ಗರ್ಭಾವಸ್ಥೆ(During pregnancy) ಯಲ್ಲಿ ಸಾಕಷ್ಟು ವಿಶ್ರಾಂತಿ ಅಗತ್ಯವಿರುವುದರಿಂದ ಮನೆಯೊಳಗೆಯೇ ಇದ್ದು ಇದ್ದೂ ಬೇಜಾರಾಗಿದೆಯೇ? ಒಂದಷ್ಟು ಹೊತ್ತು ಪ್ರಯಾಣ ಮಾಡಲು ಬಯಸಿದರೆ ತಜ್ಞರು ನೀಡಿರುವ ಸಲಹೆಗಳನ್ನು ಪಾಲಿಸಿ.
ಗರ್ಭಾವಸ್ಥೆಯಲ್ಲಿ ಆರೋಗ್ಯದ ಅತಿಯಾದ ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಯಾಕೆಂದರೆ ಈ ಸಮಯದಲ್ಲಿ ಗರ್ಭಿಣಿಯ ಜೀವನಶೈಲಿ ಆರೋಗ್ಯವಾಗಿದಷ್ಟು ಮಗುವೂ ಕೂಡ ಆರೋಗ್ಯವಾಗಿರಲು ಸಾಧ್ಯ. ಆದ್ದರಿಂದ ಇಂತಹ ಸಮಯದಲ್ಲಿ ವಿಶೇಷವಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಬೇಕಿದೆ. ಈ ಸಮಯಲ್ಲಿ ಆಕೆಯನ್ನು ಯಾವುದೇ ಚಿಂತೆಯಿಲ್ಲದೇ ಮಾನಸಿಕವಾಗಿ ಆರೋಗ್ಯವಾಗಿವಾಗಿಟ್ಟುಕೊಳ್ಳುವುದು ಆಕೆಯ ಕುಟುಂಬದವರ ಆದ್ಯ ಕರ್ತವ್ಯವಾಗಿದೆ ಎಂದು ಆರೋಗ್ಯ ತಜ್ಞರಾದ ಡಿಂಪಲ್ ಜಂಗ್ಡಾ ಹೇಳುತ್ತಾರೆ.
ಗರ್ಭಾವಸ್ಥೆಯಲ್ಲಿ, ಪ್ರಯಾಣ ಮಾಡುವಾಗ ಈ ಕೆಳಗಿನ ಪ್ರಮುಖ 5 ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು:
1. ದೀರ್ಘ ಪ್ರಯಾಣ:
ಗರ್ಭಾವಸ್ಥೆಯಲ್ಲಿ ಧೀರ್ಘ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಹಾಗೆಯೇ ಕೂಡ ದೀರ್ಘ ಪ್ರಯಾಣ ಮಾಡಬೇಕಿದ್ದರೆ ನೀವೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ದೀರ್ಘ ಪ್ರಯಾಣ ಗರ್ಭಿಣಿಯರು ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಬೇಕು. ಆಗಾಗ ವಿರಾಮ ತೆಗೆದುಕೊಳ್ಳುವುದರಿಂದ ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿ ಆಗಲು ಸಹಾಯಮಾಡುತ್ತದೆ. ತುಂಬಾ ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಗರ್ಭಿಣಿಯರಿಗೆ ಅರೋಗ್ಯಕರವಲ್ಲ.
2.ಸೀಟ್ ಬೆಲ್ಟ್ :
ಸೀಟ್ ಬೆಲ್ಟ್ ಅನ್ನು ಧರಿಸಬೇಕಾದರೆ, ಅನಗತ್ಯ ಒತ್ತಡವನ್ನು ತಪ್ಪಿಸಲು ಸೀಟ್ ಬೆಲ್ಟ್ ನ್ನು ಆದಷ್ಟು ಸೊಂಟದ ಮೇಲೆ ಕಡಿಮೆ ಧರಿಸಬೇಕು. ಯಾಕೆಂದರೆ ಹೊಟ್ಟೆಯ ಮೇಲೆ ದೀರ್ಘಕಾಲದ ವರೆಗೆ ಧರಿಸುವುದು ಉತ್ತಮವಲ್ಲ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಒತ್ತಡ, ಖಿನ್ನತೆಗೆ ಒಳಗಾದರೆ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವುದೇ?
3. ಆಹಾರ:
ವಾಕರಿಕೆಯ ಭಾವನೆಯನ್ನು ತಡೆಯಲು ಮತ್ತು ದೇಹದಲ್ಲಿನ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ತಿಂಡಿಗಳನ್ನು ವಿಶೇಷವಾಗಿ ಗರ್ಭಿಣಿಯರಿಗೆ ಹೆಚ್ಚಿನ ಪೋಷಣೆಯನ್ನು ನೀಡುವ ಆಹಾರವನ್ನು ಪ್ರಯಾಣದ ಸಮಯದಲ್ಲಿ ತೆಗೆದುಕೊಂಡು ಹೋಗುವುದು ಅತ್ಯಂತ ಅಗತ್ಯವಾಗಿದೆ. ಜೊತೆಗೆ ಗರ್ಭಾವಸ್ಥೆಯಲ್ಲಿ ತಿಂಡಿಗಳನ್ನು ಸೇವಿಸುವ ಬಯಕೆ ಹೆಚ್ಚಿರುವುದರಿಂದ ಪ್ರಯಾಣದ ಸಮಯದಲ್ಲಿ ಹಣ್ಣು ಹಾಗೂ ಇತರ ತಿಂಡಿಗಳನ್ನು ಜೊತೆಗೆ ತೆಗೆದುಕೊಂಡು ಹೋಗಿ.
4. ದಿಂಬು ಜೊತೆಗಿರಲಿ:
ದೂರ ಪ್ರಯಾಣ ಮಾಡುವಾಗ ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಬೆನ್ನು, ಕುತ್ತಿಗೆ ನೋವು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಆದಷ್ಟು ದೀರ್ಘ ಪ್ರಯಾಣದ ಸಮಯದಲ್ಲಿ ದಿಂಬು ಜೊತೆಗೆ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.
ಇದನ್ನೂ ಓದಿ: ಹೆರಿಗೆಯ ನಂತರದ ದಿನಗಳಲ್ಲಿ ಈ 5 ಆಹಾರಗಳನ್ನು ರೂಢಿಸಿಕೊಳ್ಳಿ
5. ವೈದ್ಯರ ಸಲಹೆಯನ್ನು ಪಾಲಿಸಿ:
ಗರ್ಭಾವಸ್ಥೆಯಲ್ಲಿ ಪ್ರತಿ ತಿಂಗಳು ತಪಾಸಣೆಗೆ ಹೋಗುವಾಗ ನಿಮ್ಮ ವೈದ್ಯರೊಂದಿಗೆ ದೀರ್ಘ ಪ್ರಯಾಣ ಮಾಡುವುದರ ಕುರಿತು ತಿಳಿಸಿ. ಜೊತೆಗೆ ಅವರು ನೀಡುವ ಸಲಹೆಗಳನ್ನು ಪಾಲಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: