Shilpa Shetty: ಗೋಧಿ ರುಬ್ಬಿದ ಶಿಲ್ಪಾ ಶೆಟ್ಟಿಯ ವಿಡಿಯೋ ವೈರಲ್; ಚಕ್ಕಿ ಚಲಾಸನದ ಪ್ರಯೋಜನಗಳಿವು
Chakki Chalasana: ವಯಸ್ಸು 48 ದಾಟಿದರೂ ಇನ್ನೂ ಈಗಿನ ಬಾಲಿವುಡ್ ಹೀರೋಯಿನ್ಗಳನ್ನೂ ಮೀರಿಸುವಂತಹ ಮೈಕಟ್ಟನ್ನು ಹೊಂದಿರುವ ಶಿಲ್ಪಾ ಶೆಟ್ಟಿ ಫಿಟ್ನೆಸ್ಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ದಿನವೂ ಯೋಗ, ಜಾಗಿಂಗ್, ವರ್ಕ್ಔಟ್ ಮಾಡುವ ಶಿಲ್ಪಾ ಶೆಟ್ಟಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆಗಾಗ ವರ್ಕ್ಔಟ್ ಹಾಗೂ ಯೋಗದ ವಿಡಿಯೋಗಳನ್ನು ಹಾಕುತ್ತಿರುತ್ತಾರೆ. ರಾಜಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಲ್ಲಿನಲ್ಲಿ ಗೋಧಿ ಬೀಸುವ ಮೂಲಕ ಚಕ್ಕಿ ಚಲಾಸನದ ಪ್ರಾಮುಖ್ಯತೆಯ ಬಗ್ಗೆ ಅವರು ಹೇಳಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಫಿಟ್‌ನೆಸ್ ಉತ್ಸಾಹಿಯಾಗಿದ್ದು, ಇತ್ತೀಚೆಗೆ ಅವರು ಅಭಿನಯಿಸಿರುವ ಇಂಡಿಯನ್ ಪೊಲೀಸ್ ಫೋರ್ಸ್ (Indian Police Force) ವೆಬ್ ಸೀರೀಸ್ ಬಹಳ ಮೆಚ್ಚುಗೆ ಗಳಿಸಿತ್ತು. 48ನೇ ವಯಸ್ಸಿನಲ್ಲೂ ಫಿಟ್ ಆಗಿರುವ ಶಿಲ್ಪಾ ಶೆಟ್ಟಿ ಯೋಗ ಮತ್ತು ವರ್ಕ್ಔಟ್ಗೆ (Shilpa Shetty Fitness) ಆದ್ಯತೆ ನೀಡುತ್ತಾರೆ. ತಮ್ಮ ಫಿಟ್‌ನೆಸ್ ಜರ್ನಿ ಮತ್ತು ವರ್ಕೌಟ್ ದಿನಚರಿಗಳನ್ನು ಅವರು ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ಯಾವಾಗಲೂ ತಮ್ಮ ಫಿಟ್‌ನೆಸ್ ರೊಟೀನ್ನಲ್ಲಿ ಹೊಸ ವ್ಯಾಯಾಮಗಳು ಮತ್ತು ದಿನಚರಿಗಳನ್ನು ಅಳವಡಿಸಿಕೊಳ್ಳಲು ತಮ್ಮ ಅಭಿಮಾನಿಗಳನ್ನು ಪ್ರೇರೇಪಿಸುತ್ತಾರೆ.
ಈ ಬಾರಿ ರಾಜಸ್ಥಾನ ಪ್ರವಾಸದಲ್ಲಿ ನಟಿ ಶಿಲ್ಪಾ ಶೆಟ್ಟಿ ಚಕ್ಕಿ ಚಲಾಸನ ಪ್ರದರ್ಶಿಸಿದ್ದಾರೆ. ಈ ಹಿಂದೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಚಕ್ಕಿ ಚಲಾಸನ ಮಾಡುವ ವಿಡಿಯೋವೊಂದನ್ನು ಶಿಲ್ಪಾ ಶೆಟ್ಟಿ ಹಾಕಿದ್ದರು. ಆದರೆ, ಈ ಬಾರಿ ತಾವೇ ಗೋಧಿಯನ್ನು ಕಲ್ಲಿನಲ್ಲಿ ಬೀಸುತ್ತಾ ಚಕ್ಕಿ ಚಲಾಸನವನ್ನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿದ್ದಾರೆ. ಕಲ್ಲಿನಲ್ಲಿ ಗೋಧಿಯನ್ನು ಬೀಸುವಾಗ ಮಹಿಳೆಯರು ಕೂರುವ ಭಂಗಿ ಮತ್ತು ಬೀಸುವಾಗ ದೇಹದಲ್ಲಾಗುವ ಚಲನೆಯೇ ಚಕ್ಕಿ ಚಲಾಸನ. ಚಕ್ಕಿ ಚಲಾಸನವು ತೋಳುಗಳನ್ನು ಬಲಪಡಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಸಂತಾನೋತ್ಪತ್ತಿಯ ಅಂಗಗಳನ್ನು ಉತ್ತೇಜಿಸುತ್ತದೆ. ಇದು ಬೆನ್ನು ಮತ್ತು ಮಂಡಿಯ ಸ್ನಾಯುಗಳನ್ನು ಬಲಪಡಿಸುತ್ತದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಅಸ್ತಮಾಕ್ಕೆ ಯೋಗ ಪರಿಹಾರ; ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವ 3 ಯೋಗಾಸನಗಳಿವು
ಚಕ್ಕಿ ಚಲಾಸನವನ್ನು ಸಾಮಾನ್ಯವಾಗಿ ಗ್ರೈಂಡಿಂಗ್ ಭಂಗಿ ಎಂದು ಕರೆಯಲಾಗುತ್ತದೆ. ಇದು ದೇಹ ಮತ್ತು ಮನಸ್ಸು ಎರಡಕ್ಕೂ ವಿವಿಧ ಪ್ರಯೋಜನಗಳನ್ನು ನೀಡುವ ಯೋಗಾಸನವಾಗಿದೆ. ನಿಮ್ಮ ನಿಯಮಿತ ಯೋಗಾಭ್ಯಾಸದಲ್ಲಿ ಚಕ್ಕಿ ಚಲಸಾನವನ್ನು ಸೇರಿಸುವ ಕೆಲವು ಪ್ರಯೋಜನಗಳು ಇಲ್ಲಿವೆ.
View this post on Instagram
ಚಕ್ಕಿ ಚಲಾಸನದ 4 ಪ್ರಯೋಜನಗಳು ಇಲ್ಲಿವೆ:
– ಚಕ್ಕಿ ಚಲಾಸನವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ನಿಮ್ಮ ದೇಹದ ಮೇಲ್ಭಾಗವನ್ನು ವೃತ್ತಾಕಾರದ ಚಲನೆಯಲ್ಲಿ ಚಲಿಸುವಾಗ ಅದು ಹೊಟ್ಟೆಯ ಸುತ್ತಲಿನ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಇದು ಮಧ್ಯಭಾಗವನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.
– ಈ ಯೋಗದ ಭಂಗಿಯು ದೇಹದ ಮೇಲ್ಭಾಗದ ವೃತ್ತಾಕಾರದ ಚಲನೆಯನ್ನು ಒಳಗೊಂಡಿರುತ್ತದೆ. ಬೆನ್ನುಮೂಳೆ, ಭುಜಗಳು ಮತ್ತು ಸೊಂಟಕ್ಕೆ ಚಲನೆ ನೀಡುತ್ತದೆ. ಚಕ್ಕಿ ಚಲಾಸನದ ನಿಯಮಿತ ಅಭ್ಯಾಸವು ಈ ಭಾಗಗಳಲ್ಲಿ ಚಲನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪಿರಿಯಡ್ಸ್ ನೋವು ತಡೆಯಲಾಗುತ್ತಿಲ್ಲವೇ?; ಈ ಯೋಗಾಸನ ಮಾಡಿ
– ಚಕ್ಕಿ ಚಲಾಸನದ ವೃತ್ತಾಕಾರದ ಚಲನೆಯು ಕಿಬ್ಬೊಟ್ಟೆಯ ಅಂಗಗಳಿಗೆ, ವಿಶೇಷವಾಗಿ ಜೀರ್ಣಕಾರಿ ಅಂಗಗಳಿಗೆ ಮಸಾಜ್ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಅಜೀರ್ಣ ಮತ್ತು ಉಬ್ಬುವಿಕೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
– ಚಕ್ಕಿ ಚಲಾಸನವು ಏಕಾಗ್ರತೆ ಹೆಚ್ಚಿಸುತ್ತದೆ. ಇದು ಮನಸ್ಸಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Tue, 6 February 24