೇಹಕ್ಕೆ ಹಾನಿ ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹಾಗೂ ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನಿದ್ರೆಯನ್ನು ಸುಧಾರಿಸುತ್ತದೆ ಜೇನುತುಪ್ಪ ಮತ್ತು ಹಾಲು ಮೆದುಳಿಗೆ ವಿಶ್ರಾಂತಿಯನ್ನು ನೀಡಲು ಸಹಾಯ ಮಾಡುತ್ತದೆ. ನಿದ್ರೆ ಮಾಡುವ ಮುನ್ನ ಹಾಲು ಮತ್ತು ಜೇನುತುಪ್ಪವನ್ನು ಸೇವಿಸುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ನಿದ್ರೆ ಚೆನ್ನಾಗಿ ಆದಲ್ಲಿ ದಿನವಿಡೀ ಚೈತನ್ಯದಿಂದ ಕೂಡಿರಲು ಸಹಾಯಕವಾಗುತ್ತದೆ.

ಜೀರ್ಣಾಂಗವ್ಯೂಹ ವ್ಯವಸ್ಥೆಗೆ ಆರೋಗ್ಯಕರವಾಗಿದೆ ಹಾಲು ಮತ್ತು ಜೇನು ತುಪ್ಪವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಇದು ಮಲಬದ್ಧತೆ ಸಮಸ್ತೆಗೆ ಉತ್ತಮ ಔಷಧವಾಗಿದೆ. ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಒಗ್ಗುವುದಿಲ್ಲ. ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಆಹಾರ ಪದ್ಧತಿ ಇರಬೇಕು. ಹೀಗಿರುವಾಗ ನಿಮ್ಮ ದೇಹಕ್ಕೆ ಒಗ್ಗುವ ಆಹಾರ ಪದಾರ್ಥದ ಕುರಿತಾಗಿ ಗಮನವಿರಲಿ. ಜತೆಗೆ ನಿಮ್ಮ ಆರೋಗ್ಯದ ಅನುಕೂಲತೆಗೆ ತಕ್ಕಂತೆ ಸೇವಿಸುವ ಆಹಾರ ಪದಾರ್ಥದ ಕುರಿತಾಗಿ ವೈದ್ಯರಿಂದ ಮಾಹಿತಿ ಪಡೆಯಿರಿ.

ಇದನ್ನೂ ಓದಿ:

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ

Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?