Hindi Diwas 2024 : ಹಿಂದಿ ಆಯ್ಕೆಯಾಗಿರಲಿ, ಆದರೆ ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಇರಲಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2024 | 9:49 AM

ಭಾರತದ ಸಂವಿಧಾನವು ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಗುರುತಿಸಿದ್ದರ ಸವಿನೆನಪಿಗಾಗಿ ಪ್ರತಿ ವರ್ಷ ಅದೇ ದಿನವನ್ನು ರಾಷ್ಟ್ರೀಯ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತದೆ. ಸುಮಾರು 425 ಮಿಲಿಯನ್ ಜನರು ಹಿಂದಿಯನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ. ಹಾಗೂ 120 ಮಿಲಿಯನ್ ಜನರು ಹಿಂದಿಯನ್ನು ಎರಡನೇ ಭಾಷೆಯಾಗಿ ಮಾತನಾಡುತ್ತಾರೆ. ಹೀಗಾಗಿ ಈ ಹಿಂದಿ ಭಾಷೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ‘ಹಿಂದಿ ದಿವಸ್’ ಅನ್ನು ಆಚರಿಸಲಾಗುತ್ತದೆ.

Hindi Diwas 2024 : ಹಿಂದಿ ಆಯ್ಕೆಯಾಗಿರಲಿ, ಆದರೆ ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಇರಲಿ
ಸಾಂದರ್ಭಿಕ ಚಿತ್ರ
Follow us on

ಭಾರತದಾದಂತ್ಯ ಹಿಂದಿ ಭಾಷೆ ಮಾತನಾಡುವ ಸಾಕಷ್ಟು ಜನರಿದ್ದಾರೆ. ಅದರಲ್ಲಿ ಉತ್ತರ ಭಾರತದ ಬಹುತೇಕ ಭಾಗಗಳಾದ ಬಿಹಾರ, ಛತ್ತೀಸ್‌ಗಢ, ದೆಹಲಿ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಇನ್ನಿತ್ತರ ರಾಜ್ಯಗಳಲ್ಲಿ ಸರಿಸುಮಾರು 366 ಮಿಲಿಯನ್ ಜನ ಹಿಂದಿ ಮಾತನಾಡುವವರಿದ್ದಾರೆ. ಈ ಹಿಂದಿ ಭಾಷೆಯ ಮಹತ್ವವನ್ನು ಎಲ್ಲರಿಗೂ ತಿಳಿಸುವ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ‘ಹಿಂದಿ ದಿವಸ್’ ಅನ್ನು ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಹಿಂದಿ ದಿನದ ಇತಿಹಾಸ

1918 ರಲ್ಲಿ, ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಪ್ರಚಾರ ಮಾಡಲು ಹಿಂದಿ ವಿದ್ವಾಂಸರು ಮತ್ತು ಕಾರ್ಯಕರ್ತರಿಂದ ಹಿಂದಿ ಸಾಹಿತ್ಯ ಸಮ್ಮೇಳನವನ್ನು ರಚಿಸಲಾಯಿತು. 1947 ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆದ ಬಳಿಕ ಹಿಂದಿಯನ್ನು ದೇಶದ ಏಕೈಕ ಅಧಿಕೃತ ಭಾಷೆಯನ್ನಾಗಿ ಮಾಡಲು ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಾಲೇಲ್ಕರ್, ಮೈಥಿಲಿ ಶರಣ್ ಗುಪ್ತ್ ಮತ್ತು ಸೇಠ್ ಗೋವಿಂದ್ ದಾಸ್ ಅವರೊಂದಿಗೆ ರಾಜೇಂದ್ರ ಸಿಂಹ ಪ್ರಮುಖ ವ್ಯಕ್ತಿಗಳು ಒಟ್ಟುಗೂಡಿದರು. ಹೀಗಾಗಿ ಸೆಪ್ಟೆಂಬರ್ 14, 1949 ರಂದು, ದೇವನಾಗರಿ ಲಿಪಿಯಲ್ಲಿ ಬರೆದ ಹಿಂದಿಯನ್ನು ಭಾರತದ ಸಂವಿಧಾನ ಸಭೆಯು ದೇಶದ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಅಂಗೀಕರಿಸಿತು. ಅಂದಿನಿಂದ ಪ್ರತಿ ವರ್ಷ ರಾಷ್ಟ್ರೀಯ ಹಿಂದಿ ದಿವಸನ್ನು ಆಚರಿಸುತ್ತ ಬರಲಾಗುತ್ತಿದೆ.

ರಾಷ್ಟ್ರೀಯ ಹಿಂದಿ ದಿನದ ಮಹತ್ವ ಹಾಗೂ ಆಚರಣೆ:

ಭಾರತದಲ್ಲಿ ವ್ಯಾಪಕವಾಗಿ ಮಾತನಾಡುವ ಹಿಂದಿ ಭಾಷೆಯ ಇತಿಹಾಸವನ್ನು ಉತ್ತೇಜಿಸುವುದು ಹಾಗೂ ಹಿಂದಿಯ ಶ್ರೀಮಂತ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಸ್ತಾರದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳು ಸೇರಿದಂತೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ವರ್ಷವೂ ಕೇಂದ್ರ ಸರ್ಕಾರದ ಇಲಾಖೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಒಳಗೊಂಡಂತೆ ಸಾಧನೆ ಮಾಡಿದ ಇಬ್ಬರೂ ವ್ಯಕ್ತಿಗಳಿಗೆ ‘ರಾಜಭಾಷಾ ಕೀರ್ತಿ ಪುರಸ್ಕಾರ’ ಮತ್ತು ರಾಜಭಾಷಾ ಗೌರವ್ ಪುರಸ್ಕಾರ ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಇದನ್ನೂ ಓದಿ: ಯಾವ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಅಗತ್ಯವಿರುತ್ತದೆ? ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡುವುದು ಹೇಗೆ?

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ

ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತೀಯರು ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ್ದರು. ಈ ಮೂಲಕ ಸರ್ಕಾರ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕನ್ನಡದ ಬದಲಿಗೆ ಹೆಚ್ಚಾಗಿ ಹಿಂದಿಯನ್ನು ಬಳಸುತ್ತಿರುವುದೇ ಈ ವಿರೋಧಕ್ಕೆ ಕಾರಣವಾಗಿತ್ತು. ಆದರೆ ಕನ್ನಡ ಭಾಷೆಯು ಕನ್ನಡಗರಿಗೆ ಮೊದಲ ಆದ್ಯತೆ ಆಗಬೇಕೇ ಹೊರತೂ ಆಯ್ಕೆಯಾಗಿರಬಾರದು. ಸಂದರ್ಭಕ್ಕೆ ತಕ್ಕಂತೆ ಅವಶ್ಯಕತೆಯಿದ್ದರೆ ಕನ್ನಡದೊಂದಿಗೆ ಬೇರೆ ಭಾಷೆಯನ್ನು ಬಳಕೆ ಮಾಡಲಿ. ಬಹುತೇಕ ಸಂದರ್ಭದಲ್ಲಿ ಕನ್ನಡವನ್ನೇ ಬಳಸುವ ಮೂಲಕ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ