Happy Muharram Wishes 2024: ಮೊಹರಂ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯ ಕೋರಿ

| Updated By: ಅಕ್ಷತಾ ವರ್ಕಾಡಿ

Updated on: Jul 16, 2024 | 2:30 PM

ಮೊಹರಂ ಹಬ್ಬವು ಮುಸ್ಲಿಂಮರ ದುಃಖವನ್ನು ಸೂಚಿಸುವ ಶೋಕಾಚರಣೆಯ ಹಬ್ಬವಾಗಿದೆ. ಯಾವುದೇ ತಾರತಮ್ಯವಿಲ್ಲದೇ, ಸರ್ವ ಧರ್ಮದವರು ಒಟ್ಟಾಗಿ ಸೇರಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಮೊಹರಂ ಜುಲೈ 17 ರಂದು ಆಚರಿಸಲಾಗುತ್ತಿದ್ದು, ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ಕೋರಲು ಸಂದೇಶಗಳು ಇಲ್ಲಿದೆ.

Happy Muharram Wishes 2024: ಮೊಹರಂ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯ ಕೋರಿ
Happy Muharram Wishes 2024
Follow us on

ಮೊಹರಂ ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದು. ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿಯವರ ತ್ಯಾಗ ಬಲಿದಾನವನ್ನು ಸ್ಮರಿಸುವ ದಿನವಾಗಿದೆ. ಮುಸ್ಲಿಂಮರು ಒಂಬತ್ತು ದಿನಗಳ ಕಾಲ ಉಪವಾಸ ಆಚರಿಸಿ 10ನೇ ದಿನ ಅಶುರಾ ಎಂದು ಆಚರಿಸುತ್ತಾರೆ. ಈ ಬಾರಿ ಜುಲೈ 8 ರಿಂದ ಮೊಹರಂ ಆರಂಭವಾಗಿದ್ದು ಜುಲೈ 17 ರಂದು ಅಶುರಾವನ್ನು ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಸಂದೇಶಗಳನ್ನು ಕಳುಹಿಸುವ ಮೂಲಕ ಹಬ್ಬಕ್ಕೆಕ್ಕೆ ಶುಭಾಶಯಗಳನ್ನು ಕೋರಿ.

  1. ಇಸ್ಲಾಮಿಕ್‌ ವರ್ಷದ ಮೊದಲ ತಿಂಗಳಾದ ಮೊಹರಂ ಅಲ್ಲಾನ ಆಶೀರ್ವಾದವು ಸದಾ ನಿಮ್ಮ ಮೇಲಿರಲಿ.
  2. ಇಸ್ಲಾಮಿಕ್ ಹೊಸ ವರ್ಷ ಪ್ರಾರಂಭವಾಗುವಾಗ ಈ ವರ್ಷ ಪೂರ್ತಿ ಅಲ್ಲಾನು ನಿಮಗೆ ಆರೋಗ್ಯ ಐಶ್ವರ್ಯ, ಜೀವನದಲ್ಲಿ ಅಭಿವೃದ್ಧಿ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
  3.  ಈ ಮೊಹರಂನಲ್ಲಿ ಇಮಾನ್‌ ಹುಸೈನ್‌ ತ್ಯಾಗವನ್ನು ಸ್ಮರಿಸೋಣ ಆತನ ತಿಳಿಸಿದ ಮೌಲ್ಯಗಳನ್ನು ಕಲಿಯೋಣ, ಇಸ್ಲಾಮಿಕ್ ಹೊಸ ವರ್ಷದ ಶುಭಾಶಯಗಳು.
  4. ಮೊಹರಂ-ಇಸ್ಲಾಮಿಕ್ ವರ್ಷ ನಿಮಗೆ ಆರೋಗ್ಯ, ಐಶ್ವರ್ಯ, ಶಾಂತಿ, ಸಂತೋಷ ಹಾಗೂ ನೆಮ್ಮದಿಯುತ ಜೀವನವನ್ನು ತರಲಿ ಎಂದು ಆಶಿಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು.
  5. ಇಸ್ಲಾಂ ಧರ್ಮದ ಹೊಸ ವರ್ಷ ಮೊಹರಂ ಹಬ್ಬದ ಹಾರ್ಥಿಕ ಶುಭಾಶಯಗಳು.
  6. ಅಲ್ಲಾನ ಕೃಪೆಯು ನಿಮ್ಮ ಕುಟುಂಬದ ಮೇಲಿರಲಿ. ಸದಾ ಒಳ್ಳೆಯದೇ ಆಗಲಿ ಎಂದು ಹಾರೈಸುವ ಮನಸ್ಸು ನನ್ನದು. ಹೊಸ ವರ್ಷದ ಶುಭಾಶಯಗಳು.
  7. ತ್ಯಾಗ ಬಲಿದಾನದ ಪ್ರತೀಕವಾದ ಮೊಹರಂ ಭಾವೈಕ್ಯತೆಯ ಹಬ್ಬ, ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಈ ಹೊಸ ವರ್ಷವು ಖುಷಿಯನ್ನೇ ತರಲಿ.
  8. ನಿಮಗೂ ನಿಮ್ಮ ಕುಟುಂಬದವರು ಆರೋಗ್ಯಕರ ಜೀವನವನ್ನು ನಡೆಸುವಂತಾಗಲಿ, ಮೊಹರಂ ಹಬ್ಬದ ಶುಭಾಶಯಗಳು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ