Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನನಿತ್ಯದ ಜೀವನದಲ್ಲಿ ಉದ್ಯೋಗದೊಂದಿಗೆ ಕುಟುಂಬವನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸಿಂಪಲ್​ ಟಿಪ್ಸ್​

ಉದ್ಯೋಗ, ಮನೆ, ಮಕ್ಕಳು ಎಲ್ಲವನ್ನೂ ಹೇಗಪ್ಪಾ ನಿಭಾಯಿಸುವುದು ಎನ್ನುವ ತೊಳಲಾಟ ಸಾಮಾನ್ಯವಾಗಿ ಇರುತ್ತದೆ. ಹೀಗಾಗಿ ಉದ್ಯೋಗಸ್ಥ ಮಹಿಳೆಯರಿಗೆ ಡಾ. ಕುಶ್ಬೂ ಎನ್ನುವವರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ,

ದಿನನಿತ್ಯದ ಜೀವನದಲ್ಲಿ ಉದ್ಯೋಗದೊಂದಿಗೆ ಕುಟುಂಬವನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸಿಂಪಲ್​ ಟಿಪ್ಸ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 06, 2022 | 10:59 AM

ಪ್ರತೀ ಹೆಣ್ಣು ಜೀವನದ ಜವಾಬ್ದಾರಿಗಳ ಮೂಟೆಯನ್ನು ಹೊರಲೇಬೇಕು. ಆಕೆ ಹೊರುತ್ತಾಳೆ ಕೂಡ. ಮದುವೆಗೂ ಮುನ್ನ ತನ್ನದೇ ಪ್ರಪಂಚದಲ್ಲಿ ಸ್ವಚ್ಛಂದವಾಗಿ ಹಾರುತ್ತಿರುವ ಅವಳು ಕೊನೆಗೆ ಗಂಡ, ಮನೆ, ಸಂಸಾರ ಮಕ್ಕಳು ಜೊತೆಗೆ ಉದ್ಯೋಗದಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತಾಳೆ.  ದಿನಕಳೆದಂತೆ ಅಮ್ಮನಾಗಿ, ಪತ್ನಿಯಾಗಿ, ಸೊಸೆಯಾಗಿ ಜವಾಬ್ದಾರಿಗಳನ್ನು ನಿಭಾಯಿಸುವ ಆಕೆ ತಾನು ಕೆಲಸ ಮಾಡುವ ಸಂಸ್ಥೆಯಲ್ಲಿಯೂ ಉದ್ಯೋಗಿಯಾಗಿ  ದುಡಿಯುತ್ತಾಳೆ. ಎಲ್ಲಾ ಪಾತ್ರಗಳನ್ನು ನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಆಕೆ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾಳೆ. ತನ್ನಾಸೆಗಳನ್ನು ಗಂಟಲಲ್ಲಿ ನುಂಗಿಕೊಂಡು, ಕನಸುಗಳನ್ನು ಎತ್ತಿ ಬದಿಗಿಟ್ಟು ತನ್ನವರಿಗಾಗಿ ಬದುಕುತ್ತಾಳೆ. ಇತ್ತೀಚೆಗಂತೂ ಮಹಿಳೆಯರು, ಮನೆ-ಮಕ್ಕಳು-ಉದ್ಯೋಗ ಎಲ್ಲವನ್ನೂ ನಿಭಾಯಿಸಲಾಗದೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದಿನಕಳೆದಂತೆ ಮಹಿಳೆಯರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಉದ್ಯೋಗ, ಮನೆ, ಮಕ್ಕಳು ಎಲ್ಲವನ್ನೂ ಹೇಗಪ್ಪಾ ನಿಭಾಯಿಸುವುದು ಎನ್ನುವ ತೊಳಲಾಟ ಸಾಮಾನ್ಯವಾಗಿ ಇರುತ್ತದೆ. ಹೀಗಾಗಿ ಉದ್ಯೋಗಸ್ಥ ಮಹಿಳೆಯರಿಗೆ ಡಾ. ಕುಶ್ಬೂ ಎನ್ನುವವರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ,

ಸಮಯ ನಿಗದಿಪಡಿಸಿಕೊಳ್ಳಿ ಮತ್ತು ಯೋಜನೆ ರೂಪಿಸಿಕೊಳ್ಳಿ: ಆಫೀಸ್​ ಕೆಲಸ, ಮನೆಯ ನಿರ್ವಹಣೆ, ಮಕ್ಕಳೆಡೆಗೆ ಗಮನ, ಅಡುಗೆ ಹೀಗೆ ಸಾಲು ಸಾಲು ಕೆಲಸಗಳು ಮಹಿಳೆಯರ ಬೆನ್ನುಹತ್ತಿರುವುದು ಸಹಜ. ಒಂದೆರಡು ಗಳಿಗೆಯೂ ಬಿಡುವುದಿಲ್ಲದಷ್ಟು ದುಡಿಯುವವಳು ಮಹಿಳೆ. ಆದ್ದರಿಂದ ಎಲ್ಲದಕ್ಕೂ ಸಮಯ ನಿಗದಿಪಡಿಸಿಕೊಳ್ಳಿ. ಕೊನೆಯ ಕ್ಷಣದಲ್ಲಿ ಗಡಿಬಿಡಿ ಮಾಡಿಕೊಳ್ಳುವ ಬದಲು ಕೆಲಸಗಳನ್ನು ವಿಭಾಗಿಸಿಕೊಳ್ಳಿ. ಯಾವುದು ಅರ್ಜೆಂಟ್​ ಇದೆ ಅದನ್ನು ಮೊದಲು ಮುಗಿಸಿಕೊಳ್ಳಿ. ಹಿಂದಿನ ದಿನವೇ ಮರುದಿನ ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸಿ, ಹೇಗೆ ಮುಗಿಸಬೇಕು ಎನ್ನುವ ನೀಲಿನಕ್ಷೆ ಹಾಕಿಕೊಳ್ಳಿ. ಆಗ ಎಲ್ಲವನ್ನೂ ಸರಿಯಾಗಿ ನಿಭಾಯಿಸಬಹುದು.

ನೀವು ಹೆಚ್ಚು ನಂಬುವವರೊಂದಿಗೆ ಮಕ್ಕಳನ್ನು ಬಿಟ್ಟು ಹೋಗಿ: ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಬಹಳಷ್ಟು ಮಹಿಳೆಯರಿಗಿರುತ್ತದೆ. ಅಂತಹ ಸಂದರ್ಭದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಬಿಟ್ಟುಹೋಗಬೇಕಾಗಿರುತ್ತದೆ. ಹೀಗಾಗಿ ನೀವು ಹೆಚ್ಚು  ನಂಬುವ, ನಿಮ್ಮ ಬಗ್ಗೆ ತಿಳಿದಿರುವವರ ಜೊತೆ ನಿಮ್ಮ ಮಕ್ಕಳನ್ನು ಬಿಟ್ಟು ಹೋಗಿ. ಆಗ ಕೆಲಸದ ವೇಳೆ ನಿಮಗೂ ಮಕ್ಕಳ ಬಗ್ಗೆ ಚಿಂತೆ ಕಾಡುವುದಿಲ್ಲ.

ಸಂಗಾತಿಗೆ ಸಮಯ ನೀಡಿ: ಎಷ್ಟೇ ಕೆಲಸದ ಒತ್ತಡ, ಮಕ್ಕಳ ಜವಾಬ್ದಾರಿ ಇದ್ದರೂ ದಿನದಲ್ಲಿ ಒಂದರ್ಧ ಗಂಟೆಯಾದರೂ ಸಂಗಾತಿಗೆ ಸಮಯ ನೀಡಿ. ಇದರಿಂದ ನಿಮ್ಮ ಒತ್ತಡವೂ ಕಡಿಮೆಯಾಗುತ್ತದೆ. ಮುಕ್ತವಾಗಿ ಮಾತನಾಡಿ, ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ. ಇದರಿಂದ ಬಾಂಧವ್ಯವೂ ಗಟ್ಟಿಯಾಗುತ್ತದೆ. ನಿಮ್ಮ ಟೆನ್ಷನ್​ಗಳಿಗೂ ಒಂದಷ್ಟು ಪರಿಹಾರ ಸಿಗುತ್ತದೆ.

ಕುಟುಂಬದೊಂದಿಗೆ ಸಮಯ ಕಳೆಯಿರಿ: ಕುಟುಂಬಕ್ಕಾಗಿ ಸಮಯ ಮೀಸಲಿಡಿ. ಒಂದಷ್ಟು ಹೊಸ ಪ್ಲಾನ್​ಗಳನ್ನು ಮಾಡಿ. ಆಗಾಗ ಗೆಟ್​ ಟುಗೇದರ್​ನಂತಹ ಯೋಜನೆ ರೂಪಿಸಿ. ಉದ್ಯೋಗದೆಡೆಗೆ ಎಷ್ಟೇ ಗಮನ ನೀಡಿದರೂ ನಿಮ್ಮ ಕುಟುಂಬ ಮೊದಲ ಆಧ್ಯತೆಯಾಗಿರಲಿ. ಆಗ ಮಾತ್ರ ,ಮನಸ್ಸು ಆನಂದವಾಗಿರಲು ಸಾಧ್ಯ.ಹೀಗಾಗಿ ವರ್ಕ್​ ಪ್ರೆಶರ್​ ಕಡಿಮೆ ಮಾಡಿಕೊಳ್ಳಲೂ ಕುಡ ಕುಟುಂಬದೊಂದಿಗೆ ಸಮಯ ಕಳೆಯುವುದು ಉತ್ತಮ ಮಾರ್ಗವಾಗಿದೆ.

ಕೆಲಸ ಒಪ್ಪಿಕೊಳ್ಳುವ ಮುನ್ನ ಯೋಚಿಸಿ: ಕೆಲವರಿಗೆ ಇಲ್ಲ  ಎನ್ನುವ ಶಬ್ದ ಹೇಳುವುದು ಕೊಂಚ ಕಷ್ದದ ಕೆಲಸವೇ ಸರಿ. ಅದರೆ ನೆನಪಿಡಿ. ನೀವು ಯಾರ ಕೆಲಸವನ್ನು ಒಪ್ಪಿಕೊಳ್ಳುತ್ತಿದ್ದೀರಾ ಎನ್ನುವುದನ್ನು ನೋಡಿಕೊಳ್ಳಿ. ನಿಮ್ಮ ಕುಟುಂಬದ ಆಧ್ಯತೆ ಕಡಿಮೆ ಆಗದಂತೆ ನೋಡಿಕೊಳ್ಳಿ. ಕೆಲವೊಮ್ಮೆ ಒಪ್ಪಕೊಂಡ ಕೆಲಸ ಕುತ್ತು ತರಬಹುದು. ಆದ್ದರಿಂದ ಕುಟುಂಬವನ್ನು ಮೊದಲಾಗಿರಿಸಿಕೊಂಡು ಕೆಲಸವನ್ನು ಒಪ್ಪಿಕೊಳ್ಳಿ. ಆಗ ಎಲ್ಲವನ್ನೂ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬಹುದು.

ಇನ್ನೂ ಕೆಲವು ಸರಳ ಟಿಪ್ಸ್​ಗಳು ಇಲ್ಲಿವೆ: ನಿಮಗೆ ನೀವೇ ನಿಯಮಗಳನ್ನು ಹಾಕಿಕೊಳ್ಳಿ. ಬೇರೆಯವರು ಏನೆಂದುಕೊಳ್ಳುತ್ತರೋ ಎನ್ನುವ ಅಂಜಿಕೆ ಬೇಡ. ನಿಮ್ಮ ಹೊಸ ಜೀವನವನ್ನು ಸ್ವೀಕರಿಸಿ- ಅವ್ಯವಸ್ಥೆಗಳು, ನಿದ್ರಾಹೀನತೆ – ಎಲ್ಲವನ್ನೂ ನಾನು ನಿಭಾಯಿಸಲಬಲ್ಲೆ ಎನ್ನುವ ಮನಸ್ಥಿತಿಯನ್ನು ರೂಢಿಸಿಕೊಳ್ಳಿ. ಕತ್ತಲೆ ಸರಿದು ಬೆಳಕು ಮೂಡುವಂತೆ ಪ್ರತೀ ಸಮಸ್ಯೆಯ ಕೊನೆಯಲ್ಲಿ ಒಂದು ಪರಿಹಾರವಿರುತ್ತದೆ. ಹೀಗಾಗಿ ಅದಷ್ಟು ಪಾಸಿಟಿವ್​ ಆಗಿ ಯೋಚಿಸಿ, ಕುಟುಂಬ, ಪತಿ ಎಲ್ಲರೊಂದಿಗೂ ನಿಮ್ಮ ಕೆಲಸಗಳನ್ನು ಹಂಚಿಕೊಳ್ಳಿ. ಆಗ ನಿಮಗೂ ಒತ್ತಡ ಕಡಿಮೆಯಾಗುತ್ತದೆ. ಅನಗತ್ಯ ಗೊಂದಲಗಳಿಗೆ ಕಾರಣವಾಗುವ ಸರ್ಪೈಸ್​ಗಳನ್ನು ನೀಡುವ ಬದಲು ಮುಂಚಿತವಾಗಿ ಪ್ಲಾನ್​ ಮಾಡಿಕೊಳ್ಳಿ. ಎಲ್ಲರೂ ಒಟ್ಟಿಗೆ ಇರುವಾಗ ಕೆಲಸಗಳನ್ನು ಹಂಚಿಕೊಂಡು ಮಾಡಿದರೆ ಖುಷಿ ಇಮ್ಮಡಿಯಾಗಲಿದೆ.

ಇದನ್ನೂ ಓದಿ:

Relationship Tips: ಹದಗೆಡುತ್ತಿರುವ ಸಂಬಂಧ ಸರಿಪಡಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !