Guru Nanak Jayanti 2022: ಗುರುನಾನಕ್ ಜಯಂತಿಯ ಆಚರಣೆ, ಹಿನ್ನೆಲೆ ಹಾಗೂ ಮಹತ್ವದ ಕುರಿತು ಇಲ್ಲಿದೆ ಮಾಹಿತಿ

|

Updated on: Nov 07, 2022 | 11:23 AM

ಗುರುನಾನಕ್ ಜಯಂತಿ ಅಥವಾ ಗುರುಪುರಬ್ ಪ್ರತಿ ವರ್ಷ ನವೆಂಬರ್ 8ರಂದು ಆಚರಿಸಲಾಗುತ್ತದೆ. ಈ ವರ್ಷ ಗುರುನಾನಕ್ ದೇವ್ ಜಿಯವರ 553 ನೇ ಜನ್ಮದಿನವಾಗಿ ಆಚರಿಸಲಾಗುತ್ತದೆ.

Guru Nanak Jayanti 2022: ಗುರುನಾನಕ್ ಜಯಂತಿಯ ಆಚರಣೆ, ಹಿನ್ನೆಲೆ ಹಾಗೂ ಮಹತ್ವದ ಕುರಿತು ಇಲ್ಲಿದೆ ಮಾಹಿತಿ
Guru Nanak Jayanti
Image Credit source: Vahrehvah
Follow us on

ಗುರುನಾನಕ್ ದೇವ್ ಜಿ ಅವರ ಜನ್ಮದಿನವನ್ನು ಗುರುನಾನಕ್ ಜಯಂತಿ ಅಥವಾ ಗುರುಪುರಬ್ ಎಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಇವರು ಸಿಖ್ ಧರ್ಮದ ಮೊದಲ ಗುರು ಹಾಗೂ ಈ ಧರ್ಮದ ಸಂಸ್ಥಾಪಕರು. ಆದ್ದರಿಂದ ಸಿಖ್ಖರ ಪ್ರಮುಖ ದಿನಗಳಲ್ಲಿ ಗುರುನಾನಕ್ ಜಯಂತಿ ಒಂದಾಗಿದೆ. ಈ ಹಬ್ಬವನ್ನು ಜಗತ್ತಿನಾದ್ಯಂತ ಸಿಖ್ಖರು ಪ್ರತಿ ವರ್ಷ ಕಾರ್ತಿಕ ಮಾಸ ಅಥವಾ ಕಾರ್ತಿಕ ಪೂರ್ಣಿಮೆಯಂದು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಆಚರಿಸುತ್ತಾರೆ.

ಗುರುನಾನಕ್ ಜಯಂತಿಯನ್ನು ಯಾವಾಗ ಆಚರಿಸಲಾಗುತ್ತದೆ?
ಗುರುನಾನಕ್ ಜಯಂತಿ ಅಥವಾ ಗುರುಪುರಬ್ ಪ್ರತಿ ವರ್ಷ ನವೆಂಬರ್ 8ರಂದು ಆಚರಿಸಲಾಗುತ್ತದೆ. ಈ ವರ್ಷ ಅಂದರೆ ನವೆಂಬರ್ 8, 2022 ರಂದು ಗುರುನಾನಕ್ ದೇವ್ ಜಿಯವರ 553 ನೇ ಜನ್ಮದಿನವಾಗಿ ಆಚರಿಸಲಾಗುತ್ತದೆ.

ಕ್ಯಾಲೆಂಡರ್ ಪ್ರಕಾರ ಕಾರ್ತಿಕ ಮಾಸದ 15 ನೇ ದಿನದಂದು ದೀಪಾವಳಿ ಬಂದರೆ, ಗುರುನಾನಕ್ ಜಯಂತಿಯು ಕಾರ್ತಿಕ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಬೆಳಕಿನ ಹಬ್ಬದ ಹದಿನೈದು ದಿನಗಳ ನಂತರ ಬರುತ್ತದೆ. ಈ ವರ್ಷದ, ಕಾರ್ತಿಕ ಪೂರ್ಣಿಮೆಯ ಸಂದರ್ಭದಲ್ಲಿ, ಸಂಪೂರ್ಣ ಚಂದ್ರಗ್ರಹಣ ಇರಲಿದೆ.

ಧಾರ್ಮಿಕ ಮೂಲಗಳ ಪ್ರಕಾರ, ಗುರು ನಾನಕ್ ದೇವ್ ಜಿ ಅವರು 1469 ರಲ್ಲಿ ತಲ್ವಂಡಿ ನಂಕಾನಾ ಸಾಹಿಬ್‌ನಲ್ಲಿ ಜನಿಸಿದರು. ಗುರುನಾನಕ್ ದೇವ್ ಜಿ ಅವರು ಸಿಖ್ ಧರ್ಮದ ಉಗಮಕ್ಕೆ ಅಡಿಪಾಯವನ್ನು ಹಾಕಿದವರು ಮತ್ತು ಸಿಖ್ ಧರ್ಮದ ಬಗೆಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದು ನಂಬಲಾಗುತ್ತದೆ. ಈ ಹಬ್ಬವು ಅವರ ಜೀವನ, ಸಾಧನೆಗಳು ಮತ್ತು ಪರಂಪರೆಯನ್ನು ಗೌರವಿಸುವ ಮೂಲ ಉದ್ದೇಶವನನ್ನು ಹೊಂದಿದೆ.

ಸಿಖ್ ಧರ್ಮದ ಪವಿತ್ರ ಧಾರ್ಮಿಕ ಗ್ರಂಥವಾದ ಗುರು ಗ್ರಂಥ ಸಾಹಿಬ್ ಪುಸ್ತಕದಲ್ಲಿ ಗುರುನಾನಕ್ ದೇವ್ ಜಿ ಅವರ ಎಲ್ಲಾ ಬೋಧನೆಗಳನ್ನು ಉಲ್ಲೇಖಿಸಲಾಗಿದೆ. ಎಲ್ಲರಿಗೂ ಮಾನವೀಯತೆ, ಸಮೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಸ್ವಾರ್ಥ ಸೇವೆಯನ್ನು ಈ ಗ್ರಂಥವು ಬೋಧಿಸುತ್ತವೆ.

ಈ ವಿಶೇಷ ದಿನದಂದು, ಗುರುದ್ವಾರಗಳಲ್ಲಿ ಅಖಂಡ ಪಥ ಎಂದು ಕರೆಯಲ್ಪಡುವ ಗುರು ಗ್ರಂಥ ಸಾಹಿಬ್‌ನ 48 ಗಂಟೆಗಳ ಕಾಲ ಪಠಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ, ಗುರು ಗ್ರಂಥ ಸಾಹಿಬ್ ಅನ್ನು ಪಲ್ಲಕ್ಕಿಯಲ್ಲಿ ಇರಿಸಿ ಗ್ರಂಥದ ಸ್ತೋತ್ರಗಳನ್ನು ಹಾಡುತ್ತಾ ಸಾಂಪ್ರದಾಯಿಕ ಸಂಗೀತ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆಯನ್ನು ನಡೆಸಲಾಗುತ್ತದೆ.

ಜೀವನ ಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:22 am, Mon, 7 November 22