Hair Care Tips: ಬೇಸಿಗೆಯಲ್ಲಿ ನಿಮ್ಮ ಕೂದಲನ್ನು ಪೋಷಿಸಲು ನೈಸರ್ಗಿಕ ಹೇರ್ ಕಂಡೀಷನರ್ ಇಲ್ಲಿದೆ

|

Updated on: May 16, 2023 | 10:39 AM

ಬೇಸಿಗೆಯ ಬಿಸಿಲು ಹಾಗೂ ಬೆವರು ನಿಮ್ಮ ಕೂದಲಿನ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಕೂದಲಿನ ಆರೋಗ್ಯಕ್ಕಾಗಿ ದುಬಾರಿ ಬೆಲೆಯ ಹೇರ್ ಕಂಡೀಷನರ್​​ಗಳನ್ನು ಬಳಸುವುದಕ್ಕಿಂತ ಈ ನೈಸರ್ಗಿಕ ಕಂಡಿಷನರ್‌ಗಳನ್ನು ಬಳಸಿ ಬೇಸಿಗೆಯಲ್ಲಿ ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ತೇವಾಂಶದಿಂದಿರಿಸಿ.

1 / 6
ಜೇನುತುಪ್ಪ:  ಎರಡು ಚಮಚ ಜೇನುತುಪ್ಪ ಹಾಗೂ 4 ಚಮಚ ಆಲಿವ್ ಎಣ್ಣೆಯನ್ನು ಬಳಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಮೂಲದಿಂದ ತುದಿಯವರೆಗೆ ಅನ್ವಯಿಸಿ ಮತ್ತು 30 ನಿಮಿಷಗಳ ನಂತರ ತೊಳೆಯಿರಿ. ಜೇನುತುಪ್ಪವು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

2 / 6
ಮೊಟ್ಟೆ: ನಿಮ್ಮ ಆಯ್ಕೆಯ ಯಾವುದೇ ಎಣ್ಣೆಯ ಜೊತೆಗೆ ಮೊಟ್ಟೆಯನ್ನು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಎಳೆಗಳಿಗೆ ಏಕರೂಪವಾಗಿ ಅನ್ವಯಿಸಬಹುದು ಮತ್ತು ಅದನ್ನು ತೊಳೆಯುವ ಮೊದಲು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಮೊಟ್ಟೆ ಕೂದಲನ್ನು ಪೋಷಿಸುತ್ತದೆ ಮತ್ತು ಪ್ರೋಟೀನ್‌ಗಳ ಸಮೃದ್ಧ ಮೂಲವಾಗಿದೆ.

3 / 6
ಕೋಕೋ ಬಟರ್​​​: ಇದರಲ್ಲಿ ತಲೆ ಕೂದಲಿಗೂ ಅನುಕೂಲಕರವಾದ ಹಲವು ಪೌಷ್ಟಿಕ ಸತ್ವಗಳು ಲಭ್ಯವಿವೆ. ತಲೆ ಹೊಟ್ಟು, ಕೂದಲು ಉದುರುವಿಕೆ, ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಹೊಂದಿರುವವರು ತಮ್ಮ ಸದೃಢವಾದ ಮತ್ತು ಸೊಂಪಾದ ಕೂದಲ ಬೆಳವಣಿಗೆಗೆ ಕೂದಲಿನ ಬೇರುಗಳನ್ನು ಸರಿ ಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

4 / 6
ಬಾಳೆಹಣ್ಣು: ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸಿಲಿಕಾದ ಸಮೃದ್ಧ ಮೂಲವಾದ ಬಾಳೆಹಣ್ಣುಗಳು ಕೂದಲು ಉದುರುವಿಕೆ ಸಮಸ್ಯೆಗೆ ಒಂದು ಉತ್ತಮ ಪರಿಹಾರವಾಗಿದೆ. ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ 2 ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ.  ಈ ಪೇಸ್ಟನ್ನು  ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ.

5 / 6
ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯು ಹಲವಾರು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. 3 ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆಯನ್ನು ನೆತ್ತಿಗೆ ಮಸಾಜ್ ಮಾಡಿ ಮತ್ತು 45 ನಿಮಿಷದಿಂದ ಒಂದು ಗಂಟೆಯವರೆಗೆ ಹಾಗೆಯೇ ಬಿಡಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

6 / 6
ಮೊಸರು: ಇದು ನೆತ್ತಿಯ ಕಿರಿಕಿರಿ ಮತ್ತು ಶುಷ್ಕತೆಯನ್ನು ನಿವಾರಿಸುತ್ತದೆ ಮತ್ತು ಕೂದಲನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಮೊಸರಿಗೆ ಅಲೋವೆರಾ ಹಾಗೂ ಜೇನುತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ . 20 ರಿಂದ 30 ನಿಮಿಷಗಳ ನಂತರ ತೊಳೆಯಿರಿ.

Published On - 10:39 am, Tue, 16 May 23