AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

White Outfits: ನಿಮ್ಮ ಸೌಂದರ್ಯದ ಜೊತೆಗೆ ಚರ್ಮದ ರಕ್ಷಣೆಯನ್ನು ಮಾಡುತ್ತೆ ಬಿಳಿ ಬಣ್ಣದ ಬಟ್ಟೆಗಳು

ಹೊಸ ವರ್ಷದಿಂದ ನಿಮ್ಮ ವಾರ್ಡ್‌ರೋಬ್‌ನಲ್ಲಿ ಬಿಳಿ ಬಣ್ಣದ ಬಟ್ಟೆಗಳು ಜೋಡಿಸಿ. ವಿವಿಧ ಶೈಲಿಯ ಬಿಳಿ ಬಣ್ಣದ ಬಟ್ಟೆಗಳ ಕುರಿತು ಮಾಹಿತಿ ಇಲ್ಲಿವೆ. ಇದು ಬೇಸಿಗೆ ಕಾಲದಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

White Outfits: ನಿಮ್ಮ ಸೌಂದರ್ಯದ ಜೊತೆಗೆ ಚರ್ಮದ ರಕ್ಷಣೆಯನ್ನು ಮಾಡುತ್ತೆ ಬಿಳಿ ಬಣ್ಣದ ಬಟ್ಟೆಗಳು
white outfitsImage Credit source: News18
TV9 Web
| Updated By: ಅಕ್ಷತಾ ವರ್ಕಾಡಿ|

Updated on: Nov 22, 2022 | 6:04 PM

Share

ವರ್ಷ ಪೂರ್ತಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವುದರ ಜೊತೆಗೆ ನಿಮ್ಮ ಚರ್ಮದ ಆರೋಗ್ಯದ ದೃಷ್ಟಿಯಿಂದ ಬಿಳಿ ಬಟ್ಟೆ ಧರಿಸುವುದನ್ನು ರೂಢಿಸಿಕೊಳ್ಳಿ. ಹೊಸ ವರ್ಷದಿಂದ ನಿಮ್ಮ ವಾರ್ಡ್‌ರೋಬ್‌ನಲ್ಲಿ ಬಿಳಿ ಬಣ್ಣದ ಬಟ್ಟೆಗಳು ಜೋಡಿಸಿ. ವಿವಿಧ ಶೈಲಿಯ ಬಿಳಿ ಬಣ್ಣದ ಬಟ್ಟೆಗಳ ಕುರಿತು ಮಾಹಿತಿ ಇಲ್ಲಿವೆ. ಇದು ಬೇಸಿಗೆ ಕಾಲದಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಬಿಳಿ ಬಣ್ಣದಿಂದ ನಿಮ್ಮ ಲುಕ್ ಆಕರ್ಷಕವಾಗಿ ಕಾಣುವುದರ ಜೊತೆಗೆ ನಿಮ್ಮ ಚರ್ಮದ ಟೋನ್ ಮೇಲೆ ಹೊಗಳುವಂತೆ ಕಾಣುತ್ತದೆ.

ಮಹಿಳೆಯರು ಹೊಂದಿರಬೇಕಾದ ಐದು ಬಿಳಿ ಬಟ್ಟೆಗಳು ಇಲ್ಲಿವೆ. 1.ಬಿಳಿ ಮ್ಯಾಕ್ಸಿ ಉಡುಗೆ: ಬಿಳಿಯ ಮ್ಯಾಕ್ಸಿ ಡ್ರೆಸ್ ನಿಮ್ಮ ವಾರ್ಡ್‌ರೋಬ್‌ನಲ್ಲಿ ಜೋಡಿಸಬೇಕಾದ ಪ್ರಮುಖ ಬಟ್ಟೆಗಳಲ್ಲಿ ಒಂದಾಗಿದೆ. ಇದು ತುಂಬಾ ಹಗುರವಾಗಿದ್ದು, ಚರ್ಮದ ಮೇಲೆ ಆರಾಮದಾಯಕವಾಗಿರುತ್ತವೆ. ನಿಮ್ಮ ಬಿಳಿ ಮ್ಯಾಕ್ಸಿ ಉಡುಗೆಯನ್ನು ಗೋಲ್ಡನ್ ಸ್ಯಾಂಡಲ್‌ಗಳು ಮತ್ತು ಚಿರತೆ ಚರ್ಮದ ರೀತಿಯ ಹ್ಯಾಂಡ್ ಬ್ಯಾಗ್ ಜೊತೆಗೆ ಸಖತ್ತ್ ಸ್ಟೈಲೀಶ್ ಲುಕ್ ನೀಡುತ್ತದೆ.

White maxi dress

White maxi dress

2.ಶಾಸ್ತ್ರೀಯ ಶೈಲಿಯ ಕ್ಲಾಸಿಕ್ ಬಿಳಿ ಶರ್ಟ್:

ಬಿಳಿ ಬಣ್ಣದ ಶರ್ಟ್ ಇಲ್ಲದೆ ಇರುವ ನಿಮ್ಮ ವಾರ್ಡ್ರೋಬ್ ಅಪೂರ್ಣ ಎಂದು ಹೇಳಬಹುದು. ಇದು ನಿಮಗೆ ಕ್ಲಾಸಿ ಲುಕ್ ನೀಡುವಲ್ಲಿ ತುಂಬಾ ಸಹಕಾರಿಯಾಗಿದೆ. ಸ್ಟೈಲಿಶ್ ಲುಕ್‌ಗಾಗಿ ಲೆದರ್ ಸ್ಕರ್ಟ್ ಮತ್ತು ನೀಲಿ ಜೀನ್ಸ್ ಜೊತೆಗೆ ಇದು ಒಂದು ಒಳ್ಳೆಯ ಜೋಡಿಯಾಗಿದೆ. ನೀವು ಇದನ್ನು ಔಪಚಾರಿಕ ಕೂಟಗಳಿಗೆ ಮಾತ್ರವಲ್ಲದೆ ನಿಮ್ಮ ಕುಟುಂಬದ ಜೊತೆಗಿನ ಪ್ರವಾಸಗಳಲ್ಲಿಯೂ ಧರಿಸಬಹುದು.

A classic white shirt

A classic white shirt

3.ಟ್ರೆಂಡಿ ಬಿಳಿ ಜೀನ್ಸ್: ನೀವು ಬಿಳಿ ಜೀನ್ಸ್ ಹಳೆಯ ಫ್ಯಾಶನ್ ಎಂದು ನೀವು ಭಾವಿಸಿದರೆ, ಅದು ತಪ್ಪು. ಇದು ಇವಾಗ ಸಿನಿಮಾ ನಟಿಯರಿಂದ ಸಖತ್ತ್ ಫೇಮಸ್ ಆಗ್ತಾ ಇದೆ. ಕಪ್ಪು ಬಣ್ಣ ಶೂಗಳಿಗೆ ಈ ಬಿಳಿ ಜೀನ್ಸ್ ಹೇಳಿ ಮಾಡಿಸಿದ ಜೋಡಿ. ನಿಮ್ಮಲ್ಲಿರುವ ಕಪ್ಪು ಹಾಗೂ ಗಾಢ ಬಣ್ಣದ ಬಟ್ಟೆಗಳೊಂದಿಗೆ ಇದನ್ನು ಧರಿಸಿ.

Trendy White jeans

Trendy White jeans

4.ಬೆರಗುಗೊಳಿಸುವ ಬಿಳಿ ಸೀರೆ:

ಈ ಮದುವೆಯ ಋತುವಿನಲ್ಲಿ ನಿಮಗೆ ಆಕರ್ಷಕ ಲುಕ್ ನೀಡುತ್ತದೆ. ಬಿಳಿಯ ಬಣ್ಣದ ಜೊತೆಗೆ ಬಂಗಾರದ ಬಣ್ಣಗಳ ಮಿನುಗು ಡಿಸೈನ್, ಸಾವಿರಾರು ಜನಗಳ ಮಧ್ಯೆ ಎದ್ದು ಕಾಣುವಂತೆ ಮಾಡುತ್ತದೆ. ಪಚ್ಚೆ ಅಥವಾ ವೈಡೂರ್ಯದ ನೀಲಿ ಬಣ್ಣದ ಆಭರಣದೊಂದಿಗೆ ಬಿಳಿ ಸೀರೆಯನ್ನು ಧರಿಸುವುದು ಉತ್ತಮವಾಗಿದೆ.

A dazzling white saree

A dazzling white saree

5.ಬಿಳಿ ಸ್ಕರ್ಟ್: ನೀವು ಹೆಚ್ಚು ಸಂಪ್ರದಾಯಿಕ ಲುಕ್ ಅನ್ನು ಬಯಸಿದರೆ, ಬಿಳಿ ಬಣ್ಣದ ಉದ್ದದ ಸ್ಕರ್ಟ್ ಹಾಗೂ ಆಫ್ ಶೋಲ್ಡರ್ ಟಾಪ್ ಜೊತೆಗೂ ಧರಿಸಬಹುದಾಗಿದೆ. ಇದಲ್ಲದೇ ಮಿನಿ ಸ್ಕರ್ಟ್‌ಗಳ ರೀತಿಯಲ್ಲೂ ಧರಿಸಬಹುದು. ಕೇರಳದ ಶೈಲಿಯ ಸಂಪ್ರದಾಯಿಕ ಬಟ್ಟೆಗಳಲ್ಲಿ ಉದ್ದವಾದ ಬಿಳಿ ಸ್ಕರ್ಟ್ ಅತ್ಯಂತ ಜನಪ್ರಿಯವಾಗಿದೆ.

White skirt

White skirt

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್