Weight Loss Tips: ನುಗ್ಗೆ ಸೊಪ್ಪಿನಿಂದ ಹೇಗೆ ತೂಕ ಇಳಿಸಿಕೊಳ್ಳಲು ಸಾಧ್ಯ?
ನುಗ್ಗೆ ಸೊಪ್ಪು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಸಮೃದ್ಧವಾಗಿವೆ. ಇದು ನಿಮ್ಮ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಾದರೆ ನುಗ್ಗೆ ಸೊಪ್ಪು ಅಥವಾ ನುಗ್ಗೆ ಕಾಯಿಯನ್ನು ಬಳಸಿ ನೋಡಿ. 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನುಗ್ಗೆ ಸೊಪ್ಪಿನ ಪರಾಟಗಳನ್ನು ಬಹಳ ಇಷ್ಟಪಡುತ್ತಾರೆ ಎಂದು ಬಹಿರಂಗವಾಗಿತ್ತು. ಇದು ಯುಗಗಳಿಂದಲೂ ಔಷಧದ ಭಾಗವಾಗಿರುವ ಒಂದು ಘಟಕಾಂಶವಾಗಿದೆ. ಚರ್ಮ ಮತ್ತು ಕೂದಲಿಗೆ ನುಗ್ಗೆ ಸೊಪ್ಪಿನಿಂದ ಹಲವಾರು ಪ್ರಯೋಜನಗಳಿವೆ. ತೂಕವನ್ನು ಇಳಿಸಿಕೊಳ್ಳಲು ನುಗ್ಗೆ ಸೊಪ್ಪನ್ನು ಯಾವ ರೀತಿ ಬಳಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನುಗ್ಗೆ ಸೊಪ್ಪು ಉರಿಯೂತದ ಕಾಯಿಲೆ ಮತ್ತು ಚರ್ಮದ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಇದು ನೈಸರ್ಗಿಕ ರಕ್ತ ಶುದ್ಧಿಕಾರಕವಾಗಿದ್ದು, ರಕ್ತದಲ್ಲಿನ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು, ವಿಟಮಿನ್ ಎ ಮುಂತಾದ ಪೋಷಕಾಂಶಗಳಿಂದ ತುಂಬಿದೆ. ಇದು ಚರ್ಮದ ಹೊಳಪು ಮತ್ತು ಕೂದಲ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ನುಗ್ಗೆ ಸೊಪ್ಪು ಒಳ್ಳೆಯದು. ಇದರ ನಿಯಮಿತ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯವನ್ನು ಹೆಚ್ಚಿಸಲು ನುಗ್ಗೆ ಕಾಯಿಯ ಸೇವನೆ ಮಾಡಿ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಲೋಹದ ಅಂಶವಿದೆ.
ಇದನ್ನೂ ಓದಿ: Drumstick Benefits: ಮಧುಮೇಹ ಸಮಸ್ಯೆಗೆ ನುಗ್ಗೆ ಸೊಪ್ಪಿನಲ್ಲಿದೆ ಪರಿಹಾರ
ನುಗ್ಗೆ ಕಾಯಿಯಲ್ಲಿರುವ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ, ಮಧುಮೇಹ ಹೊಂದಿರುವ ಜನರು ನುಗ್ಗೆ ಸೊಪ್ಪನ್ನು ಹೆಚ್ಚು ಬಳಸಿದರೆ ಒಳ್ಳೆಯದು. ನುಗ್ಗೆ ಸೊಪ್ಪಿನಲ್ಲಿರುವ ಮತ್ತೊಂದು ಪ್ರಮುಖ ಪೋಷಕಾಂಶವೆಂದರೆ ಫೈಬರ್. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಒಳ್ಳೆಯದು. ನುಗ್ಗೆಕಾಯಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಏಕೆಂದರೆ ಇದು ಇನ್ಸುಲಿನ್ ತರಹದ ಪ್ರೋಟೀನ್ಗಳನ್ನು ಹೊಂದಿರುತ್ತದೆ. ನುಗ್ಗೆ ಸೊಪ್ಪು ಮತ್ತು ನುಗ್ಗೆ ಕಾಯಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುವ ಗುಣಗಳನ್ನು ಹೊಂದಿದೆ.
ಇದನ್ನೂ ಓದಿ: Drumstick: ಗರ್ಭಿಣಿಯರು ನುಗ್ಗೆಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಪಡೆಯಬಹುದು ಗೊತ್ತಾ? ಇಲ್ಲಿದೆ ಮಾಹಿತಿ
ನುಗ್ಗೆ ಸೊಪ್ಪು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಸಮೃದ್ಧವಾಗಿವೆ. ಇದು ನಿಮ್ಮ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ನಿಮ್ಮ ತೂಕ ಇಳಿಸುವ ಆಹಾರದಲ್ಲಿ ನುಗ್ಗೆ ಸೊಪ್ಪನ್ನು ಸೇರಿಸಬಹುದು. ನುಗ್ಗೆ ಸೊಪ್ಪಿನ ಚಹಾವನ್ನು ಸೇವಿಸುವ ಮೂಲಕ ತೂಕ ಇಳಿಸಿಕೊಳ್ಳಬಹುದು. ಈ ಚಹಾವನ್ನು ತಯಾರಿಸಲು ಒಂದು ಪಾತ್ರೆಯಲ್ಲಿ ಒಂದರಿಂದ 2 ಕಪ್ ನೀರನ್ನು ಕುದಿಸಿ ಮತ್ತು ಅದಕ್ಕೆ ನುಗ್ಗೆ ಎಲೆ ಅಥವಾ ಪುಡಿಯನ್ನು ಸೇರಿಸಿ. ಅದನ್ನು ಕುದಿಯಲು ಬಿಡಿ. ನಂತರ ಅದನ್ನು ಸೋಸಿಕೊಳ್ಳಿ. ಈ ಚಹಾವನ್ನು ನಿಮ್ಮ ದಿನಚರಿಯಂತೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ