ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದು ಸಾಧ್ಯವಿಲ್ಲ. ತಂದೆ ತಾಯಿಯಷ್ಟೇ ಹೆಣ್ಣಿಗೆ ಪ್ರೀತಿ ಕಾಳಜಿಯನ್ನು ತೋರುವವನೇ ಈ ಸಹೋದರ. ಹೀಗಾಗಿ ಪ್ರತಿಯೊಬ್ಬ ಹೆಣ್ಣು ಅಣ್ಣ ಅಥವಾ ತಮ್ಮನು ತನ್ನ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾನೆ ತನಗೆ ಧೈರ್ಯವಾಗಿ ಇರುತ್ತಾನೆ ಎಂದು ಬಯಸುತ್ತಾಳೆ. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬ ಆಶಯದೊಂದಿಗೆ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ ರಕ್ಷಾ ಬಂಧನಕ್ಕೆ ವಿಶೇಷವಾಗಿ ಆಚರಿಬೇಕೆಂದುಕೊಂಡಿದ್ದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ.
* ಮುಂಜಾನೆ ಕೇಕ್ ಸರ್ಪ್ರೈಸ್ ಇರಲಿ : ರಾಖಿ ಹಬ್ಬವೆಂದರೆ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ವಿಶೇಷವಾದ ದಿನವಾಗಿರುತ್ತದೆ. ಈ ದಿನದಂದು ನೀವು ನಿಮ್ಮ ಒಡಹುಟ್ಟಿದವರಿಗೆ ರಕ್ಷಾ ಬಂಧನದ ವಿಶೇಷ ಥೀಮ್ ನಲ್ಲಿ ಕೇಕನ್ನು ಸರ್ಪ್ರೈಸ್ ಆಗಿ ನೀಡಬಹುದು. ನೀವು ಹಿಂದಿನ ದಿನ ಕೇಕ್ ಬುಕ್ ಮಾಡಿದರೆ ಬೆಳಗ್ಗೆ ನಿಮ್ಮ ಮನೆ ಬಾಗಿಲಿಗೆ ಕೇಕ್ ಡೆಲಿವರಿ ಆಗುತ್ತದೆ. ಇಲ್ಲವಾದರೆ ಹಿಂದಿನ ದಿನವೇ ತಂಗಿ ಅಥವಾ ಗೊತ್ತಿಲ್ಲದಂತೆಯೇ, ಕೇಕ್ ತಂದಿಟ್ಟುಕೊಳ್ಳಿ. ಬೆಳಗ್ಗೆ ನಿಮ್ಮ ಸಹೋದರಿಯೂ ರಾಖಿ ಕಟ್ಟಿದ ತಕ್ಷಣ, ಇಬ್ಬರೂ ಜೊತೆಯಾಗಿ ಕೇಕ್ ಕಟ್ ಮಾಡಿ ತಿನ್ನಿಸಿದರೆ ಆ ಘಳಿಗೆ ಸಂತಸಕರವಾಗಿರುತ್ತದೆ.
* ರಾಖಿ ಕಟ್ಟುವ ವೇಳೆ ಹಾಡನ್ನು ಪ್ಲೇ ಮಾಡಿ : ಒಡಹುಟ್ಟಿದವರಿಗೆ ರಾಖಿ ಕಟ್ಟುವಾಗ ಬ್ಯಾಕ್ ಗ್ರೌಂಡ್ ನಲ್ಲಿ ಸಂದರ್ಭಕ್ಕೆ ಹೊಂದುವಂತಹ ಹಾಡನ್ನು ಹಾಕಿದರೆ ಆ ಘಳಿಗೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತದೆ. ಈ ರಕ್ಷಾ ಬಂಧನವು ಎಲ್ಲರ ಮನಸ್ಸಿನಲ್ಲಿ ತುಂಬಾ ಸಮಯದವರೆಗೆ ನೆನಪಿನಲ್ಲಿರಲು ಸಾಧ್ಯ. ಅಣ್ಣ ತಂಗಿ ಬಾಂಧವ್ಯ ಸಾರುವ ಹಲವಾರು ಹಿಂದಿ ಹಾಗೂ ಕನ್ನಡ ಸಿನಿಮಾ ಹಾಡುಗಳಿದ್ದು, ಸುಮಧುರ ಗೀತೆಯನ್ನು ಪ್ಲೇ ಮಾಡಿದರೆ ಖುಷಿಯ ವಾತಾವರಣವು ಸೃಷ್ಟಿಯಾಗುತ್ತದೆ.
* ಕುಟುಂಬದೊಂದಿಗೆ ಲಂಚ್ ಪಾರ್ಟಿ ಆಯೋಜಿಸಿ : ಕುಟುಂಬದೊಂದಿಗೆ ಮನೆಯಲ್ಲಿ ವಿಶೇಷ ಅಡುಗೆ ತಯಾರಿಸಿ ಸವಿಯುವುದು ಮಾಮೂಲಿ. ಹೀಗಾಗಿ ನಿಮ್ಮ ಒಡಹುಟ್ಟಿದವರಿಗೆ ಇಷ್ಟವಾಗುವ ರೆಸ್ಟೋರೆಂಟ್ ನಲ್ಲಿ ಲಂಚ್ ಆಯೋಜಿಸಿ. ರೆಸ್ಟೋರೆಂಟ್‌ನಲ್ಲಿ ಟೇಬಲನ್ನು ಮೊದಲೇ ಬುಕ್ ಮಾಡಿ ಇಡುವ ಅವಕಾಶವು ಇದೆ. ಈ ಸರ್ಪ್ರೈಸ್ ಬಗ್ಗೆ ತಂದೆ ತಾಯಿಗೂ ಹೇಳದೇ ಇರುವುದು ಉತ್ತಮ. ಕುಟುಂಬದವರೊಂದಿಗೆ ರೆಸ್ಟೋರೆಂಟ್ ತಲುಪವರೆಗೂ ಈ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟು ಕೊಡಬೇಡಿ. ಈ ಸರ್ಪ್ರೈಸ್ ನಿಂದ ನಿಮ್ಮ ಅಕ್ಕ ಅಥವಾ ತಂಗಿಗೆ ಖುಷಿಯಾಗುತ್ತದೆ.
ಇದನ್ನೂ ಓದಿ: ಜನಪ್ರಿಯ ಬ್ರ್ಯಾಂಡ್ ಲ್ಯಾಕ್ಮೆ ಹಿಂದೂ ದೇವತೆ ಲಕ್ಷ್ಮಿಯ ಹೆಸರೇ? ಆ ಒಂದು ನಾಟಕವೇ ಈ ಹೆಸರಿಡುವುದಕ್ಕೆ ಕಾರಣವಾಯ್ತಾ?
* ವಿಶೇಷವಾದ ಉಡುಗೊರೆಗಳನ್ನು ನೀಡಿ : ರಾಖಿ ಕಟ್ಟಿದ ಬಳಿಕ ಸಹೋದರಿಯೂ ಒಡ ಹುಟ್ಟಿದ ಅಣ್ಣ ಅಥವಾ ತಮ್ಮನಿಂದ ಉಡುಗೊರೆಯನ್ನು ಬಯಸುತ್ತಾರೆ. ಹೀಗಾಗಿ ಅಕ್ಕ ಅಥವಾ ತಂಗಿಯರಿಗೆ ಇಷ್ಟವಾಗುವಂತಹ ಮಗ್‌ಗಳು, ಕುಶನ್‌ಗಳು, ಒಳಾಂಗಣ ಸಸ್ಯಗಳು ಮತ್ತು ಚಮತ್ಕಾರಿ ಫೇಸ್ ಮಾಸ್ಕ್‌ಗಳಂತಹ ಉಡುಗೊರೆಗಳನ್ನು ಆರಿಸಿಕೊಳ್ಳಿ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ