ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕಾವು ಜಪಾನ್ ನ ಹಿರೋಶಿಮಾ ಹಾಗೂ ನಾಗಸಾಕಿ ಮೇಲೆ ನಡೆಸಿದ ಪರಮಾಣು ಸ್ಪೋಟವು ಮರೆಯಲಾಗದ ಕಹಿ ಘಟನೆಗಳಲ್ಲಿ ಒಂದಾಗಿದೆ. ಹೌದು, ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕದವರು ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ದಾಳಿ ಮಾಡಿ ವರ್ಷಗಳು ಉರುಳಿದರೂ ಕೂಡ, ಅದರ ಪರಿಣಾಮವನ್ನು ಅಲ್ಲಿನ ಜನರು ಇಂದಿಗೂ ಅನುಭವಿಸುತ್ತಿದ್ದಾರೆ. ಈ ಹಿರೋಶಿಮಾದಲ್ಲಿ ಜನಿಸುವ ಮಕ್ಕಳು ಅಂಗ ಊನತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ.
1945 ಆಗಸ್ಟ್ 6 ರ ಬೆಳಿಗ್ಗೆ ಸರಿಸುಮಾರು 8.15 ಗಂಟೆಯ ಸಮಯ. ಅಮೆರಿಕವು ʼಲಿಟಲ್ ಬಾಯ್ʼ ಹೆಸರಿನ ಪರಮಾಣು ಅಸ್ತ್ರವನ್ನು ಜಪಾನ್‌ನ ಹಿರೋಶಿಮಾ ನಗರದ ಮೇಲೆ ಪ್ರಯೋಗಿಸಲಾಗಿತ್ತು. ಆದಾದ ಮೂರು ದಿನ ಗಳ ಬಳಿಕ ಆಗಸ್ಟ್ 9ರಂದು ನಾಗಸಾಕಿಯ ಮೇಲು ಅಣುಬಾಂಬ್ ದಾಳಿಯಾಗಿತ್ತು. ಈ ಅಣುಬಾಂಬ್ ದಾಳಿಯ ಬಳಿಕವೇ ಆಗಸ್ಟ್ 15ರಂದು ಜಪಾನ್ ಅಮೇರಿಕಾಕ್ಕ ಶರಣಾಯಿತು, ಎರಡನೇ ಮಹಾಯುದ್ಧವು ಅಂತ್ಯಗೊಂಡಿತು. ಆದರೆ ಈ ದಾಳಿಯ ಪರಿಣಾಮವಾಗಿ ಹಿರೋಶಿಮಾ ಜನಸಂಖ್ಯೆಯ ಶೇ 40 ರಷ್ಟು ಜನರು ಸಾವನ್ನಪ್ಪಿದರು. ಆದರೆ ಬಾಂಬ್ ಸ್ಫೋಟವಾದ ಅದೆಷ್ಟೋ ವರ್ಷಗಳ ಬಳಿಕ ಎಂದರೆ ಇಂದಿಗೂ ಇಲ್ಲಿನ ಜನರನ್ನು ನೋವನ್ನು ಅನುಭವಿಸುತ್ತಿದ್ದಾರೆ. ಅಂದು ನಡೆದ ಅಣುಬಾಂಬ್ ದಾಳಿಯೂ ನಡೆದ ದಿನವನ್ನು ಆಗಸ್ಟ್ 6 ರಂದು ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಸಂತಾಪವನ್ನು ಸೂಚಿಸಲಾಗುತ್ತದೆ.
ಇದನ್ನೂ ಓದಿ: ಜನಪ್ರಿಯ ಬ್ರ್ಯಾಂಡ್ ಲ್ಯಾಕ್ಮೆ ಹಿಂದೂ ದೇವತೆ ಲಕ್ಷ್ಮಿಯ ಹೆಸರೇ? ಆ ಒಂದು ನಾಟಕವೇ ಈ ಹೆಸರಿಡುವುದಕ್ಕೆ ಕಾರಣವಾಯ್ತಾ?
1945 ಆಗಸ್ಟ್ 6 ರಂದು ಹಿರೋಶಿಮಾದ ಮೇಲೆ ಪರಮಾಣು ಬಾಂಬ್ ನಡೆಯುವ ಆರು ವರ್ಷಗಳ ಹಿಂದೆ, ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಅಮೇರಿಕಾಕ್ಕೆ ಪತ್ರವೊಂದನ್ನು ಬರೆದಿದ್ದರು. 1939ರಲ್ಲಿ ವಿಜ್ಞಾನಿಯೂ ಅಮೆರಿಕದ ಅಧ್ಯಕ್ಷರಾಗಿದ್ದ ಎಫ್. ಡಿ. ರೂಸ್ವೆಲ್ಟರಿಗೆ ಬರೆದ ಪತ್ರದಲ್ಲಿ ಅಮೆರಿಕ ಹಾಗೂ ಫ್ರಾನ್ಸಿನಲ್ಲಿ ಪರಮಾಣುಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳ ಉಲ್ಲೇಖ ಮಾಡಲಾಗಿತ್ತು.
ಈ ಪ್ರಕ್ರಿಯೆಯನ್ನು ಬಳಸಿಕೊಂಡು ಅತ್ಯಂತ ಪ್ರಬಲವಾದ ಹೊಸ ಬಗೆಯ ಬಾಂಬನ್ನು ತಯಾರಿಸುವುದು ಸಾಧ್ಯವಿದೆ. ಈ ಒಂದೇ ಒಂದು ಬಾಂಬು ಇಡೀ ಬಂದರು ಹಾಗೂ ಅಲ್ಲಿನ ಸುತ್ತಮುತ್ತಲಿನ ಕೆಲವು ಪ್ರದೇಶವನ್ನೂ ನಾಶ ಮಾಡುವಷ್ಟು ಶಕ್ತಿಶಾಲಿಯಾಗಿರುತ್ತದೆ’ ಎಂದಿದ್ದರು. ಅದರೊಂದಿಗೆ ಈ ಪ್ರಯತ್ನಕ್ಕೆ ವಿಶ್ವ ದೊಡ್ಡಣ್ಣ ಅಮೇರಿಕಾವು ಧನಸಹಾಯ ಹಾಗೂ ವ್ಯವಸ್ಥೆಯನ್ನು ಮಾಡಿಕೊಳ್ಳದೆ ಹೋದಲ್ಲಿ, ಜರ್ಮನಿಯು ಈ ಕೆಲಸವನ್ನು ಮೊದಲೇ ಮಾಡುತ್ತದೆ ಎಂದು ಪತ್ರದಲ್ಲಿತ್ತು.
ಆದಾದ ಕೆಲವು ವರ್ಷಗಳ ಬಳಿಕ ಹಿರೋಶಿಮಾ ನಗರವು ಜಪಾನ್ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದ್ದ ಕಾರಣ ಅಮೆರಿಕಾವು ಯೋಚನೆ ಮಾಡಿಯೇ ಈ ಹಿರೋಶಿಮಾದ ಮೇಲೆ ಅಣುಬಾಂಬ್ ದಾಳಿಗೆ ಮಾಡಲು ಮುಂದಾಗಿತ್ತು. ಖ್ಯಾತ ವಿಜ್ಞಾನಿ ಪರಿಣಾಮವು ಭೀಕರವಾಗಿರುತ್ತದೆ ಎಂದು ತಿಳಿಸಿದ್ದಂತೆ ಅಣು ಬಾಂಬ್‌ನ ಪರಿಣಾಮವು ಹೇಗಿರುತ್ತದೆ ಎಂದು ನೋಡುವ ಉದ್ದೇಶದೊಂದಿಗೆ ಜಪಾನ್ ಮೇಲೆ ಪೂರ್ಣಪ್ರಮಾಣದಲ್ಲಿ ಮಿಲಿಟರಿ ಆಕ್ರಮಣ ಮಾಡುವುದನ್ನು ತಡೆಯುವುದಾಗಿತ್ತು.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ