- Kannada News Photo gallery Kannada News Sauth Indian and Karnataka Tourist Places to plan weekend tour
Tourist Places: ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣ, ಗಿರಿಧಾಮಗಳಿವು…
ದಕ್ಷಿಣ ಭಾರತದ ಕರ್ನಾಟಕ ಹಾಗೂ ಸಮೀಪದ ರಾಜ್ಯಗಳಲ್ಲಿ ಅನೇಕ ಪ್ರವಾಸಿ ತಾಣಗಳು, ಗಿರಿಧಾಮಗಳಿವೆ. ಈ ಗಿರಿಧಾಮಗಳು ಬಹಳ ಪ್ರಸಿದ್ಧ ಮತ್ತು ಸುಂದರವಾಗಿವೆ. ವಾರಾಂತ್ಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಭೇಟಿ ನೀಡಬಹುದಾದ ಕೆಲವು ಪ್ರವಾಸಿ ತಾಣಗಳ, ಗಿರಿಧಾಮಗಳ ವಿವರ ಇಲ್ಲಿದೆ.
Updated on: May 15, 2023 | 7:39 PM

ಬೆಂಗಳೂರನ್ನು ಸಿಲಿಕಾನ್ ಸಿಟಿ ಎಂದೂ ಕರೆಯುತ್ತಾರೆ. ಇದಲ್ಲದೆ, ಬೆಂಗಳೂರು ತನ್ನ ಶ್ರೀಮಂತ ಸಂಸ್ಕೃತಿ, ನೈಸರ್ಗಿಕ ಸೌಂದರ್ಯ, ಸಂಪ್ರದಾಯ ಮತ್ತು ರಾತ್ರಿಜೀವನಕ್ಕೆ ಹೆಸರುವಾಸಿಯಾಗಿದೆ. ಬೆಂಗಳೂರಿನ ಸುತ್ತಲೂ ಹಾಗೂ ಬೆಂಗಳೂರಿನಿಂದ ಒಂದು ದಿನದ ಒಳಗಾಗಿ ಪ್ರಯಾಣಿಸಬಲ್ಲ ಅನೇಕ ಗಿರಿಧಾಮಗಳಿವೆ.

ನಂದಿ ಗಿರಿಧಾಮ: ವಾರಾಂತ್ಯದಲ್ಲಿ ಭೇಟಿ ನೀಡಲು ನಂದಿ ಗಿರಿಧಾಮ ಉತ್ತಮ ಸ್ಥಳವಾಗಿದೆ. ಇಲ್ಲಿ ಅನೇಕ ದೇವಾಲಯಗಳಿವೆ. ಇದಲ್ಲದೇ ಐತಿಹಾಸಿಕ ಕಟ್ಟಡಗಳೂ ಇವೆ. ಇಲ್ಲಿಂದ ಸೂರ್ಯೋದಯದ ಸೌಂದರ್ಯವನ್ನು ಆನಂದಿಸಬಹುದು. ಶ್ರೀ ಭೋಗ ನಂದೀಶ್ವರ ಗುಡಿ ಮತ್ತು ಟಿಪ್ಪು ಡ್ರಾಪ್ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. (ಫೋಟೋ ಕ್ರೆಡಿಟ್: Insta/eman.shots)

ಮಡಿಕೇರಿ: ಇದು ಪ್ರಕೃತಿ ಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಈ ಗಿರಿಧಾಮ ಕಾಫಿ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಹಚ್ಚ ಹಸಿರಿನ ದೃಶ್ಯಾವಳಿಗಳು ಮತ್ತು ಅವುಗಳ ಮೂಲಕ ಹರಿಯುವ ನೀರಿನ ತೊರೆಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ನೀವು ಇಲ್ಲಿ ಇರುಪ್ಪು ಸೇರಿದಂತೆ ಹಲವು ಜಲಪಾತಗಳನ್ನು ಹಾಗೂ ಇತರ ಸುಂದರ ತಾಣಗಳನ್ನು ವೀಕ್ಷಿಸಬಹುದು.

ಊಟಿ: ಊಟಿ ದಕ್ಷಿಣ ಭಾರತದ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ತಮಿಳುನಾಡು ವ್ಯಾಪ್ತಿಯಲ್ಲಿದೆ. ಊಟಿಯ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ. ಇಲ್ಲಿನ ಚಹಾ ತೋಟಗಳು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಸರ್ಕಾರಿ ರೋಸ್ ಗಾರ್ಡನ್, ಅವಲಾಂಚೆ ಲೇಕ್ ಮತ್ತು ಸೇಂಟ್ ಸ್ಟೀಫನ್ಸ್ ಚರ್ಚ್ ಅನ್ನು ನೋಡಲು ಇಲ್ಲಿಗೆ ಹೋಗಬಹುದು.

ಚಿಕ್ಕಮಗಳೂರು: ಚಿಕ್ಕಮಗಳೂರು ಬಹಳ ಸುಂದರವಾದ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆ. ಇದು ಬೆಂಗಳೂರಿನಿಂದ ಹತ್ತಿರದಲ್ಲಿದೆ. ವಾರಾಂತ್ಯದಲ್ಲಿ ಭೇಟಿಗೆ ಯೋಜನೆ ರೂಪಿಸಬಹುದು. ಇಲ್ಲಿನ ಪ್ರಶಾಂತ ವಾತಾವರಣವು ನಿಮಗೆ ನಿರಾಳತೆಯನ್ನು ನೀಡುತ್ತದೆ. ಹೆಬ್ಬೆ ವಾಟರ್ ಫಾಲ್ಸ್, ಶ್ರೀ ಶಾರದಾಂಬ ಅಮ್ಮನವರ ದೇವಸ್ಥಾನ ಮತ್ತು ಮುಳ್ಳಯ್ಯನಗಿರಿ ಬೆಟ್ಟಕ್ಕೆ ಭೇಟಿ ನೀಡಬಹುದು. (ಫೋಟೋ ಕೃಪೆ: Insta/ chikkamagaluru_team18)




