Friendship Day 2026: ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ಗಿಫ್ಟ್‌ಗಳನ್ನು ನೀಡುವ ಮೂಲಕ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಿ
Friendship Day Gift Idea: ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವಂತೆ ಭಾರತ, ಅಮೆರಿಕ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಸ್ನೇಹಿತರೆಲ್ಲರೂ ಜೊತೆ ಸೇರಿ ಈ ವಿಶೇಷ ದಿನವನ್ನು ಸ್ಪೆಷಲ್ ಆಗಿ ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 2 ರಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದ್ದು, ನಿಮ್ಮ ಆತ್ಮೀಯ ಸ್ನೇಹಿತರಿಗೆ ಈ ಕೆಲವೊಂದು ಗಿಫ್ಟ್‌ಗಳನ್ನು ನೀಡುವ ಮೂಲಕ ಫ್ರೆಂಡ್‌ಶಿಪ್ ಡೇಯನ್ನು ವಿಶೇಷವಾಗಿ ಆಚರಿಸಿ.

ಮುಖ್ಯಾಂಶಗಳು
- ಆಗಸ್ಟ್ ಮೊದಲ ಭಾನುವಾರದಂದು ಭಾನುವಾರ, ಅಮೇರಿಕ ಸೇರಿದಂತೆ ಒಂದಷ್ಟು ದೇಶಗಳಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ
- ಸ್ನೇಹ ಸಂಬಂಧಗಳನ್ನು ಬಲಪಡಿಸಲು ಈ ದಿನ ಒಂದೊಳ್ಳೆ ಅವಕಾಶವಾಗಿದೆ
- ಸ್ನೇಹಿತರಿಗೆ ಗಿಫ್ಟ್‌ಗಳನ್ನು ನೀಡುವ ಮೂಲಕ ಈ ಫ್ರೆಂಡ್‌ಶಿಪ್ ಡೇಯನ್ನು ನೀವು ಆಚರಿಸಬಹುದು
ಸ್ವಾರ್ಥವಿಲ್ಲದ ಸಂಬಂಧಗಳಲ್ಲಿ ಸ್ನೇಹ (Friendship) ಸಂಬಂಧ ಕೂಡಾ ಒಂದು. ನಾವು ಬಿದ್ದಾಗ ನಮ್ಮಂದಿಗೆ ಸಂಬಂಧಿಕರು ಇರುತ್ತಾರೋ ಗೊತ್ತಿಲ್ಲ, ಆದ್ರೆ ಸ್ನೇಹಿತರು ಮಾತ್ರ ಎಂದಿಗೂ ಕೈ ಬಿಡೋದಿಲ್ಲ. ಅವರು ಮಾತ್ರ ಎಂತಹದ್ದೇ ಕಷ್ಟದಲ್ಲೂ ನಮ್ಮ ಜೊತೆಗಿರುತ್ತಾರೆ. ಅದಕ್ಕಾಗಿಯೇ ಸ್ನೇಹವನ್ನು ರಕ್ತ ಸಂಬಂಧಕ್ಕೂ ಮೀರಿದ ಬಂಧವೆಂದು ಹೇಳುವುದು. ಈ ವಿಶೇಷ ಸಂಬಂಧವನ್ನು ಸಂಭ್ರಮಿಸಲು ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಸೇರಿ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 2 ರಂದು ಫ್ರೆಂಡ್‌ಶಿಪ್ ಡೇ ಆಚರಿಸಲಾಗುತ್ತಿದ್ದು, ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ಮರೆಯಲಾರದ ಉಡುಗೊರೆಗಳನ್ನು ನೀಡುವ ಮೂಲಕ ಈ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಿ. ಫ್ರೆಂಡ್‌ಶಿಪ್ ಡೇಯಂದು ಕೊಡಬಾಹುದಾದ ಗಿಫ್ಟ್‌ಗಳ ಮಾಹಿತಿ ಇಲ್ಲಿದೆ.
ಸ್ನೇಹಿತರ ದಿನದ ಇತಿಹಾಸವೇನು?
ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವಂತೆ ಭಾರತ, ಅಮೆರಿಕ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಸ್ನೇಹ ದಿನದ ಆಚರಣೆಯು 1950 ರ ದಶಕದಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕಿ ಜಾಯ್ಸ್ ಹಾಲ್ ಇದನ್ನು ಪ್ರಸ್ತಾಪಿಸಿದರು. ಸ್ನೇಹವೆಂಬ ಶುದ್ಧ ಸಂಬಂಧವನ್ನು ಸಂಭ್ರಮಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಜನರು ವಾರಾಂತ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಆರಾಮವಾಗಿ ಸಮಯ ಕಳೆಯಬಹುದು ಎಂಬ ಕಾರಣದಿಂದ ಈ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದೇ ಆಚರಿಸಲಾಗುತ್ತದೆ.
ಸ್ನೇಹಿತರ ದಿನದ ಮಹತ್ವವೇನು?
- ಸ್ನೇಹಿತರ ದಿನವು ಜನರಿಗೆ ತಮ್ಮ ಜೀವನದಲ್ಲಿನ ಸ್ನೇಹ ಹಾಗೂ ಸ್ನೇಹಿತರನ್ನು ಗೌರವಿಸಲು ಅವಕಾಶವನ್ನು ನೀಡುತ್ತದೆ ಮತ್ತು ಪರಸ್ಪರ ಬಾಂಧವ್ಯವನ್ನು ಬೆಳೆಸುವ ಸಂಬಂಧಗಳನ್ನು ನಿರ್ಮಿಸಲು ಉತ್ತೇಜಿಸುತ್ತದೆ.
- ಅಲ್ಲದೆ ಈ ದಿನ ಹಳೆಯ ಸ್ನೇಹಿತರೊಂದಿಗೆ ಮತ್ತೆ ಬೆರೆಯಲು, ಸಂಬಂಧಗಳನ್ನು ಸರಿಪಡಿಸಲು, ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಲು, ಒಂದೊಳ್ಳೆ ಅವಕಾಶವಾಗಿದೆ.
ಇದನ್ನೂ ಓದಿ: ಫ್ರೆಂಡ್‌ಶಿಪ್ ನಮ್ಮ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ
ಫ್ರೆಂಡ್‌ಶಿಪ್ ಡೇಯಂದು ಯಾವೆಲ್ಲಾ ಉಡುಗೊರೆಗಳನ್ನು ನೀಡಬಹುದು:
ಫೋಟೋ ಫ್ರೇಮ್ ಅಥವಾ ಫೋಟೋ ಕೊಲಾಜ್: ನಿಮ್ಮ ಅತ್ಯಂತ ಪ್ರೀತಿಯ ಸ್ನೇಹದ ನೆನಪುಗಳನ್ನು ಫೋಟೋ ಫ್ರೇಮ್ ಅಥವಾ ಫೋಟೋ ಕೊಲಾಜ್‌ನಲ್ಲಿ ಫ್ರೇಮ್ ಮಾಡಿ ಆ ಫೋಟೋ ಫ್ರೇಮ್ ಅನ್ನು ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಉಡುಗೊರೆಯಾಗಿ ನೀಡಿ. ತುಂಬಾ ದುಬಾರಿಯಲ್ಲದಿದ್ದರೂ ಈ ಉಡುಗೊರೆ ತುಂಬಾನೇ ಸ್ಪೆಷಲ್ ಆಗಿರುತ್ತದೆ.
ಇನ್‌ಡೋರ್ ಪ್ಲಾಂಟ್: ಕೆಲವರಿಗೆ ಗಿಡಗಳೆಂದರೆ ಸಖತ್ ಪ್ರೀತಿ. ನಿಮ್ಮ ಫ್ರೆಂಡ್‌ಗೂ ಇದೇ ರೀತಿ ಗಿಡಗಳು ಇಷ್ಟವಿದ್ದರೆ, ಅವರಿಗೆ ಸುಂದರವಾದ ಇನ್‌ಡೋರ್ ಪ್ಲಾಂಟ್ ಉಡುಗೊರೆಯಾಗಿ ನೀಡಿ. ಈ ಗಿಡಗಳನ್ನು ಸ್ನೇಹ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಚಾಕೊಲೇಟ್ ಮತ್ತು ಸ್ನ್ಯಾಕ್ ಹ್ಯಾಂಪರ್: ನಿಮ್ಮ ಫ್ರೆಂಡ್ ಆಹಾರಪ್ರಿಯರಾಗಿದ್ದರೆ ಅವರ ನೆಚ್ಚಿನ ಚಾಕೊಲೇಟ್‌ಗಳು, ಕುಕೀಸ್ ಸೇರಿದಂತೆ ಇನ್ನಿತರೆ ತಿಸಿಸುಗಳನ್ನು ಸುಂದರವಾದ ಹ್ಯಾಂಪರ್ ಪ್ಯಾಕ್ ಮಾಡಿ ಉಡುಗೊರೆಯಾಗಿ ನೀಡಿ. ನಿಮ್ಮ ತಿಂಡಿಪೋತಿ ಫ್ರೆಂಡ್ ಈ ಉಡುಗೊರೆಯನ್ನು ಇಷ್ಟಪಡುತ್ತಾಳೆ.
ಸ್ಕಿನ್‌ಕೇರ್ ಉತ್ಪನ್ನ: ಹೆಣ್ಮಕ್ಕಳಿಗೆ ತ್ವಚೆಯ ಆರೈಕೆಯ ಬಗ್ಗೆ ಕಾಳಜಿ ತುಸು ಹೆಚ್ಚೇ ಇರುತ್ತದೆ. ಹೀಗಿರುವಾಗ ನಿಮ್ಮ ಗರ್ಲ್‌ಬೆಸ್ಟ್‌ಫ್ರೆಂಡ್‌ಗೆ ನೀವು ಸ್ಕಿನ್‌ಕೇರ್ ಪ್ರಾಡಕ್ಟ್‌ಗಳನ್ನು ನೀಡಬಹುದು. ಫೇಸ್ ಮಾಸ್ಕ್, ಬಾಡಿ ಲೋಷನ್, ಲಿಪ್‌ಬಾಮ್, ಸನ್‌ಸ್ಕ್ರೀನ್, ಪೇಸ್‌ವಾಶ್ ಇತ್ಯಾದಿ ಉತ್ಪನ್ನಗಳನ್ನು ಜೋಡಿಸಿ ಹ್ಯಾಂಪರ್ ತಯಾರಿಸಿ ಸ್ನೇಹಿತೆಗೆ ಉಡುಗೊರೆ ನೀಡಿ.
ಇದಲ್ಲದೆ ಬಟ್ಟೆ, ಇಯರ್‌ಫೋನ್, ಪರ್‌ಫ್ಯೂಮ್, ಹೂಗುಚ್ಛ ಇವುಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಜೊತೆಗೆ ನಿಮ್ಮ ಬೆಸ್ಟ್‌ಫ್ರೆಂಡ್ ಅನ್ನು ಮೂವಿ, ಔಟಿಂಗ್, ಡಿನ್ನರ್‌ಗೆ ಕರೆದುಕೊಂಡು ಹೋಗುವ ಮೂಲಕ ಫ್ರೆಂಡ್‌ಶಿಪ್ ಡೇಯನ್ನು ಸ್ಪೆಷಲ್ ಆಗಿ ಆಚರಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




