ಮಳೆಗಾಲದಲ್ಲಿ ತಲೆಸ್ನಾನ ಮಾಡಿದ ಬಳಿಕ ಕೂದಲು ಸಂಜೆಯವರೆಗೂ ಒಣಗುವುದೇ ಇಲ್ಲ ಇದರಿಂದಾಗಿ ಕೂದಲು ಉದುರುವ ಸಮಸ್ಯೆಯೂ ಹೆಚ್ಚಾಗುತ್ತದೆ. ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ, ಉದುರುವ ಕೂದಲಿಗೆ ಪರಿಹಾರ ಕಂಡುಕೊಳ್ಳಬಹುದು ಹಾಗೂ ಸುಂದರ ಕೇಶರಾಶಿಯನ್ನು ಪಡೆಯಬಹುದು.
ಒತ್ತಡ ಹೆಚ್ಚಾದರೂ ಕೂದಲು ಉದುರುತ್ತೆ
ಒತ್ತಡ ಹಾಗೂ ಖಿನ್ನತೆಯಿಂದ ನೀವು ಬಳಲುತ್ತಿದ್ದರೆ ಕೂಡಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಅದನ್ನು ಹೊರತುಪಡಿಸಿ ಹೊಟ್ಟು, ಡ್ರೈನೆಸ್ನಿಂದಾಗಿ ಕೂದಲು ಉದುರುತ್ತದೆ.
ಕೂದಲನ್ನು ಕವರ್ ಮಾಡಿ
ಮುಂಗಾರಿನಲ್ಲಿ ಹೊರಗೆ ಹೋಗುವಾಗ ಸ್ಕಾರ್ಫ್, ಬಟ್ಟೆ, ಕ್ಯಾಪ್, ಛತ್ರಿ ಯಾವುದಾದರೊಂದನ್ನು ಬಳಸಿ ಕೂದಲಿಗೆ ನೀರು ತಾಕದಂತೆ ನೊಡಿಕೊಳ್ಳಿ. ಮಳೆಯ ನೀರಿನಲ್ಲಿ ಮಾಲಿನ್ಯಕಾರಕ ಅಂಶಗಳಿರುತ್ತವೆ.
ಬೆಚ್ಚನೆಯ ಎಣ್ಣೆಯ ಮಸಾಜ್ ಮಾಡಿ
ಬೆಚ್ಚನೆಯ ಎಣ್ಣೆಯ ಮಸಾಜ್ ಮಾಡಿ, ಇದರಿಂದಾಗಿ ತಲೆಯಲ್ಲಿ ರಕ್ತಪರಿಚಲನೆ ಉತ್ತಮವಾಗಿ, ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗಲಿದೆ.
ಉತ್ತಮ ಆಹಾರ ಸೇವನೆ ಮಾಡಿ
ಮಳೆಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹೀಗಾಗಿ ನಿಮ್ಮ ಆರೋಗ್ಯ, ಚರ್ಮ ಹಾಗೂ ಕೂದಲಿನ ರಕ್ಷಣೆ ಮಾಡಲು ಉತ್ತಮ ಆಹಾರವನ್ನು ತಿನ್ನಿ. ಹೆಚ್ಚು ನೀರು ಕುಡಿಯಿರಿ, ವಿಟಮಿನ್ ಇ ಹೆಚ್ಚಿರುವ ಆಹಾರವನ್ನು ಸೇವಿಸಿ.
ಕೂದಲು ಉದುರುವುದನ್ನು ತಡೆಯಲು ಮನೆಮದ್ದು
ದಾಸವಾಳದ ಎಲೆಯನ್ನು ತೆಗೆದುಕೊಂಡು, ಬಿಸಿನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ. ನಂತರ ಅವನ್ನು ಕೈಯಿಂದಲೇ ಹಿಸುಕಿ ಆ ಲೋಳೆ ರಸವನ್ನು ತಲೆ ಸ್ನಾನವಾದ ನಂತರ ಕೂದಲಿಗೆ ಕಂಡಿಷರ್ ಲೇಪಿಸುವಂತೆ ಹಚ್ಚಿಕೊಂಡು ಕೆಲವು ನಿಮಿಷ ಮಸಾಜು ಮಾಡಿ. ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ನುಣುಪಾಗಿ ಹೊಳೆಯುತ್ತದೆ.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಗೆ ಭಂಗರಾಜ ಗಿಡದ ಎಲೆಗಳು, ಒಂದೆಲಗ ಗಿಡದ ಎಲೆಗಳು ಮತ್ತು ಮೆಂತೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಸೋಸಿ ಗಾಜಿನ ಬಾಟಲಿನಲ್ಲಿ ತುಂಬಿಡಿ .ಇದನ್ನು ನಿರಂತರವಾಗಿ ತಲೆಗೆ ಹಾಕಿ ಮಾಸಾಜು ಮಾಡಿ.