AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಯ ಘಮ ಹೆಚ್ಚಿಸುವ ಏಲಕ್ಕಿಯಿಂದ ಆರೋಗ್ಯ ಪ್ರಯೋಜನ ಅಷ್ಟಿಷ್ಟಲ್ಲ

ಭಾರತೀಯ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು. ದುಬಾರಿ ಆಹಾರ ಪದಾರ್ಥಗಳ ಸಾಲಿಗೆ ಸೇರುವ ಈ ಏಲಕ್ಕಿಯು ಅಡುಗೆಯ ಘಮ ಹಾಗೂ ರುಚಿಯನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯಕ್ಕೂ ಬಹುಪಯೋಗಿ. ಆಯುರ್ವೇದದಲ್ಲಿ ಬಳಸಲಾಗುವ ಈ ಏಲಕ್ಕಿಯಲ್ಲಿ ರೋಗ ನಿವಾರಕ ಗುಣವಿದ್ದು, ಆರೋಗ್ಯ ಸಮಸ್ಯೆಗಳಾದಾಗ ಇದನ್ನು ಬಳಕೆ ಮಾಡುವುದರಿಂದ ರೋಗಗಳನ್ನು ದೂರ ಮಾಡಬಹುದಾಗಿದೆ.

ಅಡುಗೆಯ ಘಮ ಹೆಚ್ಚಿಸುವ ಏಲಕ್ಕಿಯಿಂದ ಆರೋಗ್ಯ ಪ್ರಯೋಜನ ಅಷ್ಟಿಷ್ಟಲ್ಲ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 06, 2024 | 5:21 PM

Share

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿದ್ದು, ಅದರಂತೆಯೇ ಈ ಏಲಕ್ಕಿಯ ಪ್ರಯೋಜನಗಳನ್ನು ಅರಿತವನೇ ಬಲ್ಲ. ಸಾಂಬಾರ್ ಗಳ ರಾಣಿ ಎನ್ನಲಾಗುವ ಈ ಏಲಕ್ಕಿಯು ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿದಾಗ ಅದರಿಂದ ಹೊರಹೊಮ್ಮವ ಘಮವನ್ನು ವಿವರಿಸಲು ಅಸಾಧ್ಯ. ಹೀಗಾಗಿ ಹೆಚ್ಚಿನವರು ಈ ಏಲಕ್ಕಿಯನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಿರುತ್ತಾರೆ. ಅಡುಗೆಯ ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿರುವ ಕಾರಣ ಮನೆ ಮದ್ದುಗಳಲ್ಲಿ ಈ ಏಲಕ್ಕಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಆರೋಗ್ಯ ಸಮಸ್ಯೆಗೆ ಏಲಕ್ಕಿಯಿಂದ ತಯಾರಿಸುವ ಮನೆ ಮದ್ದುಗಳಿವು

* ಏಲಕ್ಕಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ವಾಯು ಬಾಧೆಯು ನಿವಾರಣೆಯಾಗುತ್ತದೆ.

* ಏಲಕ್ಕಿಯನ್ನು ಕೆಂಡದ ಮೇಲೆ ಹಾಕಿ ಸುಟ್ಟು ಪುಡಿ ಮಾಡಿ, ಜೇನುತುಪ್ಪ ಬೆರೆಸಿ ತಿನ್ನುತ್ತಿದ್ದರೆ ವಾಕರಿಕೆ ಅಥವಾ ವಾಂತಿಯಾಗುತ್ತಿದ್ದರೆ ನಿಂತು ಹೋಗುತ್ತದೆ.

* ಏಲಕ್ಕಿ ಮತ್ತು ಕರಿಮೆಣಸುಗಳನ್ನು ಮಾಗಿದ ಟೊಮೆಟೊ ರಸದಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ವಾಂತಿಯಾಗುವುದು ತಕ್ಷಣವೇ ನಿಲ್ಲುತ್ತದೆ.

* ಉರಿಮೂತ್ರ ಸಮಸ್ಯೆಯಿದ್ದವರು ಏಲಕ್ಕಿ ಪುಡಿ, ಹುರಿದ ಜೀರಿಗೆಯ ಪುಡಿ ಹಾಗೂ ಬೆಲ್ಲ ಈ ಮೂರನ್ನೂ ಬೆಣ್ಣೆಯಲ್ಲಿ ಬೆರೆಸಿ ಬೆಳಗ್ಗೆ ಮತ್ತು ರಾತ್ರಿ ಸೇವಿಸಿದರೆ ಪರಿಣಾಮಕಾರಿ ಮನೆ ಮದ್ದಾಗಿದೆ.

* ಏಲಕ್ಕಿ ಕಷಾಯದಿಂದ ಬಾಯಿ ಮುಕ್ಕಳಿಸುತ್ತಿದ್ದರೆ ಹಲ್ಲು ನೋವು ಗುಣಮುಖವಾಗುತ್ತದೆ.

* ಪ್ರತಿದಿನವು ಒಂದು ಅಥವಾ ಎರಡು ಹಸಿ ಏಲಕ್ಕಿಯನ್ನು ಜಗಿದು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

* ಏಲಕ್ಕಿಯನ್ನು ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಇಲ್ಲವಾದರೆ ಈ ಕಷಾಯವಂನ್ನಿ ಸ್ವಲ್ಪ ಹೊತ್ತು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಬಾಯಿ ಹುಣ್ಣಿಗೆ ಪರಿಣಾಮಕಾರಿ ಔಷಧಿ.

ಇದನ್ನೂ ಓದಿ: ಅತಿಯಾದ ತೂಕದಿಂದ ಮುಜುಗರ ಅನುಭವಿಸುತ್ತಿದ್ದೀರಾ? ಈ ಸರಳ ಮನೆ ಮದ್ದು ಬಳಸಿ

*ಏಲಕ್ಕಿ ಪುಡಿಯನ್ನು ಬೇಲದ ಹಣ್ಣಿನ ತಿರುಳಿನೊಂದಿಗೆ ಬೆರೆಸಿ ತಿನ್ನುವುದರಿಂದ ಅಸಿಡಿಟಿ ಸಮಸ್ಯೆಯು ದೂರವಾಗುತ್ತದೆ.

* ಬಾಯಿಯು ದುರ್ವಾಸನೆ ಬರುತ್ತಿದ್ದರೆ ಏಲಕ್ಕಿ ತಿನ್ನುವುದು ಉತ್ತಮ.

* ಏಲಕ್ಕಿ, ದ್ರಾಕ್ಷಿ, ಸೊಗದೆ ಬೇರು ಇವು ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ, ಒಂದು ಲೋಟ ಹಾಲಿಗೆ ಸೇರಿಸಿ ಕಷಾಯ ಮಾಡಿಕೊಂಡು, ಪ್ರತಿದಿನ ರಾತ್ರಿ ಊಟವಾದ ಬಳಿಕ ಕುಡಿದರೆ ಬಾಯಿ ಹುಣ್ಣಿನ ಸಮಸಸ್ಯೆಯು ದೂರವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ