AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯುವ ನೀರಿನ ರುಚಿಯನ್ನು ಉತ್ತಮಗೊಳಿಸಲು ಆರೋಗ್ಯಕರ ಮಾರ್ಗಗಳು ಇಲ್ಲಿವೆ

ಸುಲಭವಾದ ಹಾಗೂ ಆರೋಗ್ಯಕರ ವಿಧಾನಗಳೊಂದಿಗೆ ಸಾಮಾನ್ಯ ನೀರಿನ ರುಚಿಯನ್ನು ಉತ್ತಮಗೊಳಿಸಿ. ನೀವು ಸಕ್ಕರೆ ಪಾನೀಯಗಳನ್ನು ಸೇವಿಸಲು ಇಷ್ಟಪಡದವರಾಗಿದ್ದರೆ, ಈ ಕೆಳಗಿನ ಟಿಪ್ಸ್​​ ಫಾಲೋ ಮಾಡಿ.

ಕುಡಿಯುವ ನೀರಿನ ರುಚಿಯನ್ನು ಉತ್ತಮಗೊಳಿಸಲು ಆರೋಗ್ಯಕರ ಮಾರ್ಗಗಳು ಇಲ್ಲಿವೆ
ಕುಡಿಯುವ ನೀರಿನ ರುಚಿಯನ್ನು ಉತ್ತಮಗೊಳಿಸಲು ಆರೋಗ್ಯಕರ ಮಾರ್ಗಗಳು Image Credit source: The Kitchen Magpie
ಅಕ್ಷತಾ ವರ್ಕಾಡಿ
|

Updated on: May 20, 2023 | 3:16 PM

Share

ಬೇಸಿಯ ಸುಡುಬಿಸಿಲಿಗೆ ನೀರು ಎಷ್ಟು ಕುಡಿದರೂ ಕಡಿಮೆ. ಆದರೆ ನೀವು ಬರೀ ನೀರು ಕುಡಿಯುವ ಬದಲಾಗಿ ಅದಕ್ಕೆ ಆರೋಗ್ಯಕರವಾಗಿ ಒಂದಿಷ್ಟು ರುಚಿಯನ್ನು ಸೇರಿಸಿ. ಸುಲಭವಾದ ಹಾಗೂ ಆರೋಗ್ಯಕರ ವಿಧಾನಗಳೊಂದಿಗೆ ಸಾಮಾನ್ಯ ನೀರಿನ ರುಚಿಯನ್ನು ಉತ್ತಮಗೊಳಿಸಿ. ನೀವು ಸಕ್ಕರೆ ಪಾನೀಯಗಳನ್ನು ಸೇವಿಸಲು ಇಷ್ಟಪಡದವರಾಗಿದ್ದರೆ, ಈ ಕೆಳಗಿನ ಟಿಪ್ಸ್​​ ಫಾಲೋ ಮಾಡಿ.

ನೀರಿನ ರುಚಿಯನ್ನು ಇನ್ನಷ್ಟು ಉತ್ತಮಗೊಳಿಸುವುದು ಹೇಗೆ ?

ತಾಜಾ ಹಣ್ಣುಗಳು:

ತಾಜಾ ಹಣ್ಣುಗಳು ನಿಮ್ಮ ದೇಹವನ್ನು ಪೋಷಿಸಲು ಉತ್ತಮ ಮಾರ್ಗವಾಗಿದೆ. ನಿಂಬೆಹಣ್ಣು, ಕಿತ್ತಳೆಗಳಂತಹ ಸಿಟ್ರಸ್ ಹಣ್ಣುಗಳ ರಸವನ್ನು ನೀರಿನೊಂದಿಗೆ ಸೇರಿಸುವುದರಿಂದ ನೀರಿನ ರುಚಿಯನ್ನು ಹೆಚ್ಚಿಸಬಹುದು. ಇದಲ್ಲದೇ ಸೌತೆಕಾಯಿ ಮತ್ತು ತಾಜಾ ಪುದೀನಾ ಸಹ ರಿಫ್ರೆಶ್ ಸುವಾಸನೆಗಳಾಗಿವೆ. ನೀವು ಅವುಗಳನ್ನು ಕತ್ತರಿಸಿ ನೀರಿಗೆ ಸೇರಿಸಬಹುದು. ಇದು ನಿಮ್ಮನ್ನು ತೇವಾಂಶದಿಂದಿರಿಸುವುದು ಮಾತ್ರವಲ್ಲದೆ ನೀರಿಗೆ ಪರಿಮಳವನ್ನು ನೀಡುತ್ತದೆ.

ಬೆರ್ರಿ ಹಣ್ಣು:

ಸಾಮಾನ್ಯವಾದ ಬೆರ್ರಿ ಹಣ್ಣಿಗಿಂತ ಫ್ರಿಡ್ಜ್‌ನ ಐಸ್ ಟ್ರೇಗೆ ಸಣ್ಣ ಬೆರ್ರಿ ಹಣ್ಣುಗಳನ್ನು ಸೇರಿಸಿ ಮತ್ತು ಅಂಚಿನಲ್ಲಿ ನೀರು ತುಂಬಿಸಿ ನಂತರ ಅವುಗಳನ್ನು ಫ್ರೀಜ್ ಮಾಡಿ. ಈ ಫ್ರೀಜ್​​ ಮಾಡಿದ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ದೇಹವನ್ನು ತೇವಾಂಶ ಕಳೆದುಕೊಳ್ಳದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ, ದಿನಾಂಕ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ

ಸ್ಲೈಸ್ ಮಾಡಿದ ನಿಂಬೆ:

ನಿಂಬೆ ಯಾವಾಗಲೂ ನಿಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ನೀವು ನಿಂಬೆಹಣ್ಣನ್ನು ಚಿಕ್ಕದಾಗಿ ಸ್ಲೈಸ್ ಮಾಡಿ ನೀರಿನೊಂದಿಗೆ ಸೇರಿಸಿ ಕುಡಿಯಿರಿ. ಇದು ನೀರಿನ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಬೇಸಿಗೆಯಲ್ಲಿ ಆರೋಗ್ಯಕ್ಕೂ ಒಳ್ಳೆಯದು.

ತರಕಾರಿ ಸಿಪ್ಪೆ:

ಸೌತೆಕಾಯಿಯಂತಹ ತರಕಾರಿಗಳನ್ನು ಸಿಪ್ಪೆ ತೆಗೆಯುವಾಗ ಸಿಪ್ಪೆಗಳನ್ನು ಏಕೆ ಎಸೆಯಬೇಕು ? ತರಕಾರಿಯ ಸಿಪ್ಪೆಯನ್ನು ನೀರಿನೊಂದಿಗೆ ಸೇರಿಸಿ ಮತ್ತು ಫ್ರಿಜ್‌ನಲ್ಲಿ 2 ರಿಂದ 3 ದಿನಗಳವರೆಗೆ ಇಡಿ. ನಂತರ ನೀವು ಅದನ್ನು ಸೋಸಬಹುದು ಮತ್ತು ನಂತರ ಸಿಪ್ಪೆಯನ್ನು ಎಸೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
Weekly Horoscope: ಜುಲೈ 21 ರಿಂದ 27ರವರೆಗಿನ ವಾರ ಭವಿಷ್ಯ
Weekly Horoscope: ಜುಲೈ 21 ರಿಂದ 27ರವರೆಗಿನ ವಾರ ಭವಿಷ್ಯ
ಪುಣ್ಯಕ್ಷೇತ್ರ ದರ್ಶನದಿಂದ ಏನೇನು ಪ್ರಯೋಜನ? ತಿಳಿಯಿರಿ
ಪುಣ್ಯಕ್ಷೇತ್ರ ದರ್ಶನದಿಂದ ಏನೇನು ಪ್ರಯೋಜನ? ತಿಳಿಯಿರಿ
ಕೃತ್ತಿಕಾ ನಕ್ಷತ್ರದ ಪ್ರಭಾವದಿಂದಾಗಿ ಈ ದಿನ ಹಲವು ರಾಶಿಯವರಿಗೆ ಶುಭಕರ
ಕೃತ್ತಿಕಾ ನಕ್ಷತ್ರದ ಪ್ರಭಾವದಿಂದಾಗಿ ಈ ದಿನ ಹಲವು ರಾಶಿಯವರಿಗೆ ಶುಭಕರ