ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣನ್ನು ಸೇವಿಸಿ. ಕಡಿಮೆ ಕ್ಯಾಲೋರಿಗಳು, ಹೆಚ್ಚಿನ ಫೈಬರ್, ಮತ್ತು ವಿಟಮಿನ್ ಎ, ಸಿ ಮತ್ತು ಇಗಳನ್ನು ಹೊಂದಿರುವ ಪಪ್ಪಾಯಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಪಪ್ಪಾಯಿಯು ಪಪೈನ್ ಮತ್ತು ಚೈಮೊಪಪೈನ್ ನಂತಹ ಕಿಣ್ವಗಳನ್ನು ಹೊಂದಿರುವ ಹೆಚ್ಚಿನ ಉಷ್ಣವಲಯದ ಹಣ್ಣು. ಈ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಲಭವಾಗಿಸಿ, ಮಲಬದ್ಧತೆಯನ್ನು ತಡೆಯುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ, ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.