Fruits: ಹಣ್ಣುಗಳನ್ನು ತಿನ್ನುವಾಗ ಈ ವಿಷಯವನ್ನೆಂದೂ ಮರೆಯಬೇಡಿ!

|

Updated on: Feb 06, 2024 | 6:10 PM

ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾದ ಆಹಾರವಾಗಿದೆ. ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳನ್ನೂ ಒಳಗೊಂಡಿರುತ್ತವೆ. ಹೀಗಾಗಿ, ಹಣ್ಣುಗಳನ್ನು ತಿನ್ನಲು ಹಿಂಜರಿಯಬೇಕಾಗಿಲ್ಲ. ಆದರೆ, ಆರೋಗ್ಯಕ್ಕೆ ಒಳ್ಳೆಯದೆಂದು ಹಣ್ಣುಗಳನ್ನು ಹೇಗೆ ಬೇಕೆಂದರೆ ಹಾಗೆ ತಿನ್ನೋ ಹಾಗಿಲ್ಲ. ಹಣ್ಣು ತಿನ್ನುವಾಗ ಈ ಕೆಲವು ವಿಷಯಗಳನ್ನು ನೀವೆಂದೂ ಮರೆಯುವಂತಿಲ್ಲ.

Fruits: ಹಣ್ಣುಗಳನ್ನು ತಿನ್ನುವಾಗ ಈ ವಿಷಯವನ್ನೆಂದೂ ಮರೆಯಬೇಡಿ!
ಹಣ್ಣು
Image Credit source: iStock
Follow us on

ಹಣ್ಣುಗಳು ಉತ್ತಮವಾದ ಆಹಾರವಾಗಿದ್ದು, ಅದು ನಮಗೆ ಬೇಕಾದ ಪೌಷ್ಟಿಕಾಂಶಗಳನ್ನು ನೀಡುತ್ತದೆ. ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಜೀವನಶೈಲಿಯ ಅಭ್ಯಾಸವಾಗಿದ್ದರೂ ಹಣ್ಣುಗಳನ್ನು ಸೇವಿಸುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಅಗತ್ಯ. ಆರೋಗ್ಯಕರ ದೇಹ ಮತ್ತು ಜೀವನವನ್ನು ಹೊಂದಲು ಹಣ್ಣುಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ನಿಮಗೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಜಲಸಂಚಯನವನ್ನು ಒದಗಿಸುತ್ತದೆ. ಬಲವಾದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಹೊಳೆಯುವ ಚರ್ಮವನ್ನು ಹೊಂದಲು ಹಣ್ಣುಗಳ ನಿಯಮಿತ ಸೇವನೆಯು ಅಗತ್ಯವಾಗಿದೆ. ಆದರೆ, ಹಣ್ಣುಗಳ ಪ್ರಯೋಜನ ನಮ್ಮ ದೇಹಕ್ಕೆ ಸರಿಯಾಗಿ ಸಿಗಬೇಕೆಂದರೆ ಹಣ್ಣುಗಳನ್ನು ತಿನ್ನುವಾಗ ನಾವು ಕೆಲವು ನಿಯಮಗಳನ್ನು ಕೂಡ ಅನುಸರಿಸಬೇಕು.

ನೀವು ಹಣ್ಣಿನ ಪ್ರಿಯರಾಗಿದ್ದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ…

ಜ್ಯೂಸ್ ಬದಲು ನೇರವಾಗಿ ಹಣ್ಣುಗಳನ್ನೇ ತಿನ್ನಿರಿ:

ಬಹುತೇಕ ಜನರು ಹಣ್ಣನ್ನು ಜ್ಯೂಸ್ ಮಾಡಿಕೊಂಡು ಕುಡಿಯುತ್ತಾರೆ. ಆದರೆ, ಇದರಿಂದ ಹಣ್ಣಿನಲ್ಲಿರುವ ಫೈಬರ್ ಅಂಶ ನಮ್ಮ ದೇಹಕ್ಕೆ ಸಿಗುವುದಿಲ್ಲ. ಹೀಗಾಗಿ, ಹಣ್ಣುಗಳನ್ನು ಜ್ಯೂಸ್ ಮಾಡುವ ಬದಲು ನೈಸರ್ಗಿಕ ರೂಪದಲ್ಲಿ ತಿನ್ನಲು ಆದ್ಯತೆ ನೀಡಿ. ಇದರ ಶುದ್ಧ ರೂಪವು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ್ದು, ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕವಾಗಿದೆ. ಹಣ್ಣಿನ ಜ್ಯೂಸ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಬೆಳಗ್ಗೆ ಬ್ರೇಕ್​ಫಾಸ್ಟ್​ ಬದಲು ತಿನ್ನಬಹುದಾದ ಹಣ್ಣುಗಳಿವು

ಊಟದ ನಂತರ ಹಣ್ಣುಗಳನ್ನು ತಿನ್ನಬೇಡಿ:

ಹಲವು ಜನರು ಊಟವಾದ ನಂತರ ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡಿದ್ದಾರೆ. ಆದರೆ, ಊಟದ ನಂತರ ನೀವು ಹಣ್ಣುಗಳನ್ನು ತಿನ್ನಬಾರದು. ಏಕೆಂದರೆ ಇದು ನಿಮಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ಆಸಿಡ್ ರಿಫ್ಲಕ್ಸ್, ಅಜೀರ್ಣ, ತೂಕ ಹೆಚ್ಚಾಗುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ಹಣ್ಣುಗಳನ್ನು ಸೇವಿಸಿದಿರುವುದು ಉತ್ತಮ.

ಹಣ್ಣುಗಳಿಗೂ ಮೊದಲು ನಟ್ಸ್ ಸೇವಿಸಿ:

ಹಣ್ಣುಗಳ ಮೊದಲು ನಟ್ಸ್ ತಿನ್ನಲು ಶಿಫಾರಸು ಮಾಡಲಾಗಿದೆ. ಏಕೆಂದರೆ ಅವು ಹಣ್ಣುಗಳಿಂದ ರಕ್ತದ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ನಟ್ಸ್ ಕೊಬ್ಬಿನ ಸಮೃದ್ಧ ಮೂಲವಾಗಿದೆ. ಆದ್ದರಿಂದ, ಅವುಗಳನ್ನು ಹಣ್ಣಿಗಿಂತಲೂ ಮುಂಚಿತವಾಗಿ ಸೇವಿಸುವುದು ಒಳ್ಳೆಯದು.

ಯಾವಾಗಲೂ ತಾಜಾ ಹಣ್ಣುಗಳನ್ನು ಸೇವಿಸಿ:

ತಾಜಾ ಹಣ್ಣುಗಳನ್ನು ಹೆಚ್ಚಾಗಿ ತಿನ್ನಲು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಅವು ನಿಮಗೆ ಉತ್ತಮ ರುಚಿಯನ್ನು ನೀಡುತ್ತವೆ ಮತ್ತು ಹೆಚ್ಚು ಆರೋಗ್ಯಕರವಾಗಿರುತ್ತವೆ. ತುಂಬ ದಿನ ಸಂಗ್ರಹಿಸಿಟ್ಟ ಅಥವಾ ವಿಪರೀತ ಹಣ್ಣಾದ ಹಣ್ಣುಗಳ ಸೇವನೆಯು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಗ್ಯಕರ ಮತ್ತು ತಾಜಾ ಹಣ್ಣುಗಳು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಬಿಪಿ ಕಂಟ್ರೋಲ್ ಮಾಡಬೇಕಾ?; ಈ ಹಣ್ಣುಗಳನ್ನು ತಿನ್ನಿ

ವಿವಿಧ ರೀತಿಯ ಹಣ್ಣುಗಳನ್ನು ಸೇವಿಸಿ:

ನಿಮಗೆ ಇಷ್ಟವೆಂದು ಯಾವಾಗಲೂ ಒಂದೇ ರೀತಿಯ ಹಣ್ಣು ತಿನ್ನಬೇಡಿ. ನೀವು ಹಣ್ಣಿನ ಶಾಪಿಂಗ್‌ಗೆ ಹೋಗುವಾಗ ವಿವಿಧ ರೀತಿಯ ಹಣ್ಣುಗಳನ್ನು ಖರೀದಿಸಿ. ಏಕೆಂದರೆ ಅವುಗಳು ನಮ್ಮ ದೇಹಕ್ಕೆ ಅಗತ್ಯವಾದ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ