AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel: ಪ್ರಕೃತಿ ಮಡಿಲಲ್ಲಿ ರಜಾ ದಿನಗಳನ್ನು ಕಳೆಯುವ ಹಂಬಲವಿದೆಯಾ? ಹಾಗಾದರೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ

ಯಾವುದೇ ಜಂಜಾಟವಿಲ್ಲದೆ ಪ್ರಕೃತಿ ಮಡಿಲಿನಲ್ಲಿ ರಜಾ ದಿನಗಳನ್ನು ಕಳೆಯಲು ಬಯಸುವವರು ಮೊದಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ನಿಮ್ಮ ಒತ್ತಡ, ಆತಂಕ ಎಲ್ಲವನ್ನು ಅಲ್ಲಿಯೇ ಬಿಟ್ಟು ಶಾಂತತೆಯನ್ನು ಮತ್ತು ನೆಮ್ಮದಿಯನ್ನು ಮಾತ್ರ ಹಿಂದೆ ತರಬೇಕು. ಹಾಗಾದರೆ ಏನು ಮಾಡಬೇಕು ಇಲ್ಲಿದೆ ಮಾಹಿತಿ.

Travel: ಪ್ರಕೃತಿ ಮಡಿಲಲ್ಲಿ ರಜಾ ದಿನಗಳನ್ನು ಕಳೆಯುವ ಹಂಬಲವಿದೆಯಾ? ಹಾಗಾದರೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:May 20, 2023 | 1:32 PM

Share

ಕೋವಿಡ್ ನಂತರ ಒತ್ತಡ ಮತ್ತು ಆತಂಕ ಎಲ್ಲರಲ್ಲೂ ಸಾಮಾನ್ಯ ವಾಗಿಬಿಟ್ಟಿದೆ. ಹಾಗಾಗಿ ಅದೆಲ್ಲದರಿಂದ ಮುಕ್ತಿ ಹೊಂದಲು ನಾವೆಲ್ಲರೂ ಎಲ್ಲಾದರೂ ಒಂದು ಬಾರಿ ದೂರ ಪ್ರವಾಸ ಹೋಗಬೇಕು ಎಂದುಕೊಳ್ಳುತ್ತೇವೆ. ಅದಕ್ಕಿಂತಲೂ ಜಾಸ್ತಿ ನೆಮ್ಮದಿ ನೀಡುವ ಜಾಗವಿದ್ದರೆ ಅಲ್ಲಿಗೆ ಹೋಗಬೇಕು ಎಂದುಕೊಂಡಿರುತ್ತೇವೆ. ನಮ್ಮಲ್ಲಿ ಬಹಳಷ್ಟು ಜನರು ಕಾಡಿನಲ್ಲಿ ಕ್ಯಾಂಪಿಂಗ್ ಮಾಡುವ ಮೂಲಕ ಅಥವಾ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಒಂದು ದಿನ ನದಿಯ ಬಳಿ ವಿಶ್ರಾಂತಿ ಪಡೆಯುವ ಕನಸು ಕಾಣುತ್ತಾರೆ. ಏಕೆಂದರೆ ಪ್ರಕೃತಿಗೆ ನಮ್ಮ ಮನಸ್ಸಿನ ದುಗುಡ ತಣಿಸುವ ಶಕ್ತಿಯಿದೆ. ಅದು ನಿಮ್ಮ ಭುಜಗಳಿಗೆ ಅಂಟಿಕೊಂಡ ಭಾರವನ್ನು ಕಡಿಮೆ ಮಾಡುತ್ತದೆ.

ಆದರೆ ನಗರವಾಸಿಗಳಾದ ನಮಗೆ ಪ್ರಕೃತಿಯ ಶಕ್ತಿ ಬಗ್ಗೆ ತಿಳಿದಿಲ್ಲ. ನೈರ್ಮಲ್ಯದ ದೃಷ್ಟಿಕೋನದಿಂದ ನಾವು ದೈನಂದಿನ ಸ್ನಾನ, ಸ್ವಚ್ಛವಾದ ಬಟ್ಟೆ ಮತ್ತು ಗಂಟೆಗೊಮ್ಮೆ ಹ್ಯಾಂಡ್ ವಾಶ್​​ಗಳಿಂದ ಹಾಳಾಗುತ್ತಿದ್ದೇವೆ. ಇದರ ಹೊರತಾಗಿ ನಮಗೆ ಜೀವನವಿಲ್ಲ ಎಂದುಕೊಂಡಿದ್ದೇವೆ. ಖಂಡಿತವಾಗಿಯೂ ಇದು ಹೌದು. ಇದೆಲ್ಲವೂ ಮುಖ್ಯ. ಆದರೆ ಇದಕ್ಕಿಂತ ಬದುಕಿನಲ್ಲಿ ಸೋತ ಹಾದಿಯಿಂದ ಹೊರಬರಲು ಅಥವಾ ಸುಂದರವಾಗಿ ಬದುಕಲು ಹಲವಾರು ವಿಷಯಗಳಿವೆ. ನೀವು ಎಲ್ಲಾದರೂ ಹೋಗಬೇಕು ಎಂದುಕೊಂಡಿದ್ದರೆ ಮೊದಲು ಆ ಬಗ್ಗೆ ಸರಿಯಾದ ಪ್ಲಾನ್ನಿಂಗ್ ಮಾಡಿಕೊಳ್ಳಿ. ನೀವು ಹೋಗುವ ಜಾಗ ಹೇಗಿರಬೇಕು? ಯಾವ ರೀತಿಯಲ್ಲಿ ಸಿದ್ಧತೆ ನಡೆಸಬೇಕು ಎನ್ನುವುದು ತುಂಬಾ ಮುಖ್ಯವಾಗುತ್ತದೆ. ನಿಮ್ಮ ಶಿಬಿರ ಅಥವಾ ಪ್ರವಾಸಕ್ಕೆ ಯಾವ ಜಾಗ ಆಯ್ದುಕೊಳ್ಳುತ್ತೀರಿ ಅದರ ಆದರದ ಮೇಲೆ ನೀವು ನೀರಿನ ಗ್ಯಾಲನ್ ಗಳನ್ನು ಪ್ಯಾಕ್ ಮಾಡಬೇಕಾಗುತ್ತದೆ ಎಂಬುದು ತಿಳಿಯುತ್ತದೆ. ಹರಿಯುವ ನೀರಿದ್ದರೆ ತುಂಬಾ ಅನುಕೂಲ. ಹೆಚ್ಚು ಹೆಚ್ಚು ನೀರು ತೆಗೆದುಕೊಂಡು ಹೋಗುವ ಆವಶ್ಯಕೆತೆ ಇರುವುದಿಲ್ಲ. ಹಾಗಾಗಿ ತಿನ್ನಲು ಮತ್ತು ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ.

-ನಿಮಗೆ ಮನೆಯಲ್ಲಿ ಕಾಟನ್ ಟೀ ಶರ್ಟ್​​ಗಳು ಬಳಸುವುದು ಉತ್ತಮವಾಗಿರಬಹುದು. ಆದರೆ ಬೇಸಿಗೆ ಸಮೀಪಿಸುತ್ತಿದ್ದಂತೆ ನೀವು ಹೊರಗೆ ಮತ್ತು ಬಿಸಿ ವಾತಾವರಣದಲ್ಲಿದ್ದರೆ, ಯಾವ ರೀತಿಯ ಬಟ್ಟೆಗಳು ಧರಿಸಲು ಸೂಕ್ತವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಕಾಟನ್ ಬಟ್ಟೆಗಳು ಬೇಸಗೆ ಕಾಲದಲ್ಲಿ ಹೆಚ್ಚು ಸೂಕ್ತವಾದದ್ದು. ನೈಲಾನ್ ಮತ್ತು ಪಾಲಿಯೆಸ್ಟರ್ ನಂತಹ ಸಂಶ್ಲೇಷಿತ ಬಟ್ಟೆಗಳು ಬೆವರು ಸುರಿಸುತ್ತವೆ, ಅಂದರೆ ಇದು ನಿಮ್ಮ ದೇಹದಿಂದ ಬೆವರನ್ನು ಸೆಳೆಯುತ್ತದೆ ಆದರೆ ಕಾಟನ್ ಬಟ್ಟೆ ನಿಮ್ಮ ದೇಹವನ್ನು ಶುಷ್ಕವಾಗಿಸುತ್ತದೆ. ಅದರಲ್ಲಿರುವ ವಾತಾಯನ ರಂಧ್ರಗಳು ನಿಮ್ಮ ದೇಹವನ್ನು ತಂಪಾಗಿರಿಸುತ್ತವೆ. ತ್ವರಿತವಾಗಿ ತೊಳೆದ ನಂತರ ಈ ವಸ್ತುಗಳು ಬೇಗನೆ ಒಣಗುತ್ತವೆ ಮತ್ತು ಸುಲಭವಾಗಿ ವಾಸನೆ ಬರುವುದಿಲ್ಲ.

-ಜೊತೆಗೆ ಚಪ್ಪಲಿಗಳನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಕಾಡು ಮೇಡು ಅಲೆಯುವಾಗ ನಿಮಗೆ ಹಳ್ಳ, ಗಿಡ, ಮರ ಎಲ್ಲ ಸಿಗುತ್ತದೆ. ಹಾಗಾಗಿ ಇವೆಲ್ಲದಕ್ಕೂ ಸರಿಯಾಗಿ ಹೊಂದಿಕೊಳ್ಳುವ ಚಪ್ಪಲಿ ಖರೀದಿಸಬೇಕು. ಜೊತೆಗೆ ನಿಮ್ಮನ್ನು ಶುಷ್ಕವಾಗಿರಿಸಬೇಕು. ಇಲ್ಲವಾದಲ್ಲಿ ಬೆವರುವ ವಾತಾವರಣದಲ್ಲಿದ್ದಾಗ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಮತ್ತು ನಿಮ್ಮ ಪಾದಗಳಿಂದ ಕೆಟ್ಟ ವಾಸನೆ ಬರುತ್ತವೆ. ಅವು ಕಾಲಾನಂತರದಲ್ಲಿ ನಿರ್ಮಾಣವಾಗುವ ಸತ್ತ ಚರ್ಮಕ್ಕೆ ಕಾರಣವಾಗಬಹುದು.

-ತಾಜಾತನದ ಅನುಭವವು ಬೆಳಿಗ್ಗೆ ನಿಮ್ಮ ಮುಖದಿಂದ ಪ್ರಾರಂಭವಾಗುತ್ತದೆ. ಮನೆಯಲ್ಲಿ ನೀವು ಹೇಗೆ ಮುಂಜಾನೆ ಬರಮಾಡಿಕೊಳ್ಳುತ್ತಿರೋ ಅದು ಬೇರೆ ವಿಷಯ. ಆದರೆ ಬೇರೆ ಕಡೆ ಹೋದಲ್ಲಿ ಎಲ್ಲ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ನೀವು ದೂರದಲ್ಲಿರುವಾಗ ಇದು ಸಾಧ್ಯವಾಗದಿರಬಹುದು. ಅದಕ್ಕಾಗಿ ನಿಮಗೆ ಯಾವುದು ಮುಖ್ಯವೋ ಅದ್ರ ಸಿದ್ಧತೆ ಮಾಡಿಕೊಳ್ಳಿ. ಹಾಗಾಗಿ ಬ್ಯಾಗ್ ಪ್ಯಾಕ್ ಮಾಡುವಾಗ ಮುಖ ತೊಳೆಯಲು ಕ್ಲೆನ್ಸರ್ ಪ್ಯಾಕ್ ಮಾಡುವುದು ಉತ್ತಮವಾಗಿದೆ. ಜೊತೆಗೆ ನೀರು ಹೆಚ್ಚು ಇರದ ಪ್ರದೇಶಗಳಲ್ಲಿ ನೀವು ಉತ್ಪನ್ನವನ್ನು ನಿಯಮಿತ ಕ್ಲೆನ್ಸರ್ನೊಂದಿಗೆ ಅನ್ವಯಿಸಿದಂತೆಯೇ ಅನ್ವಯಿಸಬೇಕು, ಆದರೆ ಅದನ್ನು ತೊಳೆಯುವ ಬದಲು ಒರೆಸಬೇಕು. ಇದರಿಂದ ನಿಮಗೆ ಸಾಕಷ್ಟು ನೀರು ಉಳಿತಾಯವಾಗುತ್ತದೆ.

-ಸಾಧ್ಯವಾದಷ್ಟು ಸ್ನಾನ ಮಾಡಲು ಕಷ್ಟವಾಗುವ ಗುಡ್ಡ ಗಾಡು ಪ್ರದೇಶವಾಗಿದ್ದರೆ ಮೈ ತೊಳೆಯದ ಬಾಡಿ ವಾಶ್ ಖರೀದಿ ಮಾಡಿ ಒಯ್ಯುವುದು ಉತ್ತಮ. ಇವು ಪ್ರಯಾಣಿಕರಿಗೆ ಮಾತ್ರವಲ್ಲ, ಆರೋಗ್ಯದಲ್ಲಿ ಚೇತರಿಕೆ ಇಲ್ಲದೆ ಹಾಸಿಗೆ ಹಿಡಿದಿರುವ ರೋಗಿಗಳಿಗೆ ದೈನಂದಿನ ಸ್ನಾನ ಮಾಡಲು ಸಹ ಬಳಸಲಾಗುತ್ತದೆ.

ಇದನ್ನೂ ಓದಿ:Travel: ನೀವು ಪರಿಸರ ಪ್ರೇಮಿಗಳಾ? ಭಾರತದ ಪ್ರವಾಸ ತಾಣಗಳ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ

-ನೀವು ಸ್ವಲ್ಪ ಸಮಯದವರೆಗೆ ದೂರ ಹೋಗುತ್ತಿದ್ದರೆ, ಒಂದು ವಾರಕ್ಕೆ ಬೇಕಾಗುವ ಬಟ್ಟೆಗಳನ್ನು ಒಗೆಯುವ ಆಲೋಚನೆಯನ್ನು ನಿಮ್ಮಲ್ಲಿ ಇಲ್ಲದಿದ್ದರೆ, ಪ್ರಯಾಣದಲ್ಲಿ ಹೆಚ್ಚು ಬಟ್ಟೆಗಳನ್ನು ತೆಗೆದುಕೊಂಡು ಹೋಗಬೇಡಿ. ಒಂದು ಪ್ಯಾಂಟ್ಗೆ ಎರಡು ಶರ್ಟ್ ಬಳಸುವ ಹಾಗೇ ನೀವು ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಿ. ಅಥವಾ ಎಲ್ಲ ಬಟ್ಟೆಗಳನ್ನು ವಾಷ್ ಮಾಡದೆಯೇ ಒಂದು ಚೀಲದಲ್ಲಿ ಎಲ್ಲವನ್ನು ಪ್ಯಾಕ್ ಮಾಡಿಕೊಂಡು ವಾಪಾಸ್ ತನ್ನಿ. ನಿಮ್ಮ ಪ್ರವಾಸದಲ್ಲಿ ದಪ್ಪವಾಗಿರುವ ಬಟ್ಟೆಗಳನ್ನು ಹೆಚ್ಚು ಒಯ್ಯುವುದನ್ನು ಕಡಿಮೆ ಮಾಡಿ. ಈಗ ಬೇಸಗೆ ಆಗಿರುವುದರಿಂದ ದೇಹ ತಂಪಾಗಿಸುವ ಮತ್ತು ಮುಂದೆ ಮಳೆಗಾಲ ಬರುವುದರಿಂದ ಬಟ್ಟೆ ಬೇಗ ಒಣಗಲು ಸಹಾಯ ಮಾಡುವ ವಸ್ತ್ರಗಳನ್ನು ಆಯ್ಕೆ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 1:28 pm, Sat, 20 May 23