ಮಾವಿನ ಹಣ್ಣಿನ ಓಟ್ಸ್ ಲಡ್ಡು; ಸರಳ ವಿಧಾನದೊಂದಿಗೆ ಮಾಡಿ ಸವಿಯಿರಿ
ನಾಲ್ಕೈದು ಪದಾರ್ಥಗಳನ್ನು ಇಟ್ಟುಕೊಂಡು ರುಚಿಕರವಾದ ಹೊಸ ರೆಸಿಪಿಯನ್ನು ಕಲಿಯುವುದಕ್ಕೆ ಅನೇಕರು ಆಸಕ್ತಿ ತೋರುತ್ತಾರೆ. ಅಂತಹದ್ದೇ ಸರಳ ವಿಧಾನವನ್ನು ಇಂದು ನಾವು ತೋರಿಸಿಕೊಡುತ್ತಿದ್ದೇವೆ. ಅದುವೇ ಮಾವಿನ ಹಣ್ಣಿನ ಓಟ್ಸ್ ಲಡ್ಡು.
ಓಲೆಯೇ ಹಚ್ಚದೆ ಮಾಡುವ ಅಡುಗೆಗಳು ಎಷ್ಟೋ ಇದೆ. ಈ ರೀತಿಯ ಅಡುಗೆ ಹೆಚ್ಚು ಆರೋಗ್ಯಯುತವಾಗಿಯೂ ಇರುತ್ತದೆ. ನಾಲ್ಕೈದು ಪದಾರ್ಥಗಳನ್ನು ಇಟ್ಟುಕೊಂಡು ರುಚಿಕರವಾದ ಹೊಸ ರೆಸಿಪಿಯನ್ನು ಕಲಿಯುವುದಕ್ಕೆ ಅನೇಕರು ಆಸಕ್ತಿ ತೋರುತ್ತಾರೆ. ಅಂತಹದ್ದೇ ಸರಳ ವಿಧಾನವನ್ನು ಇಂದು ನಾವು ತೋರಿಸಿಕೊಡುತ್ತಿದ್ದೇವೆ. ಅದುವೇ ಮಾವಿನ ಹಣ್ಣಿನ ಓಟ್ಸ್ ಲಡ್ಡು. ಈಗ ಮಾವಿನ ಹಣ್ಣು ಹೇರಳವಾಗಿ ಸಿಗುವ ಕಾಲ. ಹೀಗಾಗಿ ಸಿಕ್ಕ ಮಾವನ್ನು ಬೇರೆ ಬೇರೆ ರೀತಿಯಾಗಿ ಅಡುಗೆ ಮಾಡಿ ರುಚಿ ನೋಡಲು ಮಾವಿನ ಹಣ್ಣಿನ ಓಟ್ಸ್ ಲಡ್ಡು ಮಾಡಿ.
ಮಾವಿನ ಹಣ್ಣಿನ ಓಟ್ಸ್ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು ಮಾವಿನ ಹಣ್ಣು, ಏಲಕ್ಕಿ, ತುಪ್ಪ, ಜೇನು ತುಪ್ಪ, ಓಟ್ಸ್, ರಾಗಿ, ಡ್ರೈ ಫ್ರೂಟ್ಸ್, ಸೇಬು ಎಲ್ಲವನ್ನು ಸೇರಿಸಿ ಮಾಡಿದ ಪೌಡರ್.
ಒಂದು ಪಾತ್ರೆಯಲ್ಲಿ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಪೇಸ್ಟ್ ರೀತಿಯಾಗಿ ಮಾಡಿಕೊಳ್ಳಬೇಕು, ಬಳಿಕ ಅದಕ್ಕೆ ತಯಾರಿಸಿಕೊಂಡ ಓಟ್ಸ್ ಪೌಡರ್ ಹಾಕಿ ಚೆನ್ನಾಗಿ ಕಲಸಬೇಕು. ನಂತರ ಏಲಕ್ಕಿ ಪುಡಿ, ಜೇನು ತುಪ್ಪ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಬಳಿಕ ಕೈಗೆ ತುಪ್ಪ ಸವರಿಕೊಂಡು ಕಲಸಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಆಗ ಮಾವಿನ ಹಣ್ಣಿನ ಓಟ್ಸ್ ಲಡ್ಡು ಸವಿಯಲು ಸಿದ್ಧ.
ಇದನ್ನೂ ಓದಿ:
ದಾವಣಗೆರೆ ಸ್ಪೆಷಲ್ ನರ್ಗಿಸ್ ಮಂಡಕ್ಕಿ; ಬಿಸಿ ಬಿಸಿ ಟೀ ಜೊತೆಗೆ ಮಾಡಿ ಸವಿಯಿರಿ
ಉತ್ತರ ಕರ್ನಾಟಕ ಸ್ಪೆಷಲ್ ಝುನಕದ ವಡೆ; ಸರಳವಾದ ವಿಧಾನದ ಜೊತೆಗೆ ಮಾಡಿ ಸವಿಯಿರಿ