ದೊಡ್ಡಾಲದಮರ ಬಸ್ ಸ್ಟ್ಯಾಂಡ್ ಬಳಿ ಪತ್ನಿ ಮೇಲೆ ಮನಸೋಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿದ ಪತಿ, ಪತ್ನಿ ಗಂಭೀರ
ಗಂಡ-ಹೆಂಡತಿ ನಡುವೆ ಜಗಳ ಆಗುವುದು ಸಾಮಾನ್ಯ. ಆದ್ರೆ ಅದು ಸಾಯಿಸುವ ಹಂತಕ್ಕೆ ಹೋಗ ಬಾರದು. ನಡುರಸ್ತೆಯಲ್ಲಿ ಬಾಲು ಜ್ಯೋತಿ ನಡುವೆ ಮಚ್ಚಿನಿಂದ ನಡೆಯುತ್ತಿದ್ದ ಜಗಳ ನೋಡಿದ ಪೊಲೀಸರು ಜೀವ ಪಣಕ್ಕಿಟ್ಟು ಮಹಿಳೆಯನ್ನು ರಕ್ಷಿಸಿದ್ದಾರೆ.
ತುಮಕೂರು: ನಡುರಸ್ತೆಯಲ್ಲಿ ಪತ್ನಿ ಮೇಲೆ ಮನಬಂದಂತೆ ಪತಿ ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಾಲದಮರ ಗೇಟ್‌ನ ಬಸ್ ಸ್ಟ್ಯಾಂಡ್ ಬಳಿ ನಡೆದಿದೆ. ಬಾಲು ಎಂಬ ಬ್ಯಕ್ತಿ ತನ್ನ ಪತ್ನಿ ಜ್ಯೋತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪತಿ ಜೊತೆ ಜಗಳ ನಡೆದ ಹಿನ್ನೆಲೆ ಜ್ಯೋತಿ(25) ತವರಿಗೆ ಹೊರಟಿದ್ದರು. ಇದರಿಂದ ಸಿಟ್ಟಿಗೆದ್ದು ಮಚ್ಚಿನ ಸಮೇತ ಬಂದಿದ್ದ ಪತಿ ಬಾಲು ನಡುರಸ್ತೆಯಲ್ಲೇ ಜಗಳವಾಗಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಗಂಡ-ಹೆಂಡತಿ ನಡುವೆ ಜಗಳ ಆಗುವುದು ಸಾಮಾನ್ಯ. ಆದ್ರೆ ಅದು ಸಾಯಿಸುವ ಹಂತಕ್ಕೆ ಹೋಗ ಬಾರದು. ನಡುರಸ್ತೆಯಲ್ಲಿ ಬಾಲು ಜ್ಯೋತಿ ನಡುವೆ ಮಚ್ಚಿನಿಂದ ನಡೆಯುತ್ತಿದ್ದ ಜಗಳ ನೋಡಿದ ಪೊಲೀಸರು ಜೀವ ಪಣಕ್ಕಿಟ್ಟು ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಗಾಯಾಳು ಜ್ಯೋತಿ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲು ಮತ್ತು ಜ್ಯೋತಿ ಇಬ್ಬರದ್ದು ಅಂತರಜಾತಿ ವಿವಾಹ. ಇವರು ಶಿರಾ ತಾಲೂಕಿನ ಹನುಮಂತನಗರದ ನಿವಾಸಿಗಳು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತಿದ್ದು. ಇದರಿಂದ ಬೇಸತ್ತು ತವರು ಮನೆಗೆ ಹೊರಟು ದೊಡ್ಡಾಲದಮರ ಬಸ್ ನಿಲ್ದಾಣಕ್ಕೆ ಜ್ಯೋತಿ ಬಂದಿದ್ದರು. ಇದರಿಂದ ಸಿಟ್ಟಿಗೆದ್ದ ಪತಿ ಬಾಲು ಮಚ್ಚಿನ ಸಮೇತವಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಅಲ್ಲೂ ಇಬ್ಬರ ನಡುವೆ ಜಗಳ ಶುರುವಾಗಿ ಬಾಲು ನಡು ರಸ್ತೆಯಲ್ಲೇ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಹೈವೆ ರೌಂಡ್ಸ್ ನಲ್ಲಿದ್ದ ಕಳ್ಳಂಬೆಳ್ಳ ಠಾಣೆಯ ಎಎಸ್ಐ ಗೋವಿಂದರಾಜು, ಡ್ರೈವರ್ ಮಹೇಶ್ ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಮದುವೆಯ ನಂತರ ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿರುವ ಬಿ-ಟೌನ್ನ ಐದು ಜೋಡಿಗಳು; ಇಲ್ಲಿವೆ ಫೋಟೋಗಳು
ಲೇಸ್ ಪ್ಯಾಕ್ ಕವರ್ನ್ನು ಸೀರೆಯಂತೆ ಹೊಲಿದು ಧರಿಸಿದ ಯುವತಿ; ವಿಡಿಯೋ ವೈರಲ್