AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ತಪ್ಪು ಮಾಡಿಲ್ಲ, ಭಯ ಪಡಲ್ಲ’; ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿಯ ಸ್ಪಷ್ಟನೆ

ನಾಗ ಚೈತನ್ಯ ಅವರ ಹೊಸ ಮನೆಗೆ ಶೋಭಿತಾ ಹಲವಾರು ಬಾರಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂದು ಕೂಡ  ವರದಿ ಆಗಿದೆ.

‘ನಾನು ತಪ್ಪು ಮಾಡಿಲ್ಲ, ಭಯ ಪಡಲ್ಲ’; ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿಯ ಸ್ಪಷ್ಟನೆ
ಶೋಭಿತಾ-ನಾಗ ಚೈತನ್ಯ
ರಾಜೇಶ್ ದುಗ್ಗುಮನೆ
|

Updated on: May 09, 2023 | 10:40 AM

Share

ಸಮಂತಾ (Samantha Ruth Prabhu) ಜೊತೆಗಿನ ಬ್ರೇಕಪ್ ನಂತರದಲ್ಲಿ ನಾಗ ಚೈತನ್ಯ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳು ಚರ್ಚೆಗೆ ಗ್ರಾಸವಾದವು. ಎಲ್ಲಕ್ಕಿಂತ ಮುಖ್ಯವಾಗಿ ನಟಿ ಶೋಭಿತಾ ಧುಲಿಪಾಲ್ ಜೊತೆ ಅವರು ಸೀಕ್ರೆಟ್ ಆಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಇಬ್ಬರೂ ಮೌನ ತಾಳಿದ್ದಾರೆ. ಈಗ ಶೋಭಿತಾ (Sobhita Dhulipala ) ಕೆಲ ವಿಚಾರಗಳನ್ನು ಮಾತನಾಡಿದ್ದಾರೆ. ಅದು ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನೀಡಿದ ಸ್ಪಷ್ಟನೆ ಎನ್ನುವ ಮಾತು ಕೇಳಿ ಬಂದಿದೆ.

ನಾಗ ಚೈತನ್ಯ ಹಾಗೂ ಶೋಭಿತಾ ಸೈಲೆಂಟ್ ಆಗಿ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರೂ ಆಗಾಗ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ವಿದೇಶದಲ್ಲಿ ಸುತ್ತಾಟ ನಡೆಸುತ್ತಾರೆ. ನಾಗ ಚೈತನ್ಯ ಅವರ ಹೊಸ ಮನೆಗೆ ಶೋಭಿತಾ ಹಲವಾರು ಬಾರಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂದು ಕೂಡ  ವರದಿ ಆಗಿದೆ.

ಕಳೆದ ವರ್ಷ ನಾಗ ಚೈತನ್ಯ ಅವರ ಹೊಸ ಮನೆಯಲ್ಲಿ ಶೋಭಿತಾ ಕಾಣಿಸಿಕೊಂಡಾಗ ಇವರಿಬ್ಬರ ವಿಚಾರ ಮತ್ತೊಮ್ಮೆ ಚರ್ಚೆ ಆಗಿತ್ತು. ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಪ್ರಚಾರದ ವೇಳೆ ನಾಗ ಚೈತನ್ಯ ಇದೇ ವಿಚಾರ ಪ್ರಸ್ತಾಪಿಸಿ ನಕ್ಕಿದ್ದರು. ಅದೇನೇ ಇದ್ದರೂ ಇವರಿಬ್ಬರ ಸುತ್ತಾಟ ಮಾತ್ರ ನಿಂತಿಲ್ಲ. ಇತ್ತೀಚೆಗೆ ನಾಗ ಚೈತನ್ಯ-ಶೋಭಿತಾ ಧುಲಿಪಾಲ್ ಲಂಡನ್‌ನಲ್ಲಿ ಡಿನ್ನರ್ ಡೇಟ್‌ಗೆ ಹೋಗಿದ್ದ ಫೋಟೋ ಇದಕ್ಕೆ ಹೊಸ ಸಾಕ್ಷಿ. ಈಗ ಶೋಭಿತಾ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಸಮಂತಾ ಬಗ್ಗೆ ನಾಗ ಚೈತನ್ಯ ಮೆಚ್ಚುಗೆ; ಮಾಜಿ ಪತ್ನಿಯನ್ನು ಬಾಯ್ತುಂಬ ಹೊಗಳಿದ ನಟ

ಹೈದರಾಬಾದ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶೋಭಿತಾ ಡೇಟಿಂಗ್ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಒಳ್ಳೊಳ್ಳೆಯ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ನನಗೆ ಡ್ಯಾನ್ಸ್ ಎಂದರೆ ಇಷ್ಟ. ಮಣಿರತ್ನಂ ಸಿನಿಮಾದಲ್ಲಿ ಎಆರ್​ ರೆಹಮಾನ್ ಕಂಪೋಸ್ ಮಾಡಿದ ಮೂರು ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದೇನೆ. ಇದಕ್ಕಿಂತ ಅದೃಷ್ಟ ಇನ್ನೇನು ಬೇಕು. ಗೊತ್ತಿಲ್ಲದೆ ಮಾತನಾಡುವವರಿಗೆ ನಾನು ಉತ್ತರ ನೀಡಬೇಕಿಲ್ಲ. ನಾನೇನೂ ತಪ್ಪು ಮಾಡಿಲ್ಲ ಎಂದರೆ ಸ್ಪಷ್ಟನೆ ಕೊಡುವ ಮಾತೇ ಇಲ್ಲ. ಆ ಬಗ್ಗೆ ನನಗೆ ಭಯ ಇಲ್ಲ. ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ’ ಎಂದಿದ್ದಾರೆ ಶೋಭಿತಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ