Relationship Tips: ಡೇಟಿಂಗ್ ಮಾಡುವಾಗ ನಿಮ್ಮನ್ನು ನೋಯಿಸುವ ವಿಷಯಗಳು ಯಾವುದು ಅಂತ ಗೊತ್ತಾ?
ಆರಂಭಿಕ ಹಂತದಲ್ಲಿ ನೀವು ನಿರ್ಲಕ್ಷಿಸುವ ಭಾವನೆಗಳು ನಂತರ ಸಂಬಂಧ ಬೇರ್ಪಡಲು ಪ್ರಮುಖ ಕಾರಣಗಳಾಗುತ್ತದೆ. ಹಾಗಾಗಿ ತಜ್ಞರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಡೇಟ್ ಮಾಡಲು ಪ್ರಾರಂಭಿಸಿದಾಗ, ನಾವು ಪ್ರೀತಿಯಲ್ಲಿ ಕನಸಿನ ಗೋಪುರವನ್ನೇ ಕಟ್ಟಿಕೊಳ್ಳುತ್ತೇವೆ. ಆಗ ಪ್ರೀತಿಸಿದವರು ಏನೆಂದರೂ ಒಳ್ಳೆಯದೇನಿಸುತ್ತದೆ, ಅಲ್ಲದೆ ನಾವು ಆಗಾಗ ಇತರ ವ್ಯಕ್ತಿಯ ಬಗ್ಗೆ ಸತ್ಯವಲ್ಲದ ಊಹೆಗಳನ್ನು ಮಾಡುತ್ತೇವೆ. ಅದರಲ್ಲಿಯೂ ಡೇಟಿಂಗ್ ನ ಆರಂಭಿಕ ಹಂತದಲ್ಲಿ, ನಮಗೆ ತಿಳಿದೋ ತಿಳಿಯದೆಯೋ ಬಹಳಷ್ಟು ತಪ್ಪುಗಳನ್ನು ಮಾಡುತ್ತೇವೆ, ಅದೇ ನಮಗೆ ಅನಂತರ ನೋವುಂಟು ಮಾಡುತ್ತದೆ. ಇದನ್ನು ಉದ್ದೇಶಿಸಿ, ಸೈಕೋಥೆರಪಿಸ್ಟ್ ಎಮಿಲಿ ಎಚ್ ಸ್ಯಾಂಡರ್ಸ್ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ನೀವು ಹೊಂದಿಕೊಳ್ಳದವರ ಜೊತೆ ಜೀವನ ಸಾಗಿಸುವುದು ಬಹಳ ಕಷ್ಟ. ಅವು ನಿಮಗೆ ದಿನವೂ ನೋವನ್ನುಂಟುಮಾಡುತ್ತದೆ. ಅಂತಹ ಕೆಲವು ವಿಷಯಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
- ಸಂಬಂಧಗಳಲ್ಲಿ ಕೆಲವೊಮ್ಮೆ ಭಾವೋದ್ರೇಕವು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು, ಆದರೆ ಇಬ್ಬರು ಹೊಂದಾಣಿಕೆಯಿಂದಿದ್ದಾಗ ಏನೆ ಆದರೂ ಒಟ್ಟಿಗೆ ಉಳಿಯಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ.
- ಡೇಟಿಂಗ್ ಹಂತದಲ್ಲಿ ನೀವು ಮಾಡುವ ತಪ್ಪೆಂದರೆ, ತುಂಬಾ ವಿಷಯಗಳನ್ನು ಕೇವಲವೆಂಬಂತೆ ನಿರ್ಲಕ್ಷಿಸುವುದು. ಏಕೆಂದರೆ ನೀವು ಆ ವ್ಯಕ್ತಿಯ ಬಗ್ಗೆ ಭವಿಷ್ಯದಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ನಿರೀಕ್ಷಿಸುವುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಅವು ನಿಜವಾಗದಿರಬಹುದು.
- ವ್ಯಕ್ತಿಯ ಮಾತುಗಳು ಮತ್ತು ಕ್ರಿಯೆಗಳು ಹೊಂದಿಕೆಯಾಗದಿದ್ದಾಗ, ಅದು ನಿಮಗೆ ಪ್ರಮುಖ ಸೂಚನೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.
- ನೀವು ನಿಮ್ಮ ವ್ಯಕ್ತಿತ್ವ ಬಿಟ್ಟು ಅವರು ಹೇಳಿದಂತೆ ನಡೆದುಕೊಳ್ಳಲು ಪ್ರಾಂಭಿಸುವುದು. ಆ ಸಂದರ್ಭದಲ್ಲಿ ಅದುವೇ ಸತ್ಯ ಎನಿಸುತ್ತದೆ.
ಇದನ್ನೂ ಓದಿ: ಸಂಬಂಧಗಳಿಂದ ಹೊರಬರುವಾಗ ಖುಷಿ ಖುಷಿಯಾಗಿ ಬನ್ನಿ
- ಡೇಟಿಂಗ್ ನ ಆರಂಭಿಕ ಹಂತದಲ್ಲಿ, ನಾವು ಸರಿ ದಾರಿಯಲ್ಲಿಯೇ ಸಾಗುತ್ತಿದ್ದೇವೆ ಎಂದು ಭಾವಿಸಬಹುದು. ಆದರೆ ಅದರ ಬಗ್ಗೆ ನಿಮ್ಮ ತುಂಬಾ ಆಪ್ತರ ಬಳಿ ಸ್ಪಷ್ಟ ಸಂಭಾಷಣೆ ನಡೆಸಬೇಕು ಮತ್ತು ಜೊತೆಗೆ ನೀವು ಪ್ರೀತಿ ಮಾಡಬೇಕು ಎಂದುಕೊಂಡವರ ಜೊತೆಯಲ್ಲಿ ಕುಳಿತು ಸಂಬಂಧವು ಎಲ್ಲಿದೆ ಹೇಗಿದೆ, ಸಮಸ್ಯೆ ಏನಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಪಡೆಯಬೇಕು.
- ಆರಂಭಿಕ ಹಂತದಲ್ಲಿ ನಾವು ನಿರ್ಲಕ್ಷಿಸುವ ಅಸ್ವಸ್ಥತೆಯ ಭಾವನೆಗಳು ಅಥವಾ ಕೆಲವು ಸಂಬಂಧಗಳ ಬಗ್ಗೆ ದೊರೆತ ಸೂಚನೆಯ ಬಗ್ಗೆ ಯೋಚನೆ ಮಾಡದೆಯೇ ಅದನ್ನು ಕಡೆಗಣಿಸುವುದು. ಇದರಿಂದ ಮುಂದೆ ನಾವು ಬೆಸೆದ ಸಂಬಂಧ ಚೂರು ಚೂರಾಗಿ ಇಬ್ಬರೂ ಬೇರೆಯಾಗಬೇಕಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:26 am, Sun, 14 May 23