Happy Friendship Day 2026: ನೋವು-ನಲಿವಿನಲ್ಲಿ ಸದಾ ನಿಮ್ಮೊಂದಿಗಿರುವ ಬೆಸ್ಟ್‌ಫ್ರೆಂಡ್‌ಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ

ಜೀವನದಲ್ಲಿ ಬರುವ ಪ್ರತಿ ಸೋಲು ಗೆಲುವಿನಲ್ಲೂ ಜೊತೆಯಾಗಿ ನಿಲ್ಲುವವರೆಂದರೆ ಅದು ಸ್ನೇಹಿತರು. ಸ್ನೇಹ ಸಂಬಂಧ ಜಗತ್ತಿನ ನಿಸ್ವಾರ್ಥ ಬಂಧ ಅಂತಾನೇ ಹೇಳಬಹುದು. ಈ ಪವಿತ್ರ ಸ್ನೇಹದ ಮಹತ್ವವನ್ನು ಸಾರಲು ಪ್ರತಿವರ್ಷ ಆಗಸ್ಟ್‌ ಮೊದಲ ಭಾನುವಾರದಂದು ಫ್ರೆಂಡ್‌ಶಿಪ್‌ ಡೇ ಆಚರಿಸಲಾಗುತ್ತದೆ. ಈ ಶುಭ ದಿನ ನಿಮ್ಮ ನೋವು ನಲಿವಿನಲ್ಲಿ ಸದಾ ಜೊತೆಯಾಗಿರುವ ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ರೀತಿ ಶುಭಾಶಯಗಳನ್ನು ತಿಳಿಸಲು ಮರೆಯದಿರಿ.

Happy Friendship Day 2026: ನೋವು-ನಲಿವಿನಲ್ಲಿ ಸದಾ ನಿಮ್ಮೊಂದಿಗಿರುವ ಬೆಸ್ಟ್‌ಫ್ರೆಂಡ್‌ಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ
ಸ್ನೇಹಿತರ ದಿನದ ಶುಭಾಶಯಗಳು
Image Credit source: Getty Images

Updated on: Aug 02, 2026 | 10:22 AM

ಪ್ರತಿಯೊಬ್ಬರ ಬದುಕಿನಲ್ಲೂ ಬೆಲೆಯೇ ಕಟ್ಟಲಾಗದ ಸಂಬಂಧ ಎಂದರೆ ಅದು ಸ್ನೇಹ (Friendship).  ಸ್ನೇಹಕ್ಕೆ ಬಡವ, ಶ್ರೀಮಂತ ಎಂಬ ಭೇದವಿಲ್ಲ. ಜಾತಿ, ವಯಸ್ಸಿನ ಹಂಗಿಲ್ಲ. ನಿಸ್ವಾರ್ಥ ಪ್ರೀತಿಯ ಬಾಂಧವ್ಯವಿದ್ದರೆ ಅದು ಫ್ರೆಂಡ್‌ಶಿಪ್‌ ಮಾತ್ರ ಎಂದು ಹೇಳಬಹುದು. ಆದ್ದರಿಂದಲೇ ಸ್ನೇಹ ಸಂಬಂಧವನ್ನು ರಕ್ತ ಸಂಬಂಧಗಳಿಗೂ ಮೀರಿದ ಬಂಧವೆಂದು ಹೇಳುವುದು. ಫ್ರೆಂಡ್‌ಶಿಪ್‌ನ ಈ ಮಹತ್ವವನ್ನು ಸಾರಲು, ಸ್ನೇಹ ಸಂಬಂಧವನ್ನು ಸಂಭ್ರಮಿಸಲು ಭಾರತದಲ್ಲಿ ಪ್ರತಿವರ್ಷ ಆಗಸ್ಟ್‌ ಮೊದಲ ಭಾನುವಾರವನ್ನು ಫ್ರೆಂಡ್‌ಶಿಪ್‌ ಡೇ ಯನ್ನು ಆಚರಿಸಲಾಗುತ್ತದೆ. ಇದು ನಮ್ಮ ಸ್ನೇಹಿತರಿಗೆ ಶುಭ ಹಾರೈಸುವ, ಅವರ ಪ್ರೀತಿಗೆ ಧನ್ಯವಾದ ಅರ್ಪಿಸುವ ದಿನವಾಗಿದ್ದು, ಈ ದಿನ ನಿಮ್ಮ ನೋವು ನಲಿವಿನಲ್ಲಿ ಸದಾ ಜೊತೆಯಾಗಿರುವ ನಿಮ್ಮ ಬೆಸ್ಟ್‌ಫ್ರೆಂಡ್‌ಗೆ  ಶುಭಾಶಯ, ಧನ್ಯವಾದ ತಿಳಿಸಲು ಮರೆಯದಿರಿ.

ಸ್ನೇಹಿತರ ದಿನದ ಅರ್ಥಪೂರ್ಣ ಶುಭ ಸಂದೇಶಗಳು:

  • ನಾನು ನೋವು ಅಂದರೆ ಕಣ್ಣೀರು ಹಾಕುವ, ನೋವೆಲ್ಲಾ ನೂಕುವ, ಧೈರ್ಯನಾ ಹೇಳುವ ನನ್ನ ಪ್ರಾಣ ಸ್ನೇಹಿತೆಗೆ ಫ್ರೆಂಡ್‌ಶಿಪ್‌ ಡೇ ಯ ಶುಭಾಶಯಗಳು.
  • ನೀ ನನ್ನ ರಕ್ತ ಸಂಬಂಧಿಯೂ ಅಲ್ಲ, ನೀನು ನನ್ನೊಂದಿಗೆ ಆಡಿ ಬೆಳೆದವಳೂ ಅಲ್ಲ, ಬದುಕಿನ ಹಾದಿಯಲ್ಲಿ ಆಕಸ್ಮಿಕವಾಗಿ ಸಿಕ್ಕ ಅಮೂಲ್ಯ ಜೀವ ನೀನು. ನಿನ್ನಂಥ ಫ್ರೆಂಡ್‌ ಪಡೆದ ನಾನೇ ಧನ್ಯ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ನಮ್ಮ ಭೇಟಿ ಅಪರೂಪವಾಗಿರಬಹುದು ಆದರೆ ಮೊದಲಿದ್ದ ಸಲಿಗೆ, ಆತ್ಮೀಯತೆ, ಪ್ರೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾಗದೆ ಇರುವ ಅಮೂಲ್ಯ ರತ್ನ ನೀನು. ಈ ನನ್ನ ಮುದ್ದು ಸ್ನೇಹಿತೆಗೆ ಫ್ರೆಂಡ್‌ಶಿಪ್‌ ಡೇಯ ಶುಭಾಶಯಗಳು.
  • ನನ್ನಂತ ಬೆಸ್ಟ್‌ಫ್ರೆಂಡ್‌ ಸಿಗ್ಬೇಕು ಅಂದ್ರೆ ನೀನು ಪುಣ್ಯ ಮಾಡಿರ್ಬೇಕು ಅಂತ ತಮಾಷೆ ಮಾಡುತ್ತಿರುತ್ತೀನಿ ಅಲ್ವಾ, ಆದ್ರೆ ಏನ್‌ ಗೊತ್ತಾ, ನಿನ್ನಂತ ಬೆಸ್ಟ್‌ ಫ್ರೆಂಡ್‌ ಸಿಗೋದಕ್ಕೆ ನಾನು ತುಂಬಾ ಪುಣ್ಯ ಮಾಡಿದ್ದೇನೆ, ಈ ನನ್ನ ಫ್ರೆಂಡ್‌ಗೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ನನ್ನನ್ನು ಅರಿತುಕೊಂಡು ಸದಾ ನನ್ನ ಯೋಚನೆಗಳಿಗೆ ಸಾತ್‌ ನೀಡುವ ನಿನಗೆ ನಾನೆಂದು ಚಿರಋಣಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ
  • ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಮಾತ್ರವಲ್ಲ ನೋವಿನ ಸಮಯದಲ್ಲಿಯೂ ನನ್ನ  ಬೆನ್ನೆಲುಬಾಗಿ ನಿಂತಿದ್ದಕ್ಕಾಗಿ ಧನ್ಯವಾದ. ನನ್ನ ಬೆಸ್ಟ್‌ಫ್ರೆಂಡ್‌ಗೆ ಸ್ನೇಹಿತರ ದಿನದ ಶುಭಾಶಯಗಳು.
  • ಸ್ನೇಹಿತರ ದಿನದ ಶುಭಾಶಯಗಳು. ನಾನು ಹೊಂದಿರುವ ಅತ್ಯಂತ ಅಮೂಲ್ಯವಾದ ವಿಷಯವೆಂದರೆ ಅದು ನಿನ್ನ ಸ್ನೇಹ.
  • ನನ್ನ ಖುಷಿಯಲ್ಲಿ ಜೊತೆಯಾಗಿ ನಿಲ್ಲುವ, ದುಃಖದಲ್ಲಿದ್ದಾಗ ನನ್ನನ್ನು ಸಂತೈಸಿ ಶಕ್ತಿ ತುಂಬುವಈ ನನ್ನ ಬೆಸ್ಟ್‌ಫ್ರೆಂಡ್‌ಗೆ ಸ್ನೇಹ ದಿನದ ಶುಭಾಶಯಗಳು.
  • ನನ್ನ ಜೀವನದ ಅತಿ ಅಮೂಲ್ಯವಾದ ಉಡುಗೊರೆ ನೀನು. ನಮ್ಮ ಈ ಸ್ನೇಹ ಸದಾ ಕಾಲ ಹೀಗೆಯೇ ಇರಲಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ರಕ್ತ ಸಂಬಂಧ, ಜಾತಿ-ಧರ್ಮಗಳಿಗೂ ಮೀರಿದ ಸುಂದರ ಬಂಧ ಸ್ನೇಹ. ನನ್ನೆಲ್ಲಾ ಸ್ನೇಹಿತರಿಗೂ ಸ್ನೇಹಿತರ ದಿನದ ಶುಭಾಶಯಗಳು.
  • ನಿನ್ನ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಗೊಳ್ಳಲಿ, ಆರೋಗ್ಯ, ಆಯಸ್ಸು ವೃದ್ಧಿಯಾಗಲಿ. ನನ್ನ ಪ್ರೀತಿಯ ಗೆಳೆಯ/ಗೆಳತಿಗೆ ಫ್ರೆಂಡ್‌ಶಿಪ್‌ ಡೇಯ ಶುಭಾಶಯಗಳು.
  • ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನಾನು ನಂಬಬಹುದಾದ ವ್ಯಕ್ತಿ ನೀವು. ನಮ್ಮ ಸುಂದರ ಸ್ನೇಹ ಶಾಶ್ವತವಾಗಿ ಉಳಿಯಲಿ. ಸ್ನೇಹ ದಿನದ ಶುಭಾಶಯಗಳು.
  • ನಗೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ. ನಮ್ಮ ಈ ಸುಂದರ ಸ್ನೇಹ ಶಾಶ್ವತವಾಗಿ ಉಳಿಯಲಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ಇರಬೇಕು ಒಬ್ಬ ಫ್ರೆಂಡ್‌ ನೋವುಗಳಿಗೆ ಸ್ಪಂದಿಸುತ್ತಾ, ಖುಷಿಯನ್ನು ಹಂಚಿಕೊಳ್ಳುತ್ತಾ, ತಪ್ಪುಗಳನ್ನು ತಿದ್ದುತ್ತಾ, ಆಗಾಗ್ಗೆ ರೇಗಿಸುತ್ತಾ, ಬದುಕಿಗೆ ಸ್ಫೂರ್ತಿ ತುಂಬುವ ನಿನ್ನಂಥ ಫ್ರೆಂಡ್‌ ಇರಬೇಕು. ನನ್ನ ಬೆಸ್ಟ್‌ ಫ್ರೆಂಡ್‌ಗೆ ಸ್ನೇಹಿತರ ದಿನದ ಶುಭಾಶಯಗಳು.
  • ಬಡತನ ಸಿರಿತನ ಕಡೆತನಕ ಉಳಿಯುವುದಿಲ್ಲ ಆದರೆ ಗೆಳೆತನ ಮಾತ್ರ ಕೊನೆತನಕ ಉಳಿಯುತ್ತದೆ. ನನ್ನೆಲ್ಲಾ ಸ್ನೇಹಿತರಿಗೂ ಹ್ಯಾಪಿ ಫ್ರೆಂಡ್‌ಶಿಪ್‌ ಡೇ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us