Gut Health: ಆರೋಗ್ಯಕರ ಜೀರ್ಣಕ್ರಿಯೆಗಾಗಿ ಈ ಗಿಡಮೂಲಿಕೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ
ಆರೋಗ್ಯಕರ ಜೀರ್ಣಕ್ರಿಯೆಗಾಗಿ ಈ ಪ್ರಮುಖ ಗಿಡಮೂಲಿಕೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದು ಮಾತ್ರವಲ್ಲದೇ ಆರೋಗ್ಯದ ಮೇಲೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.
ಆರೋಗ್ಯವನ್ನು ಕಾಪಾಡುವಲ್ಲಿ ನೀವು ಸೇವಿಸುವ ಆಹಾರ ಕ್ರಮಗಳು ಪ್ರಮುಖವಾಗಿರುತ್ತದೆ. ಇಂದಿನ ಬದಲಾದ ಜೀವನಶೈಲಿಯಿಂದಾಗಿ ನೀವು ಸೇವಿಸುವ ಆಹಾರಗಳು ಅಜೀರ್ಣವಾಗುವ ಸಾಧ್ಯತೆ ಹೆಚ್ಚಿದೆ. ಅಜೀರ್ಣವು ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಆದ್ದರಿಂದ ಆರೋಗ್ಯಕರ ಜೀರ್ಣಕ್ರಿಯೆಗಾಗಿ ಈ ಪ್ರಮುಖ ಗಿಡಮೂಲಿಕೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದು ಮಾತ್ರವಲ್ಲದೇ ಆರೋಗ್ಯದ ಮೇಲೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ದಾಲ್ಚಿನ್ನಿ, ಅರಿಶಿನ, ಶುಂಠಿ ಮತ್ತು ಪುದೀನಾ ಮುಂತಾದ ನಿಮ್ಮ ಗಿಡಮೂಲಿಕೆಯನ್ನು ನಿಮ್ಮ ಆಹಾರಕ್ರಮದಲ್ಲಿ ರೂಢಿಸಿಕೊಳ್ಳಿ.
ಆರೋಗ್ಯಕರ ಜೀರ್ಣಕ್ರಿಯೆಗಾಗಿ ಈ ಗಿಡಮೂಲಿಕೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ
ದಾಲ್ಚಿನ್ನಿ:
ಪುರಾತನ ಕಾಲದಿಂದಲೂ ದಾಲ್ಚಿನ್ನಿಯನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಇದು ಜಠರಗರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ನೀವು ದಾಲ್ಚಿನ್ನಿಯನ್ನು ಚಹಾ ಅಥವಾ ಸ್ಮೂಥಿಯಲ್ಲಿ ಸೇರಿಸಿಕೊಳ್ಳಬಹುದು.
ತ್ರಿಫಲ:
ಮತ್ತೊಂದು ಹೆಸರಾಂತ ಗಿಡಮೂಲಿಕೆಗಳ ಮಿಶ್ರಣವಾಗಿದ್ದು, ಹಿಂದಿನ ಕಾಲದಿಂದಲೂ ಬಳಸಲಾಗುತ್ತಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಾಗಗೊಳಿಸಲು ನೆಲ್ಲಿಕಾಯಿ ಸೇರಿದಂತೆ ಇನ್ನೆರಡು ಹಣ್ಣುಗಳ ಸಂಯೋಜನೆಯೊಂದಿಗೆ ತಯಾರಿಸಲಾಗುತ್ತದೆ. ಇದು ಆರೋಗ್ಯಕರ ಕರುಳಿನ ಚಲನೆ ಮತ್ತು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಜರ್ನಲ್ ಆಫ್ ಆಲ್ಟರ್ನೇಟಿವ್ ಮತ್ತು ಕಾಂಪ್ಲಿಮೆಂಟರಿ ಮೆಡಿಸಿನ್ ಪ್ರಕಾರ, ತ್ರಿಫಲಾದಲ್ಲಿನ ಪಾಲಿಫಿನಾಲ್ಗಳು ಮಾನವ ಕರುಳಿನ ಸೂಕ್ಷ್ಮಜೀವಿಯನ್ನು ಮಾರ್ಪಡಿಸುತ್ತದೆ. ಇದು ಕರುಳಿನ ಶುದ್ಧೀಕರಣ ಮತ್ತು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ತ್ರಿಫಲವನ್ನು ನೀರು, ಸ್ಮೂಥಿಗಳಲ್ಲಿ ಸೇರಿಸಿ ಸೇವಿಸಬಹುದಾಗಿದೆ.
ಇದನ್ನೂ ಓದಿ: ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ನೈಸರ್ಗಿಕ ಮನೆಮದ್ದು
ಅರಶಿನ:
ಅರಿಶಿನವು ಸುಮಾರು 4,000 ವರ್ಷಗಳಿಂದ ಗಿಡಮೂಲಿಕೆ ಔಷಧಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಅರಿಶಿನವು ಪ್ರಾಚೀನ ಕಾಲದಿಂದಲೂ ಭಾರತೀಯ ವೈದಿಕ ಸಂಸ್ಕೃತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಆರೋಗ್ಯಕರ ಉರಿಯೂತ ಪ್ರತಿಕ್ರಿಯೆಯನ್ನು ಬೆಂಬಲಿಸುವ ಸಾಮರ್ಥ್ಯ ಮತ್ತು ಜಠರಗರುಳಿನ ಆರೋಗ್ಯ ಮತ್ತು ಕಾರ್ಯದ ಮೇಲೆ ಪ್ರಯೋಜನಕಾರಿಯಾಗಿದೆ. ಜೀರ್ಣಕ್ರಿಯೆ, ಉಸಿರಾಟದ ಕಾರ್ಯ, ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯ ಕಾರ್ಯವನ್ನು ಸರಾಗಗೊಳಿಸುವಲ್ಲಿ ಅರಶಿನ ಸಹಾಯಕವಾಗಿದೆ. ಅರಶಿನವನ್ನು ಸಾಮಾನ್ಯವಾಗಿ ಪ್ರತಿದಿನದ ಆಹಾರ ಕ್ರಮಗಳಲ್ಲಿ ಬಳಸುವುದರ ಜೊತೆಗೆ ಅರಶಿನದ ಪುಡಿಗಳನ್ನು ಹಾಲಿನಲ್ಲಿ ಹಾಕಿ ಕುಡಿಯಬಹುದು.
ಶುಂಠಿ:
ಜೀರ್ಣಕಾರಿ ಬೆಂಬಲಕ್ಕಾಗಿ ಸಾರ್ವತ್ರಿಕವಾಗಿ ಪರಿಚಿತವಾಗಿರುವ ಮತ್ತೊಂದು ಮೂಲಿಕೆ ಶುಂಠಿ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನಗಳಲ್ಲಿ ಶುಂಠಿಯು ಜೀರ್ಣಾಂಗ ವ್ಯವಸ್ಥೆಯಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ತಿಳಿದುಬಂದಿದೆ. ಇದನ್ನು ಮೇಲೋಗರಗಳಾಗಿ ಬೇಯಿಸಿ, ಜೇನುತುಪ್ಪದೊಂದಿಗೆ ನುಣ್ಣಗೆ ಕತ್ತರಿಸಿ ಹಸಿಯಾಗಿ ತಿನ್ನಬಹುದು, ಚಹಾಕ್ಕೆ ಕುದಿಸಬಹುದು , ಸ್ಮೂಥಿಗಳಾಗಿ ಪುಡಿಮಾಡಬಹುದು ಅಥವಾ ದೈನಂದಿನ ಪೂರಕ ಕ್ಯಾಪ್ಸುಲ್ ಆಗಿ ತೆಗೆದುಕೊಳ್ಳಬಹುದು.
ಪುದೀನಾ :
ತಾಜಾ ಅಥವಾ ಒಣಗಿದ ಪುದೀನಾ ಎಲೆಗಳನ್ನು ಚಹಾ ಮತ್ತು ಅಡುಗೆಗಳಲ್ಲಿ ಪ್ರತಿದಿನ ಆರೋಗ್ಯಕರ ಜೀರ್ಣಕಾರಿ ಕ್ರಿಯೆಗಾಗಿ ಬಳಸಬಹುದಾಗಿದೆ. ಪುದೀನಾ ಎಣ್ಣೆ ಮತ್ತು ಎಲೆಗಳನ್ನು ಕ್ಯಾಪ್ಸುಲ್‌ಗಳು ಮತ್ತು ಮೃದುವಾದ ಜೆಲ್‌ಗಳಲ್ಲಿಯೂ ಕಾಣಬಹುದು, ಇದನ್ನು ವಿವಿಧ ಡೋಸೇಜ್‌ಗಳಲ್ಲಿ ತ್ವರಿತ, ಸುಲಭ ಬಳಕೆಗಾಗಿ ಪೂರಕವಾಗಿ ತೆಗೆದುಕೊಳ್ಳಲಾಗುತ್ತದೆ. ಸಂಶೋಧನೆಯ ಪ್ರಕಾರ, ಪುದೀನಾ ಜಠರಗರುಳಿನ ಕಾರ್ಯವನ್ನು ಬೆಂಬಲಿಸುವ ಗುಣಲಕ್ಷಣಗಳನ್ನು ಹೊಂದಿವೆ. ಆಯುರ್ವೇದದಲ್ಲಿ, ಪುದೀನಾವನ್ನು ದೇಹವನ್ನು ಉತ್ತೇಜಿಸಲು ಮತ್ತು ನಿರ್ವಿಷಗೊಳಿಸಲು ಸಹಾಯ ಮಾಡುವ ಸಾಮರ್ಥ್ಯಕ್ಕಾಗಿ ಬಳಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: