ಅಸ್ತಮಾಕ್ಕೆ ಯೋಗ ಪರಿಹಾರ; ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವ 3 ಯೋಗಾಸನಗಳಿವು

ಕೆಲವೊಮ್ಮೆ ಕುಟುಂಬದಲ್ಲಿ ಯಾರಿಗಾದರೂ ಅಸ್ತಮಾ ಇದ್ದರೆ ಅದರ ಪರಿಣಾಮವಾಗಿಯೂ ಅಸ್ತಮಾ ಉಂಟಾಗುತ್ತದೆ. ಒತ್ತಡ, ಫೋಬಿಯಾಗಳು ಅಥವಾ ಮಾಲಿನ್ಯ ಕೂಡ ಅಸ್ತಮಾವನ್ನು ಉಂಟುಮಾಡುತ್ತದೆ. ನಿಮಗೆ ಉಸಿರಾಟದ ಕಾಯಿಲೆ ಇದ್ದರೆ ಯಾವ ಯೋಗಾಸನಗಳು ನಿಮಗೆ ಒಳ್ಳೆಯದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಅಸ್ತಮಾಕ್ಕೆ ಯೋಗ ಪರಿಹಾರ; ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವ 3 ಯೋಗಾಸನಗಳಿವು
ಅಸ್ತಮಾ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 09, 2023 | 6:28 PM

ಅಸ್ತಮಾ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಸಾಕಷ್ಟು ತೊಂದರೆ ಎದುರಾಗುತ್ತದೆ. ಅದರಲ್ಲೂ ಈಗ ವಾಯುವಿನ ಗುಣಮಟ್ಟ ಬಹಳ ಹದಗೆಟ್ಟಿರುವುದರಿಂದ ಮನೆಯಿಂದ ಹೊರಹೋಗಲು ಕೂಡ ಭಯ ಪಡಬೇಕಾದ ಪರಿಸ್ಥಿತಿ ಇದೆ. ಉಸಿರಾಟದ ಸಮಸ್ಯೆಗಳು ಮತ್ತು ಎದೆಯಲ್ಲಿ ಬಿಗಿತವು ಅಸ್ತಮಾ ಹೊಂದಿರುವವರು ಎದುರಿಸುವ ಕೆಲವು ಸಮಸ್ಯೆಗಳಾಗಿವೆ. ಕೆಲವೊಮ್ಮೆ ಕುಟುಂಬದಲ್ಲಿ ಯಾರಿಗಾದರೂ ಅಸ್ತಮಾ ಇದ್ದರೆ ಅದರ ಪರಿಣಾಮವಾಗಿಯೂ ಅಸ್ತಮಾ ಉಂಟಾಗುತ್ತದೆ.

ಒತ್ತಡ, ಫೋಬಿಯಾಗಳು ಅಥವಾ ಮಾಲಿನ್ಯ ಕೂಡ ಅಸ್ತಮಾವನ್ನು ಉಂಟುಮಾಡುತ್ತದೆ. ನಿಮಗೆ ಸಾಮಾನ್ಯ ಉಸಿರಾಟದ ಕಾಯಿಲೆ ಇದ್ದರೆ ಯಾವ ಯೋಗಾಸನಗಳು ನಿಮಗೆ ಒಳ್ಳೆಯದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

1. ಉಸ್ತ್ರಾಸನ:

– ಮಂಡಿಯೂರಿ ಕೆಳಗೆ ಕುಳಿತುಕೊಳ್ಳಿ.

– ಉಸಿರಾಡುತ್ತಾ ನಿಮ್ಮ ಕೈಗಳನ್ನು ಮೇಲಕ್ಕೆ ತನ್ನಿ, ನಿಮ್ಮ ದೇಹವನ್ನು ಮುಂದಕ್ಕೆ ಬಗ್ಗಿಸಿ, ನಿಮ್ಮ ಕೈಗಳನ್ನು ನಿಮ್ಮ ಬೆನ್ನಿನ ಹಿಂದೆ ತನ್ನಿ. ಕೈಗಳಿಂದ ನಿಮ್ಮ ಹಿಮ್ಮಡಿಗಳನ್ನು ಸ್ಪರ್ಶಿಸಿ.

– ಉಸಿರನ್ನು ಬಿಡುತ್ತಾ ನಿಧಾನವಾಗಿ ಕೆಳಗೆ ಬಂದು ವಿಶ್ರಾಂತಿ ಪಡೆಯಿರಿ.

ಇದನ್ನೂ ಓದಿ: ಸಾವಿರಾರು ವರ್ಷದ ಇತಿಹಾಸವಿರುವ ತ್ರಿಫಲಾದ ಉಪಯೋಗವೇನು?

2. ಭುಜಂಗಾಸನ:

– ನಿಮ್ಮ ಅಂಗೈಗಳನ್ನು ನಿಮ್ಮ ಎದೆಯ ಪಕ್ಕದಲ್ಲಿ ಇಟ್ಟುಕೊಂಡು ನಿಮ್ಮ ಹೊಟ್ಟೆಯ ಮೇಲೆ ಮಲಗಿಕೊಳ್ಳಿ.

– ಉಸಿರಾಡುತ್ತಾ ನಿಮ್ಮ ಎದೆ ಮತ್ತು ಭುಜಗಳನ್ನು ವಿಸ್ತರಿಸುತ್ತಾ ನಿಧಾನವಾಗಿ ಮೇಲಕ್ಕೆ ಹೋಗಿ.

– ಉಸಿರನ್ನು ಬಿಡುತ್ತಾ ಕೆಳಗೆ ಬನ್ನಿ.

3. ಸೇತು ಬಂಧಾಸನ:

– ನಿಮ್ಮ ಬೆನ್ನಿನ ಮೇಲೆ ಮಲಗಿ ನಂತರ ನಿಮ್ಮ ಕಾಲುಗಳನ್ನು ಮಡಚಿ.

– ನಿಮ್ಮ ಕೈಗಳನ್ನು ನೆಲದ ಮೇಲೆ ಇರಿಸಿ. ನಿಧಾನವಾಗಿ ಉಸಿರಾಡುತ್ತಾ ನಿಮ್ಮ ಎದೆ ಮತ್ತು ಸೊಂಟವನ್ನು ಮೇಲಕ್ಕೆತ್ತಿ.

– 10 ಸೆಕೆಂಡುಗಳ ಕಾಲ ಅದೇ ಭಂಗಿಯಲ್ಲಿರಿ. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಕೆಳಗೆ ಬನ್ನಿ.

ಇದನ್ನೂ ಓದಿ: Asthma: ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ ತಡೆಗಟ್ಟಲು ವೈದ್ಯರ ಸಲಹೆ ಇಲ್ಲಿದೆ

ಈ ಎಲ್ಲಾ ಆಸನಗಳು ನಿಮ್ಮ ಎದೆ, ಭುಜಗಳು ಮತ್ತು ಕಿಬ್ಬೊಟ್ಟೆಯ ಪ್ರದೇಶದ ಸ್ನಾಯುಗಳನ್ನು ವಿಸ್ತರಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಮಾತ್ರವಲ್ಲ, ಬೆನ್ನು ನೋವನ್ನು ಕಡಿಮೆ ಮಾಡಲು, ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು, ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ