AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾದ ತೂಕದಿಂದ ಮುಜುಗರ ಅನುಭವಿಸುತ್ತಿದ್ದೀರಾ? ಈ ಸರಳ ಮನೆ ಮದ್ದು ಬಳಸಿ

ಇತ್ತೀಚೆಗಿನ ದಿನಗಳಲ್ಲಿ ತೂಕ ಹೆಚ್ಚಳವು ಸರ್ವೇ ಸಾಮಾನ್ಯವಾದ ಸಮಸ್ಯೆಯಾಗಿ ಬಿಟ್ಟಿದೆ. ಒತ್ತಡ ತುಂಬಿದ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಾಗುವ ಬದಲಾವಣೆಯಿಂದಾಗಿ ತೂಕ ಹೆಚ್ಚಳವಾಗುತ್ತಿದೆ. ಹೀಗಾಗಿ ಹೆಚ್ಚಿನವರು ತಮ್ಮ ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಡಯೆಟ್ ನತ್ತ ಗಮನ ಹರಿಸುತ್ತಿದ್ದಾರೆ. ಆದರೆ ಈ ಸಲಹೆ ಗಳನ್ನು ಪಾಲಿಸುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಅತಿಯಾದ ತೂಕದಿಂದ ಮುಜುಗರ ಅನುಭವಿಸುತ್ತಿದ್ದೀರಾ? ಈ ಸರಳ ಮನೆ ಮದ್ದು ಬಳಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 06, 2024 | 1:13 PM

Share

ಕೆಲವರು ದಪ್ಪಾಗಿರುವ ಕಾರಣಕ್ಕೆ ಎಲ್ಲರ ಮುಂದೆ ಹೋಗಲು ಮುಜುಗರ ಪಟ್ಟುಕೊಳ್ಳುತ್ತಾರೆ. ಹೇಗಾದರೂ ಮಾಡಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಡಯೆಟ್ ಸೇರಿದಂತೆ, ಊಟ ಬಿಡುವುದು, ಜಿಮ್, ವರ್ಕ್ ಔಟ್ ಎಂದು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಈ ತೂಕ ಹೆಚ್ಚಳಕ್ಕೆ ದೈನಂದಿನ ಜೀವನ ಶೈಲಿಯೇ ಮುಖ್ಯ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಊಟವನ್ನು ಬಿಡದೇ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ತೂಕವನ್ನು ಇಳಿಕೆ ಮಾಡುವುದು ಇನ್ನು ಸುಲಭವಾಗಿದೆ.

ದೇಹದ ತೂಕ ಇಳಿಕೆಗೆ ಸಿಂಪಲ್ ಟಿಪ್ಸ್

* ಇಂಗು ನೀರು ಕುಡಿಯುವುದರಿಂದ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆಯಾಗಿ ತೂಕ ಇಳಿಕೆಯಾಗುತ್ತದೆ.

* ಅತಿಯಾದ ತೂಕವನ್ನು ಹೊಂದಿದವರು ಪ್ರತಿದಿನ ಒಂದೆರಡು ಚಮಚ ಜೇನುತುಪ್ಪವನ್ನು ಸೇವಿಸಿದರೆ ಶರೀರದ ಅನವಶ್ಯಕ ತೂಕ ಕಡಿಮೆ ಆಗುವುದು.

* ಹಾಲಿನ ಸ್ನಾನದಿಂದ ಚರ್ಮವು ಮೃದುವಾಗುವುದರ ಜೊತೆಗೆ ದೇಹ ಹಗುರವಾಗಿ ತೂಕ ಇಳಿಕೆಯಾಗುತ್ತದೆ.

* ಕರಿಬೇವಿನ ಸೊಪ್ಪಿನ ಚಟ್ನಿಯನ್ನು ದಿನವೂ ಮಿತವಾಗಿ ಉಪಯೋಗ ಮಾಡುವುದರಿಂದ ಬೊಜ್ಜು ಕರಗಿ ದೇಹದ ತೂಕ ಕಡಿಮೆಯಾಗುತ್ತದೆ.

* ಕುಂಬಳಕಾಯಿ ಸೇವನೆಯಿಂದ ಬೊಜ್ಜು ಕರಗಿ ತೂಕ ಇಳಿಕೆಯಾಗುತ್ತದೆ.

* ರಾಗಿ ಹಿಟ್ಟಿನಲ್ಲಿ ಮುದ್ದೆ ಮಾಡಿ ಊಟ ಮಾಡುವುದರಿಂದ ಬೊಜ್ಜು ಕರಗಿ, ತೂಕ ಕಡಿಮೆಯಾಗುತ್ತದೆ.

* ಗೋಡಂಬಿ ಹಲ್ವ ಮಾಡಿಕೊಂಡು ತಿಂದರೆ ಶರೀರದ ತೂಕ ನಷ್ಟವಾಗುತ್ತದೆ.

* ಪ್ರತಿದಿನ ಎಳನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆಯು ಸುಧಾರಿಸಿ, ತೂಕ ಕಡಿಮೆಯಾಗುತ್ತದೆ.

* ಜೀರಿಗೆ ನೀರು ಕುಡಿದರೆ ವಿಷಕಾರಿ ಅಂಶಗಳು ದೇಹದಿಂದ ಹೊರಗೆ ಹೋಗುತ್ತವೆ. ಇದರಿಂದ ದೇಹದ ಕೆಟ್ಟ ಕೊಬ್ಬನ್ನು ಕರಗಿ ತೂಕವುವು ಇಳಿಕೆಯಾಗುತ್ತದೆ.

* ಅರಿಶಿನ ನೀರನ್ನು ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ.

* ಹಸಿ ಪಪ್ಪಾಯಿಯನ್ನು ಬೆಳಗ್ಗಿನ ಉಪಹಾರಕ್ಕೆ ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

* ರಾತ್ರಿ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳಿನೊಂದಿಗೆ ಈ ನೀರನ್ನು ಕುಡಿದರೆ ತೂಕ ಇಳಿಕೆಯಾಗುತ್ತದೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿಯೊಂದಿಗೆ ಟ್ರಿಪ್ ಹೋಗಬೇಕೆನ್ನುವರಿಗೆ ಈ ಸ್ಥಳಗಳು ಬೆಸ್ಟ್!

* ದಾಸವಾಳದ ಚಹಾವನ್ನು ಕುಡಿಯುವುದರಿಂದ ಕೊಬ್ಬನ್ನು ಕರಗಿಸಿ ತೂಕ ಇಳಿಕೆಗೆ ಸಹಕಾರಿಯಾಗಿದೆ.

* ಗ್ರೀನ್ ಟೀ ಎಲೆಯನ್ನು ಹದಿನೈದು ನಿಮಿಷಗಳ ಕಾಲ ಕುದಿಸಿ, ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಸುವುದರಿಂದ ತೂಕ ನಷ್ಟವಾಗುತ್ತದೆ.

* ಕುದಿಸಿದ ಶುಂಠಿ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ