ಈ ಬೇಸಿಯ ಸುಡುಬಿಸಿಲಿಗೆ ನೀರು ಎಷ್ಟು ಕುಡಿದರೂ ಕಡಿಮೆ. ಆದರೆ ನೀವು ಬರೀ ನೀರು ಕುಡಿಯುವ ಬದಲಾಗಿ ಅದಕ್ಕೆ ಆರೋಗ್ಯಕರವಾಗಿ ಒಂದಿಷ್ಟು ರುಚಿಯನ್ನು ಸೇರಿಸಿ. ಸುಲಭವಾದ ಹಾಗೂ ಆರೋಗ್ಯಕರ ವಿಧಾನಗಳೊಂದಿಗೆ ಸಾಮಾನ್ಯ ನೀರಿನ ರುಚಿಯನ್ನು ಉತ್ತಮಗೊಳಿಸಿ. ನೀವು ಸಕ್ಕರೆ ಪಾನೀಯಗಳನ್ನು ಸೇವಿಸಲು ಇಷ್ಟಪಡದವರಾಗಿದ್ದರೆ, ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
ತಾಜಾ ಹಣ್ಣುಗಳು ನಿಮ್ಮ ದೇಹವನ್ನು ಪೋಷಿಸಲು ಉತ್ತಮ ಮಾರ್ಗವಾಗಿದೆ. ನಿಂಬೆಹಣ್ಣು, ಕಿತ್ತಳೆಗಳಂತಹ ಸಿಟ್ರಸ್ ಹಣ್ಣುಗಳ ರಸವನ್ನು ನೀರಿನೊಂದಿಗೆ ಸೇರಿಸುವುದರಿಂದ ನೀರಿನ ರುಚಿಯನ್ನು ಹೆಚ್ಚಿಸಬಹುದು. ಇದಲ್ಲದೇ ಸೌತೆಕಾಯಿ ಮತ್ತು ತಾಜಾ ಪುದೀನಾ ಸಹ ರಿಫ್ರೆಶ್ ಸುವಾಸನೆಗಳಾಗಿವೆ. ನೀವು ಅವುಗಳನ್ನು ಕತ್ತರಿಸಿ ನೀರಿಗೆ ಸೇರಿಸಬಹುದು. ಇದು ನಿಮ್ಮನ್ನು ತೇವಾಂಶದಿಂದಿರಿಸುವುದು ಮಾತ್ರವಲ್ಲದೆ ನೀರಿಗೆ ಪರಿಮಳವನ್ನು ನೀಡುತ್ತದೆ.
ಸಾಮಾನ್ಯವಾದ ಬೆರ್ರಿ ಹಣ್ಣಿಗಿಂತ ಫ್ರಿಡ್ಜ್‌ನ ಐಸ್ ಟ್ರೇಗೆ ಸಣ್ಣ ಬೆರ್ರಿ ಹಣ್ಣುಗಳನ್ನು ಸೇರಿಸಿ ಮತ್ತು ಅಂಚಿನಲ್ಲಿ ನೀರು ತುಂಬಿಸಿ ನಂತರ ಅವುಗಳನ್ನು ಫ್ರೀಜ್ ಮಾಡಿ. ಈ ಫ್ರೀಜ್ ಮಾಡಿದ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ದೇಹವನ್ನು ತೇವಾಂಶ ಕಳೆದುಕೊಳ್ಳದಂತೆ ನೋಡಿಕೊಳ್ಳಬಹುದು.
ಇದನ್ನೂ ಓದಿ: ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ, ದಿನಾಂಕ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ
ನಿಂಬೆ ಯಾವಾಗಲೂ ನಿಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ನೀವು ನಿಂಬೆಹಣ್ಣನ್ನು ಚಿಕ್ಕದಾಗಿ ಸ್ಲೈಸ್ ಮಾಡಿ ನೀರಿನೊಂದಿಗೆ ಸೇರಿಸಿ ಕುಡಿಯಿರಿ. ಇದು ನೀರಿನ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಬೇಸಿಗೆಯಲ್ಲಿ ಆರೋಗ್ಯಕ್ಕೂ ಒಳ್ಳೆಯದು.
ಸೌತೆಕಾಯಿಯಂತಹ ತರಕಾರಿಗಳನ್ನು ಸಿಪ್ಪೆ ತೆಗೆಯುವಾಗ ಸಿಪ್ಪೆಗಳನ್ನು ಏಕೆ ಎಸೆಯಬೇಕು ? ತರಕಾರಿಯ ಸಿಪ್ಪೆಯನ್ನು ನೀರಿನೊಂದಿಗೆ ಸೇರಿಸಿ ಮತ್ತು ಫ್ರಿಜ್‌ನಲ್ಲಿ 2 ರಿಂದ 3 ದಿನಗಳವರೆಗೆ ಇಡಿ. ನಂತರ ನೀವು ಅದನ್ನು ಸೋಸಬಹುದು ಮತ್ತು ನಂತರ ಸಿಪ್ಪೆಯನ್ನು ಎಸೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: