ನೀವು ಯಾರನ್ನೇ ಪ್ರೀತಿಸುತ್ತಿದ್ದರೂ ಸಹ ನಿಮಗೆ ಅವರನ್ನು ಮದುವೆಯಾಗಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳುವುದು ಎಂದಿಗೂ ಸುಲಭವಲ್ಲ. ಯಾರೊಂದಿಗಾದರೂ ಇಡೀ ಜೀವನವನ್ನು ಕಳೆಯಲು, ಅದಕ್ಕೆ ಕೇವಲ ಪ್ರೀತಿಗಿಂತ ಹೆಚ್ಚಿನದಾದ ನಂಬಿಕೆ, ಹೊಂದಾಣಿಕೆ, ಸಮಾನ ಮೌಲ್ಯಗಳು ಮತ್ತು ಜೀವನದ ಗುರಿಗಳು, ಗೌರವ ಇವೆಲ್ಲವೂ ಒಬ್ಬ ಸಂಗಾತಿಯಾಗುವವರಲ್ಲಿ ಇರಬೇಕಾಗುತ್ತದೆ. ವ್ಯವಸ್ಥಿತ ಮದುವೆಯ (ಅರೇಂಜ್ಡ್ ಮ್ಯಾರೇಜ್) ವಿಷಯಕ್ಕೆ ಬಂದಾಗ, ನೀವು ಬಹುತೇಕ ಅಪರಿಚಿತರನ್ನು ಮದುವೆಯಾಗುತ್ತಿರುವುದರಿಂದ ಈ ಹುಡುಕಾಟವು ಇನ್ನಷ್ಟು ಜಟಿಲವಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಜನರು ಮದುವೆಯಾಗುವ ಮೊದಲು ಮೊದಲು ಒಬ್ಬರನ್ನೊಬ್ಬರು ತಿಳಿದುಕೊಳ್ಳುತ್ತಾರೆ, ಆದರೆ ಅದು ಕೆಲವೊಮ್ಮೆ ಸರಿಯಾಗಬಹುದು ಅಥವಾ ಆಗದೆಯೂ ಇರಬಹುದು ಹಾಗಾಗಿ ಸಂಭಾವ್ಯ ಜೀವನ ಸಂಗಾತಿಯನ್ನು ಹೇಗೆ ನಿರ್ಣಯಿಸುವುದು ಎಂಬುದನ್ನು ತಿಳಿದಿರಬೇಕು.
ವ್ಯವಸ್ಥಿತ ಅಂದರೆ ಮನೆಯಲ್ಲಿ ನೋಡಿದ ಹುಡುಗನ ಜೊತೆಯಲ್ಲಿ ನೀವು ಮದುವೆ ಆಗುವಂತದ್ದು. ಇದು ವಿಶ್ವದ ಅನೇಕ ಭಾಗಗಳಲ್ಲಿ ಸಾಂಸ್ಕೃತಿಕ ಮಾನದಂಡವಾಗಿದೆ. ಅಲ್ಲಿ ಕುಟುಂಬ ಸದಸ್ಯರು ಜೀವನ ಸಂಗಾತಿಯನ್ನು ಹುಡುಕಲು ಎಲ್ಲ ರೀತಿಯಿಂದಲೂ ಸಹಾಯ ಮಾಡುತ್ತಾರೆ. ಪ್ರೀತಿಯನ್ನು ಕಂಡುಹಿಡಿಯುವ ಈ ವಿಧಾನವು ಅಸಾಂಪ್ರದಾಯಿಕವೆಂದು ತೋರಿದರೂ, ವ್ಯವಸ್ಥಿತ ವಿವಾಹಗಳು ತೃಪ್ತಿದಾಯಕ ಮತ್ತು ಯಶಸ್ವಿ ಸಂಬಂಧಗಳಿಗೆ ಕಾರಣವಾಗಬಹುದು. ವ್ಯವಸ್ಥಿತ ವಿವಾಹದಲ್ಲಿ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಕಷ್ಟಕರವಾಗಿರುತ್ತದೆ. ಆದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಮಯ ಮತ್ತು ನಿಮ್ಮ ಪ್ರಯತ್ನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ತಜ್ಞರು.
1. ನಿಮ್ಮನ್ನು ನೀವು ತಿಳಿದುಕೊಳ್ಳಿ: ನಿಮ್ಮ ಜೀವನ ಸಂಗಾತಿಯ ಬಗ್ಗೆ ನಿಮ್ಮ ಮೌಲ್ಯಗಳು, ಗುರಿಗಳು ಮತ್ತು ನಿರೀಕ್ಷೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಏಕೆಂದರೆ ಇದು ಬಹಳ ಮುಖ್ಯ. ಬಳಿಕ ನಿಮ್ಮೊಂದಿಗೆ ಹೊಂದಿಕೆಯಾಗುವ ಮತ್ತು ಒಂದೇ ರೀತಿಯ ಆಕಾಂಕ್ಷೆಗಳನ್ನು ಹೊಂದಿರುವ ಯಾರನ್ನಾದರೂ ಗುರುತಿಸಲು ನಿಮಗೆ ಇವೆಲ್ಲವೂ ಸಹಾಯ ಮಾಡುತ್ತದೆ.
2. ಸಂವಹನ: ಆರಂಭಿಕ ಸಮಾರಂಭಗಳಲ್ಲಿ ನಿಮ್ಮ ಸಂಭಾವ್ಯ ಸಂಗಾತಿಯೊಂದಿಗೆ ನೀವು ಎಷ್ಟು ಚೆನ್ನಾಗಿ ಸಂವಹನ ನಡೆಸಬಹುದು ಎಂಬುದರ ಬಗ್ಗೆ ಗಮನ ಹರಿಸಿ ಮತ್ತು ನಿಮ್ಮನ್ನು ನೀವು ವ್ಯಕ್ತಪಡಿಸಲು ಆರಾಮದಾಯಕವಾಗಿದೆಯೋ ಇಲ್ಲವೋ ಖಚಿತಪಡಿಸಿಕೊಳ್ಳಿ. ಏಕೆಂದರೆ ಯಶಸ್ವಿ ಸಂಬಂಧದಲ್ಲಿ ಸಂವಹನವು ಅತ್ಯಗತ್ಯ. ವಿಶೇಷವಾಗಿ ಮೊದಲೇ ಅಸ್ತಿತ್ವದಲ್ಲಿರುವ ಪ್ರಣಯ ಸಂಬಂಧವಿಲ್ಲದ ವ್ಯವಸ್ಥಿತ ವಿವಾಹದಲ್ಲಿ, ನಿಮ್ಮನ್ನು ನೀವು ವ್ಯಕ್ತಪಡಿಸಲು ಒಳ್ಳೆಯ ವಾತಾವರ ಅತ್ಯಗತ್ಯ. ಅಲ್ಲದೆ ಕಷ್ಟಕರ ವಿಷಯಗಳನ್ನು ಗೌರವಯುತವಾಗಿ ಮತ್ತು ಮುಕ್ತವಾಗಿ ಚರ್ಚಿಸಬಹುದು.
3. ಆಕರ್ಷಣೆಗಿಂತ ಜೀವನದ ಪಾತ್ರ ಮುಖ್ಯ: ದೈಹಿಕ ಆಕರ್ಷಣೆ ಮುಖ್ಯವಾಗಿದ್ದರೂ ಸಹ ಅದ್ಕಕಿಂತ ಮಿಗಿಲಾದದ್ದು ಪ್ರಾಮಾಣಿಕತೆ, ಗೌರವ ಮತ್ತು ಎಲ್ಲರ ಮೇಲು ದಯೆ ತೋರುವ ಗುಣ. ಹಾಗಾಗಿ ಅಂದ, ಚೆಂದಕ್ಕಿಂತ ಗುಣ ನಡತೆ ಬೇಕು. ಜೀವನದಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರ, ಬೇರೆಯವರೊಂದಿಗೆ ಹೇಗೆ ಬೆರೆಯುತ್ತಾರೆ ಎಂಬುದು ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ.
ಇದನ್ನೂ ಓದಿ: ಪ್ರೀತಿಪಾತ್ರರ ಜತೆಗಿನ ಸಂಬಂಧ ಕಳೆದುಕೊಳ್ಳುವ ಆತಂಕ ಇದೆಯೇ? ತಪ್ಪು ಯೋಚನೆಗೆ ಇರಲಿ ಒಂದು ಪೂರ್ಣವಿರಾಮ
4. ಹಂಚಿಕೊಳ್ಳುವ ಆಸಕ್ತಿ ಇರಬೇಕು: ನಿಮ್ಮ ಬಂಧವನ್ನು ಬಲಪಡಿಸಲು ಮತ್ತು ಹೆಚ್ಚು ತೃಪ್ತಿದಾಯಕ ಸಂಬಂಧವನ್ನು ನಿರ್ಮಿಸಲು ಹಂಚಿಕೊಳ್ಳುವ ಹವ್ಯಾಸಗಳಿರುವವರನ್ನು ಹುಡುಕಿ. ಸಂಬಂಧದ ಆರಂಭದಲ್ಲಿ ಹಂಚಿಕೊಂಡ ಮೌಲ್ಯಗಳು, ಚರ್ಚಿಸಿದ ವಿಷಯಗಳು ಭವಿಷ್ಯದ ಸಂಘರ್ಷಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಭಾವ್ಯ ಸಂಗಾತಿಯ ಧಾರ್ಮಿಕ ನಂಬಿಕೆಗಳು, ಕುಟುಂಬ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಮೊದಲೇ ತಿಳಿಯಿರಿ. ಇವೆಲ್ಲವೂ ನೀವು ಪರಸ್ಪರ ಎಷ್ಟು ಹೊಂದಿಕೆಯಾಗಬಹುದು ಎಂಬುದನ್ನು ಉತ್ತಮವಾಗಿ ನಿರ್ಣಯಿಸಲು ನಿಮಗೆ ಸಹಾಯ ಮಾಡುತ್ತದೆ.
5. ಜೀವನದ ಗುರಿಗಳು: ಈಗಲೇ ನಿಮ್ಮ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಚರ್ಚಿಸುವುದರಿಂದ ಮುಂದೆ ನಿಮ್ಮ ಯೋಜನೆಗಳು, ಸಂಭಾವ್ಯ ಸಂಗಾತಿಯ ಗುರಿಗಳೊಂದಿಗೆ ಹೊಂದಿಕೊಳ್ಳುತ್ತವೆಯೇ ಇಲ್ಲವೋ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಸ್ಥಿರತೆ ಮತ್ತು ಸಾಮರಸ್ಯಕ್ಕಾಗಿ ಒಂದೇ ರೀತಿಯ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿರುವ ಯಾರನ್ನಾದರೂ ಹುಡುಕಿ.
6. ಸಮಯವನ್ನು ತೆಗೆದುಕೊಳ್ಳಿ: ನಿರ್ಧಾರಕ್ಕೆ ಆತುರಪಡಬೇಡಿ; ನಿಮ್ಮ ಸಂಭಾವ್ಯ ಸಂಗಾತಿಯನ್ನು ತಿಳಿದುಕೊಳ್ಳುವಲ್ಲಿ ತಾಳ್ಮೆಯಿಂದಿರಿ. ಸಂಬಂಧದ ಹೊಂದಾಣಿಕೆ ಮತ್ತು ಸೂಕ್ತತೆಯನ್ನು ಮೌಲ್ಯಮಾಪನ ಮಾಡಲು ನಿಮಗೆ ಸಾಕಷ್ಟು ಸಮಯ ಸಿಗುವಂತೆ ಹಲವಾರು ಸಮಾರಂಭಗಳು ಅಥವಾ ಒಂದು ಸಣ್ಣ ಚಿಟ್-ಚಾಟ್ ಆಯೋಜಿಸಿ. ಜೊತೆಗೆ ಆಯ್ಕೆ ಪ್ರಕ್ರಿಯೆಯನ್ನು ನ್ಯಾವಿಗೇಟ್ ಮಾಡಲು ತಾಳ್ಮೆ ಮತ್ತು ಆತ್ಮಾವಲೋಕನದ ಅಗತ್ಯವಿದೆ. ಪರಸ್ಪರ ತಿಳಿದುಕೊಳ್ಳುವ ಹಂತದಲ್ಲಿ, ಸಂಭಾವ್ಯ ಸಂಗಾತಿಯ ವ್ಯಕ್ತಿತ್ವ, ಆಸಕ್ತಿಗಳು, ಹವ್ಯಾಸಗಳು ಮತ್ತು ಗುರಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಪ್ರಶ್ನೆಗಳನ್ನು ಕೇಳಿ. ಕುಟುಂಬ ಸದಸ್ಯರು ಬೆಂಬಲ ಮತ್ತು ಸಹಾಯ ಮಾಡಲು ಸಿದ್ಧರಿದ್ದರೆ ಅವರನ್ನು ಒಳಗೊಳ್ಳಲು ಹಿಂಜರಿಯಬೇಡಿ. ನೆನಪಿಡಿ, ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ನಿಮ್ಮ ವೈಯಕ್ತಿಕ. ಏಕೆಂದರೆ ಇದು ಮುಂದೆ ನಿಮ್ಮ ಆರ್ಥಿಕ ಯಶಸ್ಸಿನ ಮೇಲೆ ಪರಿಣಾಮ ಬೀರುವ ಮಹತ್ವದ ನಿರ್ಧಾರವಾಗಿದೆ. ಬುದ್ಧಿವಂತಿಕೆಯಿಂದ ಆಯ್ಕೆ ಮಾಡಲು ಸಮಯ ಮತ್ತು ನಿಮ್ಮ ಪ್ರಯತ್ನ ನೀಡಿದಲ್ಲಿ, ಸಂತೋಷದ ಮತ್ತು ಸಂತೃಪ್ತಿಯ ಜೀವನಕ್ಕೆ ಕಾರಣವಾಗಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: