ವಸಂತಕಾಲ ಬಂದೇ ಬಿಟ್ಟಿದೆ. ನಿಮ್ಮ ಮನೆಯ ಪೈಂಟಿಂಗ್‌ನಿಂದ ಹಿಡಿದು ಎಲ್ಲಾ ರೀತಿಯ ಮೇಕ್‌ಓವರ್ ಮಾಡಲು ಇದು ಸೂಕ್ತ ಸಮಯವಾಗಿದೆ. ಮನೆಯ ಒಳಾಂಗಣ ವಿನ್ಯಾಸವನ್ನು ಬದಲಿಸಿ ಮನೆಗೆ ಹೊಸ ನೋಟವನ್ನು ನೀಡಬೇಕೆಂದು ಎಲ್ಲರ ಕನಸು. ಅಂದ ಚಂದದ ಡೆಕೋರ್ ಪೀಸ್‌ಗಳನ್ನು ಮನೆಯ ಒಳಾಂಗಿನ ಅಲಂಕಾರಿಕ ವಸ್ತುಗಳನ್ನಾಗಿ ಇಡುವ ಮೂಲಕ ಮನೆಯ ಆಂತರಿಕ ನೋಟವನ್ನು ಇನ್ನಷ್ಟು ಶ್ರೀಮಂತಗೊಳಿಸಬಹುದು. ಡಿಸೈನ್‌ಕೆಫೆ ಮತ್ತು ಕ್ರ‍್ಪೆಂಟ್ರಿಯ ಸಹಸಂಸ್ಥಾಪಕಿ ಗೀತಾ ರಮಣನ್ ಅವರು ಮನೆಯ ಒಳಾಂಗಣ ವಿನ್ಯಾಸ ಪ್ರವೃತ್ತಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ನಮ್ಮ ವಾಸಸ್ಥಳವನ್ನು ಸೊಬಗು ಮತ್ತು ಕೌಶಲ್ಯದಿಂದ ತುಂಬಿರುವಂತೆ ಮಾಡುತ್ತದೆ.
ಮನೆಯ ಒಳಾಂಗಣಗಳು ರೋಮಾಂಚಕ ಬಣ್ಣಗಳಿಂದ ತುಂಬಿರಲಿ: ರೋಮಾಂಚಕ ಗುಲಾಬಿ, ಹಸಿರು ಮತ್ತು ನೀಲಿ ಬಣ್ಣಗಳಂತಹ ಗಾಢ ಬಣ್ಣಗಳು ಮನೆಯ ಒಳಾಂಗಣ ನೋಟದ ಸೌಂದರ್ಯವನ್ನು ಹೆಚ್ಚಿಸುತ್ತದೆ.
ನಿಮ್ಮ ಅಡುಗೆ ಸಲಕರಣೆಗಳು, ಟೈಲ್ ಬ್ಯಾಕ್ ಸ್ಟ್ಯಾಲಶ್‌ಗಳು ಮತ್ತು ಕಿಚನ್ ಕ್ಯಾಬಿನೆಟ್‌ಗಳಿಗೆ ಗಾಢ ಬಣ್ಣದ ಪೈಂಟ್ ಬಳಿಯಿರಿ.
ಟಿವಿ ಘಟಕದ ಗೋಡೆಯನ್ನು ಹೈಲೈಟ್ ಮಾಡಲು ಗಾಢ ರೋಮಾಂಚಕ ಬಣ್ಣವನ್ನು ಬಳಸಿ.
ಬೆಡ್‌ಸ್ಪೆಡ್‌ಗಳು ಮತ್ತು ಕಲಾಕೃತಿಗಳೊಂದಿಗೆ ನಿಮ್ಮ ಆಯ್ಕೆಯ ರೋಮಾಂಚಕ ಬಣ್ಣದ ಸ್ಪರ್ಶವನ್ನು ಸೇರಿಸುವ ಮೂಲಕ ನಿಮ್ಮ ಮಲಗುವ ಕೋಣೆಯನ್ನು ಇನ್ನಷ್ಟು ಸುಂದರಗೊಳಿಸಿ.
ಇದನ್ನೂ ಓದಿ: Home Decor Tips: ಮನೆಯ ಅಂದವನ್ನು ಹೆಚ್ಚಿಸಬೇಕೆ? ಈ ಟಿಪ್ಸ್ ಟ್ರೈ ಮಾಡಿ
ಆರ್ಟ್ ಡೆಕೋರ್ ಮತ್ತು ವಿಂಟೇಜ್ ವಿನ್ಯಾಸಗಳನ್ನು ಇರಿಸಿ: ವಿಂಟೇಜ್ ಶೈಲಿಯ ಹಳೆಯ ಡೆಕೋರ್ ಪೀಸ್‌ಗಳು ಮನೆಗೆ ಹೊಸ ಲುಕ್ ನೀಡುತ್ತದೆ. ಮನೆಯ ಗಾಢ ಬಣ್ಣದ ಪೈಂಟ್ ಹಾಗೂ ಈ ವಿಂಟೆಜ್ ಆರ್ಟ್ ಡೆಕೋರ್‌ಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ.
ನಿಮ್ಮ ಡೈನಿಂಗ್ ಟೇಬಲ್‌ನ ಕುರ್ಚಿ ಸೋಫಾಗಳಲ್ಲಿ ಉಕ್ಕು, ತಾಮ್ರ ಮತ್ತು ಪಾಲಿಶ್ ಮಾಡಿದ ಕಂಚಿನಂತಹ ವಿವಿಧ ಲೋಹಿಯ ನೋಟವನ್ನು ನೀಡಿ. ಇದು ಮನೆಗೆ ವಿಂಟೇಜ್ ಲುಕ್ ಕೊಡುತ್ತದೆ.
ಚಿನ್ನದ ಬಣ್ಣದ ಟೇಬಲ್‌ಗಳು ಅಥವಾ ಮನೆಯ ಐಷಾರಾಮಿ ನೋಟಕ್ಕಾಗಿ ಚಿನ್ನದ ಬಣ್ಣದ ಹಿಡಿಕೆಯನ್ನು ಹೊಂದಿರುವ ಕ್ಯಾಬಿನೆಟ್‌ಗಳನ್ನು ರಚಿಸಿ.
ಮನೆಯ ಒಳಗೆ ಸೂಕ್ಷ್ಮವಾದ ಹಾಗೂ ಶ್ರೀಮಂತ ವಾತಾವರಣವನ್ನು ಸಾಧಿಸಲು ಸ್ಕಲ್ಲೋಪ್ಡ್ ಅಂಚುಗಳು, ಅಮೃತಶಿಲೆ ಮತ್ತು ಕಂಚಿನ ಸ್ಪರ್ಶಗಳೊಂದಿಗೆ ಆರ್ಟ್ ಡೆಕೋರ್‌ಗಳನ್ನು ಇರಿಸಿ.
ಮ್ಯಾಕ್ಸಿಮಲಿಸಂನನ್ನು ಮನೇಯ ಆಂತರಿಕ ಪೃವೃತ್ತಿಗಳಲ್ಲಿ ಬಳಸಿ: ಮ್ಯಾಕ್ಸಿಮಲಿಸಂ ಒಂದು ಜನಪ್ರಿಯ ಮನೆಯ ವಿನ್ಯಾಸದ ಪ್ರವೃತ್ತಿಯಾಗಿದೆ. ಇದು ಮನೆಗೆ ಸುಂದರವಾದ ನೋಟವನ್ನು ಒದಗಿಸುತ್ತದೆ.
ಇದನ್ನೂ ಓದಿ;
ಗಾಜು, ಮರದ ಕ್ಯಾಬಿನೆಟ್ರಿ, ವರ್ಣರಂಜಿತ ಡೆಕೋಟೈಲ್ಸ್, ಟಾಸ್ಕ್ ಲೈಟಿಂಗ್ಸ್ನಂತಹ ವಿನ್ಯಾಸಗಳು ಮತ್ತು ಡೆಕೋರ್ ಪೀಸ್‌ಗಳನ್ನು ಮನೆಯಲ್ಲಿಡಿ. ಇದು ಮಾತ್ರವಲ್ಲದೆ ಮನೆಯ ಒಳಗೆ ಅಲ್ಲಲ್ಲಿ ಒಳಾಂಗಿನ ಗಿಡಗಗಳನ್ನು ಇಡುವ ಮೂಲಕ ಮನೆಗೆ ಹೊಸ ಲುಕ್ ಕೊಡಬಹುದು. ಮತ್ತು ಗೋಡೆಯ ಬಣ್ಣಕ್ಕೆ ಅನುಗುಣವಾಗಿ ಮ್ಯಾಚ್ ಆಗುವ ಕರ್ಟನ್ಸ್ಗಳನ್ನು, ಸೋಫಾಸೆಟ್‌ಗಳನ್ನು ಅಳವಡಿಸಿ. ಅಲ್ಲಲ್ಲಿ ಡೆಕೋರ್ ಪೀಸ್‌ಗಳನ್ನು ಇರಿಸಿ. ಇದು ನಿಮ್ಮ ಮನೆಯ ನೋಟವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತದೆ.