Urine Problem: ಮೂತ್ರದ ದುರ್ವಾಸನೆ ಅನುಭವಿಸುತ್ತಿದ್ದೀರಾ? ಇದಕ್ಕೆ ಇದೇ ಕಾರಣ ಇರಬಹುದು, ನಿರ್ಲಕ್ಷಿಸಬೇಡಿ

| Updated By: Rakesh Nayak Manchi

Updated on: Aug 22, 2022 | 9:49 AM

ನೀವು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದಾಗ ನೀವು ಹೆಚ್ಚು ಕಾಫಿ, ಚಹಾ ಅಥವಾ ಸೋಡಾವನ್ನು ಸೇವಿಸಿದಾಗ ಮೂತ್ರದ ಕೆಟ್ಟ ವಾಸನೆ ಬರಬಹುದು. ಮೂತ್ರ ಬರುವ ಅನುಭವವಾಗಿ ವಾಸನೆಯೊಂದಿಗೆ ಹನಿ ಮೂತ್ರ ಬರುತ್ತಿದೆ ಎಂದಾದರೆ ವೈದ್ಯರನ್ನು ಸಂಪರ್ಕಿಸಿ.

Urine Problem: ಮೂತ್ರದ ದುರ್ವಾಸನೆ ಅನುಭವಿಸುತ್ತಿದ್ದೀರಾ? ಇದಕ್ಕೆ ಇದೇ ಕಾರಣ ಇರಬಹುದು, ನಿರ್ಲಕ್ಷಿಸಬೇಡಿ
ಸಾಂದರ್ಭಿಕ ಚಿತ್ರ
Follow us on

ಬದಲಾಗುತ್ತಿರುವ ಋತುಮಾನಗಳು ಅಥವಾ ಜೀವನಶೈಲಿಯಲ್ಲಿನ ಕೆಲವು ಅನಗತ್ಯ ಬದಲಾವಣೆಗಳಿಂದ ದೇಹವು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಇದರಲ್ಲಿ ಮೂತ್ರದ ಕೆಟ್ಟ ವಾಸನೆ ಕೂಡ ಒಂದು ಕಾರಣ. ನೀವು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದಾಗ ನೀವು ಹೆಚ್ಚು ಕಾಫಿ, ಚಹಾ ಅಥವಾ ಸೋಡಾವನ್ನು ಸೇವಿಸಿದಾಗ ಮೂತ್ರದ ಕೆಟ್ಟ ವಾಸನೆ ಬರಬಹುದು. ಇವುಗಳಲ್ಲದೆ, ಇಂತಹ ಇನ್ನಿತರ ಕಾರಣಗಳಿಂದ ಮೂತ್ರದ ವಾಸನೆಯನ್ನು ಹೊಂದಿರುತ್ತದೆ. ಅಂತಹ ಸಮಯದಲ್ಲಿ ತಕ್ಷಣ ಕಾಳಜಿ ವಹಿಸಬೇಕಿದೆ. ಇಲ್ಲವಾದಲ್ಲಿ ಆರೋಗ್ಯ ತೀವ್ರ ಹದಗೆಡಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಹಾಗಿದ್ದರೆ ಮೂತ್ರದ ವಾಸನೆಗೆ ಕಾರಣವಾಗಿರುವ ಇನ್ನಿತರ ಕಾರಣಗಳು ಯಾವುವು? ಅವುಗಳು ಈ ಕೆಳಗಿನಂತಿವೆ:

ನಿರ್ಜಲೀಕರಣ: ದೇಹವು ತೀವ್ರವಾಗಿ ನಿರ್ಜಲೀಕರಣಗೊಂಡಾಗ (ನಿರ್ಜಲೀಕರಣ), ಮೂತ್ರದ ಬಣ್ಣವು ಮೊದಲು ದಪ್ಪ ಹಳದಿಯಾಗುತ್ತದೆ. ಇದರ ನಂತರ ಮೂತ್ರದಲ್ಲಿ ಸುಡುವ ಸಮಸ್ಯೆ ಉಂಟಾಗುತ್ತದೆ. ಆಗಲೂ ಗಮನ ಹರಿಸದಿದ್ದರೆ ಪದೇ ಪದೇ ಮೂತ್ರ ಬರುತ್ತಿದ್ದಂತೆ ಆಗುತ್ತದೆ, ಆದರೆ ಮೂತ್ರ ಬರುವುದಿಲ್ಲ. ಬದಲಾಗಿ ಹನಿಗಳು ಮಾತ್ರ ಬರುತ್ತವೆ. ಇಂತಹ ಸಂದರ್ಭದಲ್ಲಿ ಮೂತ್ರದಿಂದ ವಾಸನೆ ಬರುತ್ತಿದ್ದರೆ ಎಚ್ಚರಿಕೆ ವಹಿಸುವುದು ಅತೀ ಅವಶ್ಯಕ. ಏಕೆಂದರೆ ಈ ಸ್ಥಿತಿಯು ದೇಹದ ಆಂತರಿಕ ಅಂಗಗಳಲ್ಲಿ ಸೋಂಕನ್ನು ಹೆಚ್ಚಿಸುವ ಸಂಕೇತವಾಗಿದೆ.

ಆಹಾರ: ಹಸಿರು ಈರುಳ್ಳಿ, ಬೆಳ್ಳುಳ್ಳಿ, ಕರಿಬೇವಿನ ಎಲೆಗಳು, ಮೊಳಕೆಕಾಳುಗಳು, ಇಂಗು, ಮೊಳಕೆಕಾಳುಗಳನ್ನು ನಿಯಮಿತವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಜನರು ತೀವ್ರವಾದ ವಾಸನೆಯ ಮೂತ್ರವನ್ನು ಹೊಂದಿರುತ್ತಾರೆ. ಆದಾಗ್ಯೂ ಈ ಸ್ಥಿತಿಗೆ ಭಯಪಡುವ ಅಗತ್ಯವಿಲ್ಲ, ಏಕೆಂದರೆ ಇದು ಮೂತ್ರದಲ್ಲಿ ಗಂಧಕದ ಹೆಚ್ಚಳದಿಂದ ಉಂಟಾಗುತ್ತದೆ.

ಕೆಟ್ಟ ಅಭ್ಯಾಸಗಳು: ಮದ್ಯಪಾನ ಮಾಡುವವರಲ್ಲಿ ಮೂತ್ರವು ಬಲವಾದ ವಾಸನೆಯನ್ನು ಹೊಂದಿರುತ್ತದೆ. ಇಂತಹ ಸ್ಥಿತಿ ಧೂಮಪಾನಿಗಳಲ್ಲೂ ಇರುತ್ತದೆ. ಅತಿಯಾಗಿ ಕುಡಿಯುವವರು ಅಥವಾ ನಿಯಮಿತವಾಗಿ ಸೋಡಾ ಮತ್ತು ಕೋಕ್‌ನಂತಹ ಪಾನೀಯಗಳನ್ನು ಕುಡಿಯುವವರು ಮೂತ್ರದ ವಾಸನೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಇದು ಮೂತ್ರದ ಕಾಯಿಲೆಯ ಲಕ್ಷಣವಲ್ಲ, ಆದರೆ ಈ ಎಲ್ಲಾ ಕಾರಣಗಳು ದೇಹವನ್ನು ಒಳಗಿನಿಂದ ದುರ್ಬಲಗೊಳಿಸುತ್ತವೆ. ಆದ್ದರಿಂದ, ಈ ಅಭ್ಯಾಸಗಳನ್ನು ಮೊದಲೇ ನಿಯಂತ್ರಿಸುವುದು ಅವಶ್ಯಕ.

ಮಹಿಳೆಯರಲ್ಲಿ ಮೂತ್ರದ ವಾಸನೆ ಸಮಸ್ಯೆ

ಸಾಮಾನ್ಯವಾಗಿ ಮಹಿಳೆಯರು ಈ ಕಾರಣಗಳಿಂದ ಮೂತ್ರದ ವಾಸನೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳೆಂದರೆ:

  • ಯುಟಿಐ (ಮೂತ್ರನಾಳದ ಸೋಂಕು) ಸೋಂಕು
  • ಕಡಿಮೆ ನೀರು ಕುಡಿಯುವ ಅಭ್ಯಾಸ
  • ಗರ್ಭಾವಸ್ಥೆಯಲ್ಲಿ ಮೂತ್ರದ ವಾಸನೆ
  • ಔಷಧಿಗಳ ಬಳಕೆ
  • ಮದ್ಯಪಾನ-ಧೂಮಪಾನ

ಗರ್ಭಾವಸ್ಥೆಯ ಹೊರತಾಗಿ ಈ ಯಾವುದೇ ಸಮಸ್ಯೆಗಳು ದೀರ್ಘಕಾಲದವರೆಗೆ ಮುಂದುವರಿದರೆ ಮಹಿಳೆಯರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಕೆಟ್ಟ ಅಭ್ಯಾಸಗಳನ್ನು ನಿಯಂತ್ರಿಸಿ. ಯುಟಿಐ ಸಮಸ್ಯೆಯಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವವರು ಅಥವಾ ಯಾವುದೇ ಕಾಯಿಲೆಗೆ ನಿಯಮಿತವಾಗಿ ಔಷಧಿಯನ್ನು ಸೇವಿಸುವವರಲ್ಲಿ ಮೂತ್ರವು ವಾಸನೆಯನ್ನು ಹೊಂದಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚಿಂತಿಸುವ ಬದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ನಿಖರವಾದ ಕಾರಣವನ್ನು ಕಂಡುಕೊಳ್ಳಿ.

ಮತ್ತಷ್ಟು ಲೈಫ್​ಸ್ಟೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Mon, 22 August 22