ಡಯಾಬಿಟಿಸ್ ಇರುವವರು ದಿನಕ್ಕೆ ಎಷ್ಟು ಹೊತ್ತು ನಡೆಯಬೇಕು?

Walking Benefits: ಮಧುಮೇಹಿಗಳಿಗೆ ವಾಕಿಂಗ್ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ವಾಕಿಂಗ್ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಇದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ (ರಕ್ತದ ಸಕ್ಕರೆ) ಮಟ್ಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಡಯಾಬಿಟಿಸ್ ಇರುವವರು ದಿನಕ್ಕೆ ಎಷ್ಟು ಹೊತ್ತು ನಡೆಯಬೇಕು?
ವಾಕಿಂಗ್
Image Credit source: iStock

Updated on: Nov 14, 2023 | 7:35 PM

ನಡೆಯುವುದು ಅಥವಾ ವಾಕಿಂಗ್ ನಮ್ಮ ದೇಹಕ್ಕೆ ಬಹಳ ಒಳ್ಳೆಯ ವ್ಯಾಯಾಮ. ಅದರಲ್ಲೂ ಮಧುಮೇಹವನ್ನು ತಡೆಯಲು ಈ ವಾಕಿಂಗ್ ಬಹಳ ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಹೆಚ್ಚು ಸಕ್ರಿಯವಾಗಿರುವವರಿಗೆ ಮಧುಮೇಹ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ವಾಕಿಂಗ್ ನೀವು ಸಕ್ರಿಯವಾಗಿರಲು ಒಂದು ಉತ್ತಮ ಮಾರ್ಗವಾಗಿದೆ. ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ದಿನಕ್ಕೆ 10,000 ಹೆಜ್ಜೆಗಳನ್ನು ಅಥವಾ ದಿನಕ್ಕೆ ಕನಿಷ್ಠ 30 ನಿಮಿಷಗಳವರೆಗೆ ನಡೆಯಲು ಪ್ರಯತ್ನಿಸಿ. ನೀವು ಒಂದೇ ಬಾರಿಗೆ 30 ನಿಮಿಷಗಳ ಕಾಲ ನಡೆಯಲು ಸಾಧ್ಯವಾಗದಿದ್ದರೆ ದಿನವಿಡೀ ಆಗಾಗ ಸ್ವಲ್ಪ ಪ್ರಮಾಣದಲ್ಲಿ ನಡೆಯಲು ಪ್ರಯತ್ನಿಸಿ. ಉದಾಹರಣೆಗೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ 10 ನಿಮಿಷಗಳ ಕಾಲ ನಡೆದರೂ ದಿನಕ್ಕೆ 30 ನಿಮಿಷ ನಡೆದಂತಾಗುತ್ತದೆ.

ಮಧುಮೇಹಿಗಳಿಗೆ ವಾಕಿಂಗ್ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ವಾಕಿಂಗ್ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಇದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ (ರಕ್ತದ ಸಕ್ಕರೆ) ಮಟ್ಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೇ, ತೂಕ ಇಳಿಸಲು, ಮೂಳೆ ಮತ್ತು ಸ್ನಾಯುವಿನ ಬಲ ಹೆಚ್ಚಿಸಲು, ರಕ್ತದೊತ್ತಡ ನಿಯಂತ್ರಿಸಲು, ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹೃದಯದ ಆರೋಗ್ಯ ಕಾಪಾಡಲು, ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಒತ್ತಡದ ಮಟ್ಟ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಡಯಾಬಿಟಿಸ್ ಇರುವವರು ಓಡಬಾರದಾ? ಅಸಲಿ ಸಂಗತಿ ಇಲ್ಲಿದೆ

ಯಾವಾಗಲೂ ನಿಧಾನವಾಗಿ ವಾಕಿಂಗ್ ಪ್ರಾರಂಭಿಸಿ ಮತ್ತು ಚುರುಕಾದ ನಡಿಗೆಗೆ ಹೆಚ್ಚಿಸಿ. ಕೊನೆಯಲ್ಲಿ ನಿಧಾನ ನಡಿಗೆಯೊಂದಿಗೆ ವಾಕಿಂಗ್ ನಿಲ್ಲಿಸಿ. ವಾಕಿಂಗ್ ಮಾಡಲು ಸುಲಭ ವಿಧಾನವೆಂದರೆ ನಿಮ್ಮ ಊಟದ ವಿರಾಮದ ಸಮಯದಲ್ಲಿ ನಡೆಯುವುದು, ಫೋನ್​ನಲ್ಲಿ ಅಥವಾ ಬೇರೊಬ್ಬರೊಂದಿಗೆ ಮಾತನಾಡುತ್ತಾ ನಡೆಯುವುದು. ಆಗ ನಡೆದಿದ್ದು ನಿಮಗೆ ಗೊತ್ತಾಗುವುದಿಲ್ಲ, ಸುಸ್ತಾಗುವುದೂ ಇಲ್ಲ.

ಲಿಫ್ಟ್​ ಬಳಸುವ ಬದಲು ಮೆಟ್ಟಿಲು ಹತ್ತಿ-ಇಳಿಯಿರಿ. ನಡೆಯುವಾಗ ಒಂದು ಗಂಟೆ ಮೊದಲು ಒಂದು ಲೋಟ ನೀರು ಕುಡಿಯಿರಿ, ನಂತರ ನಡೆಯುವಾಗ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಕಪ್ ನೀರು ಕುಡಿಯಿರಿ. ನಿಮ್ಮ ನಡಿಗೆಯ ಕೊನೆಯಲ್ಲಿ ಇನ್ನೊಂದು ದೊಡ್ಡ ಲೋಟ ನೀರು ಕುಡಿಯಿರಿ. ಇದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ವ್ಯಾಯಾಮವು ಸ್ನಾಯುಗಳಲ್ಲಿ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ