ಹಿಂದಿನ ಕಾಲದಲ್ಲಂತೂ ಎಲೆಗಳನ್ನು ಉಪಯೋಗಿಸಿ ತರಹೇವಾರಿ ಉಪಾಹಾರಗಳನ್ನು ತಯಾರಿಸುತ್ತಿದ್ದರು. ಈಗಲೂ ಹಳ್ಳಿ ಕಡೆಗಳಲ್ಲಿ ಸ್ಥಳೀಯವಾಗಿ ಸಿಗುವ ಎಲೆಗಳನ್ನು ಉಪಯೋಗಿಸಿಕೊಂಡು ರುಚಿಕರವಾದ ಹಾಗೂ ಆರೋಗ್ಯಕರವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಇವುಗಳು ಸಾಮಪ್ರದಾಯಿಕ ಪಾಕವಿಧಾನಗಳಾಗಿವೆ. ಯುವ ಪೀಳಿಗೆಯ ಹೆಚ್ಚಿನ ಜನರಿಗೆ ಈ ಭಕ್ಷ್ಯಗಳ ಬಗ್ಗೆ ಗೊತ್ತಿರುವುದಿಲ್ಲ. ಇಂದು ಎಲೆಗಳನ್ನು ಉಪಯೋಗಿಸಿ ತಯಾರಿಸುವ ಪಾಕ ವಿಧಾನಗಳು ಯಾವುವು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.
ಕೇದಗೆ ಎಲೆಗಳನ್ನು ಬಳಸಿ ತಯಾರಿಸಲಾಗುವ ಇಡ್ಲಿಯಂತಿರುವ ಉಪಹಾರವನ್ನು ಮೂಡೆ, ಕೊಟ್ಟೆ ಕಡುಬು ಅಂತಲೂ ಕರೆಯುತ್ತಾರೆ. ಕೇದಗೆ ಎಲೆಗಳನ್ನು ವೃತ್ತಾಕಾರದಲ್ಲಿ ಉದ್ದಗೆ ರೆಡಿ ಮಾಡಿ, ಇಡ್ಲಿಗೆ ಯಾವ ಹಿಟ್ಟನ್ನು ತಯಾರಿಸುತ್ತೇವೆಯೋ ಅದೇ ಹಿಟ್ಟನ್ನು ತಯಾರಿಸಿ, ನಂತರ ಆ ಹಿಟ್ಟನ್ನು ವೃತ್ತಾಕಾರದಲ್ಲಿ ತಯಾರಿಸಿದ ಕೆದಗೆ ಎಲೆಗಳ ಮೇಲೆ ಸುರಿದು ಅದನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಲು ಬಿಡಿ. ಈ ಕೊಟ್ಟೆ ಕಡುಬು ತುಂಬಾನೆ ಮೃದುವಾಗಿದ್ದು ಕಾಯಿ ಚಟ್ನಿ ಮತ್ತು ಸಾಂಬರ್‌ನೊಂದಿಗೆ ಸವಿಯಲು ಉತ್ತಮವಾಗಿರುತ್ತದೆ. ಕೆಲವು ಮಾರ್ಕೆಟ್‌ಗಲಲ್ಲಿ ಈ ಕೊಟ್ಟೆ ಕಡುಬು ಎಲೆಗೆಳು ಲಭ್ಯವಿರುತ್ತದೆ. ಅವುಗಳನ್ನು ಬಳಸಿಕೊಂಡು ಮನೆಯಲ್ಲಿಯೆ ರುಚಿಕರವಾದ ಹಾಗೂ ಆರೋಗ್ಯಕರವಾದ ಕೊಟ್ಟೆ ಕಡುಬನ್ನು ಮಾಡಿ ತಿನ್ನಬಹುದು. ಈ ಕಡುಬುಗಳನ್ನು ಹಲಸಿನ ಮರದ ಎಲೆಗಳಿಂದ ಕೂಡಾ ಮಾಡಬಹುದಾಗಿದೆ.
ಕರ್ನಾಟಕದಾದ್ಯಂತ ಹೆಚ್ಚಿನ ಮನೆಗಳಲ್ಲಿ ಅಡುಗೆಯಲ್ಲಿ ಈ ಸಬ್ಬಸಿಗೆ ಸೊಪ್ಪನ್ನು ಬಳಸುತ್ತಾರೆ. ದಾಲ್ ಹಾಗೂ ವಿವಿಧ ರೀತಿಯ ಸಾಂಬಾರ್‌ಗಳಲ್ಲೂ ಇದನ್ನು ಸೇರಿಸಲಾಗುತ್ತದೆ. ಅತ್ಯಂತ ಜನಪ್ರಿಯ ಉಪಹಾರ ಭಕ್ಷ್ಯಗಳಲ್ಲಿ ಒಂದಾದ ಅಕ್ಕಿರೊಟ್ಟಿಯು ಸುವಾಸನೆ ಹೆಚ್ಚಾಗಲು ಹಾಗೂ ಅದು ಗರಿಗರಿಯಾಗಿರಲು ನುಣ್ಣಗೆ ಹೆಚ್ಚಿದ ಸಬ್ಬಸಿಗೆ ಎಲೆಗಲನ್ನು ಸೇರಿಸುವುದು ಅತ್ಯಗತ್ಯ. ಕೆಲವೊಬ್ಬರು ಸಬ್ಬಸಿಗೆ ಸೊಪ್ಪನ್ನು ಬಳಸಿ ಚಪಾತಿ, ರೋಟಿಯನ್ನು ಕೂಡಾ ತಯಾರಿಸುತ್ತಾರೆ. ಸಬ್ಬಸಿಗೆ ಸೊಪ್ಪನ್ನು ಸೇರಿಸುವುದರಿಂದ ರೊಟ್ಟಿಯ ರುಚಿ ಇನಷ್ಟು ಹೆಚಾಗುತ್ತದೆ.
ಬಾಳೆಎಲೆಯನ್ನು ಉಪಯೋಗಿಸಿಕೊಂಡು ಇಡ್ಲಿಯಂತಹ ಭಕ್ಷ್ಯಗಳನ್ನು ತಯಾರಿಸಬಹುದು. ಬಾಳೆ ಎಲೆಗಳಿಂದ ತಯಾರಿಸುವ ಭಕ್ಷ್ಯಗಳು ಮೃದುವಾಗಿರುತ್ತದೆ ಮತ್ತು ಬಾಯಲ್ಲಿಟ್ಟರೆ ಕರಗುವಂತಿರುತ್ತದೆ. ಮಂಗಳೂರು ಸೌತೆಕಾಯಿಯನ್ನು ಬಳಸಿಕೊಂಡು ಬಾಳೆಎಲೆ ಕಡುಬು ಮಾಡಬಹುದು. ಇದಕ್ಕಾಗಿ ಸೌತೆಕಾಯಿಯನ್ನು ಸಣ್ಣ ಹೋಳುಗಳನ್ನಾಗಿ ಮಾಡಿ ನಂತರ ದಪ್ಪಗಿನ ಅಕ್ಕಿ ಹಿಟ್ಟನ್ನು ತಯಾರಿಸಿ ಅದಕ್ಕೆ ಕೊಚ್ಚಿಟ್ಟ ಸೌತೆಕಾಯಿ ಮತ್ತು ತೆಂಗಿನಕಾಯಿ ತುರಿಯನ್ನು ಸೇರಿಸಿ. ಬಾಳೆಎಲೆಯಲ್ಲಿ ಮಡಚಿಟ್ಟು ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ಹಾಗೂ ದೋಸೆ ಅಕ್ಕಿ, ಉದ್ದಿನ ಬೇಳೆ, ತೆಂಗಿನಕಾಯಿ, ಕರಿಬೇವಿನ ಎಲೆ ಹಾಗೂ ಇತರ ಮಸಾಲೆಗಳನ್ನು ಸೇರಿಸಿ ಬಾಳೆಎಲೆಯಲ್ಲಿ ಖಾರ ಕಡುಬನ್ನು ಕೂಡಾ ತಯಾರಿಸಬಹುದು.
ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆಗಾಗಿ ಈ ಗಿಡಮೂಲಿಕೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ
ಕರ್ನಾಟಕದ ಅತ್ಯಂತ ರುಚಿಕರವಾದ ಸಿಹಿತಿನಿಸುಗಳಲ್ಲಿ ಒಂದು ಅರಶಿನ ಎಲೆಯ ಸಿಹಿ ಕಡುಬು. ಮೊದಲು ಅರಶಿನ ಎಲೆಯನ್ನಿಟ್ಟು ಅದಕ್ಕೆ ಮೊದಲೇ ತಯಾರಿಸಿದ ಅಕ್ಕಿ ಹಿಟ್ಟನ್ನು ಹಾಕಿ ಅದರ ಮೇಲೆ ಬೆಲ್ಲ, ಅವಲಕ್ಕಿ, ಕಾಯಿತುರಿ, ಎಳ್ಳನ್ನು ಚೆನ್ನಾಗಿ ತುಪ್ಪದಲ್ಲಿ ಮಿಶ್ರಣ ಮಾಡಿ ಹಿಟ್ಟಿನ ಮೇಲೆ ಹಾಕಿ ಅದನ್ನು ಮಡಚಿ ನಂತರ ಇಡ್ಲಿ ಪಾತ್ರೆಯ ಹಬೆಯಲ್ಲಿ ಬೇಯಲು ಬಿಡಬೇಕು. ಅರಶಿನ ಎಲೆಯ ಪರಿಮಳದೊಂದಿಗೆ ಸಿಹಿಯಾದ ಕಡುಬನ್ನು ತಿನ್ನಲು ಸ್ವಾದಿಷ್ಟಕರವಾಗಿರುತ್ತದೆ.
ಕೆಸುವಿನ ಎಲೆಯಲ್ಲಿ ಪತ್ರೊಡೆಯನ್ನು ತಯಾರಿಸುತ್ತಾರೆ. ಮಳೆಗಾಲದಲ್ಲಿ ಹೆಚ್ಚಾಗಿ ಕೆಸುವಿನ ಎಲೆಗಳು ಲಭ್ಯವಿರುವುದರಿಂದ ಮಳೆಗಾಲದಲ್ಲಿ ಹೆಚ್ಚಾಗಿ ಪತ್ರೊಡೆಯನ್ನು ಮಾಡುತ್ತಾರೆ. ಇದು ಒಂದು ರೀತಿಯ ಮಳೆಗಾಲದ ಭಕ್ಷ್ಯವಾಗಿದೆ. ಅಕ್ಕಿ, ತುರಿದ ತೆಂಗಿನ ಕಾಯಿ, ಹುಣಸೆ ಹಣ್ಣು, ಕೆಂಪು ಮೆಣಸಿನಕಾಯಿ ಹಾಗೂ ಇತರ ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ ಹಿಟ್ಟನ್ನು ತಯಾರಿಸಿ ಅದನ್ನು ಕೆಸುವಿನ ಎಲೆಯ ಮೇಲೆ ಸುರಿದು ಆ ಎಲೆಗಳನ್ನು ಮಡಚಿ ಹಬೆಯಲ್ಲಿ ಬೇಯಿಸಬೇಕು. ಇದು ಬೆಂದ ನಂತರ ಅವುಗಳನ್ನು ತುಂಡರಿಸಿ ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಹುರಿಯಲಾಗುತ್ತದೆ. ಇದರಿಂದ ಪತ್ರೊಡೆಯ ರುಚಿ ಇಹೆಚ್ಚಾಗುತ್ತದೆ. ಇದು ಒಂದು ರೀತಿಯ ವಿಧಾನವಾಗಿದೆ. ಇನ್ನು ಹಲವು ಪ್ರಕಾರಗಳಲ್ಲಿ ಪತ್ರೊಡೆಯನ್ನು ತಯಾರಿಸಲಾಗುತ್ತದೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿಯ ಔತಣ ಅಥವಾ ಬೆಳಗಿನ ಉಪಹಾರವಾಗಿ ದೊರೆಯುವ ಬಿರಿಯಾನಿ ಎಂದರೆ ಅದು ದೊನ್ನೆ ಬಿರಿಯಾನಿ. ದೊನ್ನೆ ಎಂದರೆ ತಾಳೆ ಎಲೆಗಳಿಂದ ಮಾಡಿದ ದೊಡ್ಡ ಬಟ್ಟಲು. ಈ ತಾಳೆಎಲೆಯಲ್ಲಿ ಬಿಯಾನಿ ಹಾಕಿ ತಿನ್ನುವುದರಿಂದ ಅದರ ಸ್ವಾದ ಮತ್ತಷ್ಟು ಹೆಚ್ಚುತ್ತದೆ. ಅದಲ್ಲದೆ ಇದು ಪರಿಸರ ಸ್ನೇಹಿಯೂ ಆಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 9:57 am, Fri, 17 February 23