ತುಮಕೂರು: ಪ್ರೀತಿಗೆ ಒಲ್ಲೆ ಎಂದ ಹುಡುಗಿ, ಇನ್ನೊಬ್ಬನ ಜೊತೆ ಮಾತು; ರೊಚ್ಚಿಗೆದ್ದ ಪ್ರೇಮಿಯಿಂದ ಮಚ್ಚಿನಿಂದ ಹಲ್ಲೆ
ಆಕೆ ಇನ್ನೂ ಅಪ್ರಾಪ್ತಳು, 18 ತುಂಬೋಕೆ 2 ತಿಂಗಳು ಬೇಕಿತ್ತು. ಆದರೆ, ಗ್ರಾಮದ ಓರ್ವ ಯುವಕ ಪ್ರೀತಿಸು ಎಂದು ಪದೇ ಪದೇ ಪೀಡಿಸುತ್ತಿದ್ದನಂತೆ. ಇದಕ್ಕೆ ನಿರಾಕರಿಸಿದ ಆಕೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಸದ್ಯ ಆಕೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಏನಿದು ಕಥೆ ಅಂತೀರಾ ಈ ಸ್ಟೋರಿ ನೋಡಿ.
ತುಮಕೂರು: ಆ ಬಾಲಕಿ ಹೆಸರು ಜೀವಿತಾ ಮೊನ್ನೆಯಷ್ಟೆ ಪಿಯುಸಿ ಮುಗಿಸಿದ್ದಾಳೆ. ಪಿಯುಸಿ ಮುಗಿಸಿ ಊರಿನಲ್ಲಿದ್ದ ಈಕೆಗೆ ಯುವಕನೋರ್ವ ಪ್ರೀತಿ ಮಾಡುತ್ತಿದ್ದನಂತೆ. ಜೊತೆಗೆ ಪ್ರೀತಿ ಮಾಡು ಎಂದು ಪದೇ ಪದೇ ಪೀಡಿಸುತ್ತಿದ್ದನಂತೆ. ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಪ್ರೀಯಕರ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹೌದು ತುಮಕೂರು(Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಾಲಯ ಪೂಜಾರಿಯಾಗಿರುವ ವಿನಯ್, ಗ್ರಾಮದ ಅಪ್ರಾಪ್ತ ಬಾಲಕಿಯಾಗಿರುವ ಜೀವಿತಾಳನ್ನ ಒಂದು ವರ್ಷದಿಂದ ಲವ್ ಮಾಡುತ್ತಿದ್ದನಂತೆ. ಹೀಗಾಗಿ ನಿನ್ನೆ(ಮೇ.11) ಬೆಳಿಗ್ಗೆ ‘ನಾನು ನಿನ್ನ ಇಷ್ಟಪಡ್ತಿನಿ, ನೀನು ನನ್ನ ಪ್ರೀತಿಸು ಎಂದು ಹಿಂಸೆ ನೀಡಿದ್ದನಂತೆ. ಆಗ ಹುಡುಗಿ ಬೇಡ ಎಂದು ನಿರಾಕರಿಸಿದ್ದಕ್ಕೆ ಕಪಾಳಕ್ಕೆ ಹೊಡೆದನಂತೆ. ಬಳಿಕ ಅಲ್ಲಿಂದ ಏನಾದರೂ ಮಾಡ್ತಾನೆಂದು ತಪ್ಪಿಸಿಕೊಂಡು ಓಡಿದಾಗ ಹಿಂಬಾಲಿಸಿ ಬಂದು ಅಟ್ಯಾಕ್ ಮಾಡಿದ್ದಾನಂತೆ.
ಇನ್ನು ಅಟ್ಯಾಕ್ ಮಾಡಿದ ಕೂಡಲೇ ಮನೆಯವರು ಗಮನಿಸಿ, ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಆ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ವಿನಯ್ ಮಚ್ಚಿನಿಂದ ಕತ್ತಿನ ಭಾಗಕ್ಕೆ ಹಲ್ಲೆ ಮಾಡಿದ್ದು, ಸ್ವಲ್ಪ ಮಟ್ಟಿಗೆ ಗಂಭೀರ ಗಾಯವಾಗಿದೆ. ಸದ್ಯ ಚಿಕಿತ್ಸೆ ಮುಂದುವರೆದಿದ್ದು ಏನು ತೊಂದರೆ ಇಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಮತಗಟ್ಟೆ ಎದುರೇ ಮಾರಾಮಾರಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ: FIR ದಾಖಲು
ಜೀವಿತಾ ತುಮಕೂರಿನಲ್ಲಿ ಪಿಯುಸಿ ಮುಗಿಸಿದ್ದು, ಸದ್ಯ ರಜೆಯಿದ್ದ ಕಾರಣ ಊರಿಗೆ ಬಂದಿದ್ದಳು. ನಿನ್ನೆ(ಮೇ.11) ಚುನಾವಣೆ ಇದ್ದ ಕಾರಣ ಗ್ರಾಮದ ಯಾರೋ ಹುಡುಗನ ಜೊತೆಗೆ ಜೀವಿತಾ ಸಲುಗೆಯಿಂದ ಮಾತನಾಡಿದ್ದಳೆಂಬ ಆರೋಪ ಕೇಳಿಬಂದಿದ್ದು, ಆ ಹುಡುಗನ ಜೊತೆ ಮಾತನಾಡಿದ್ದಕ್ಕೆ ಹಾಗೂ ಪ್ರೀತಿಗೆ ನಿರಾಕರಿಸಿದ್ದಕ್ಕೆ ವಿನಯ್ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೂ ಮತ್ತೊಂದು ಮಾಹಿತಿ ಪ್ರಕಾರ ಜೀವಿತಾ ಹಾಗೂ ವಿನಯ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಎನೇ ಇರಲಿ ಅಪ್ರಾಪ್ತ ಬಾಲಕಿಯನ್ನ ಪಾಗಲ್ ಪ್ರೇಮಿ ವಿನಯ್ ಕೊಲೆ ಮಾಡಲು ಯತ್ನಿಸಿದ್ದು, ಗಂಭೀರ ಸ್ಥಿತಿಗೆ ತಲುಪಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಹುಳಿಯಾರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿನಯ್ಗಾಗಿ ಶೋಧ ನಡೆಸುತ್ತಿದ್ದಾರೆ. ಒಟ್ಟಾರೆ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಎಂದು ಹೋಗಿ ಸದ್ಯ ಪ್ರಾಣಕ್ಕೆ ಕುತ್ತು ತಂದಿಟ್ಟುಕೊಂಡಿದ್ದಾರೆ.
ವರದಿ: ಮಹೇಶ್ ಟಿವಿ9 ತುಮಕೂರು
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ