ದಾವಣಗೆರೆ ಸ್ಪೆಷಲ್ ನರ್ಗಿಸ್ ಮಂಡಕ್ಕಿ; ಬಿಸಿ ಬಿಸಿ ಟೀ ಜೊತೆಗೆ ಮಾಡಿ ಸವಿಯಿರಿ
ಅಡುಗೆಗೆಂದೆ ಸ್ವಲ್ಪ ಸಮಯ ಮೀಸಲಿಡಿ ಮತ್ತು ಕೆಲವೇ ಕೆಲವು ಪದಾರ್ಥಗಳನ್ನು ಹಾಕಿ ರುಚಿಕರವಾದ ಅಡುಗೆಯನ್ನು ತಯಾರಿಸಿ. ಇಂತಹದ್ದೇ ಸರಳ ವಿಧಾನದ ಜೊತೆಗೆ ಮಾಡುವ ಅಡುಗೆ ದಾವಣಗೆರೆಯ ಸ್ಪೆಷಲ್ ನರ್ಗಿಸ್ ಮಂಡಕ್ಕಿ.
ಸರಳವಾದ ವಿಧಾನದ ಜೊತೆಗೆ ಅಡುಗೆ ಮಾಡುವುದು ಒಂದು ಕಲೆ. ಈಗೆಲ್ಲ ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಹೆಚ್ಚು ಸಮಯವಿಲ್ಲ. ಕಾರಣ ಮನೆ ಮಂದಿ ಎಲ್ಲರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಹಾಗಂತ ಅಡುಗೆ ಮಾಡದೆ ದಿನನಿತ್ಯ ಹೊರಗಿನಿಂದ ಊಟ ತಂದು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ, ಅಡುಗೆಗೆಂದೆ ಸ್ವಲ್ಪ ಸಮಯ ಮೀಸಲಿಡಿ ಮತ್ತು ಕೆಲವೇ ಕೆಲವು ಪದಾರ್ಥಗಳನ್ನು ಹಾಕಿ ರುಚಿಕರವಾದ ಅಡುಗೆಯನ್ನು ತಯಾರಿಸಿ. ಇಂತಹದ್ದೇ ಸರಳ ವಿಧಾನದ ಜೊತೆಗೆ ಮಾಡುವ ಅಡುಗೆ ದಾವಣಗೆರೆಯ ಸ್ಪೆಷಲ್ ನರ್ಗಿಸ್ ಮಂಡಕ್ಕಿ.
ನರ್ಗಿಸ್ ಮಂಡಕ್ಕಿ ಮಾಡಲು ಬೇಕಾದ ಸಾಮಾಗ್ರಿಗಳು ಮಂಡಕ್ಕಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿ ಬೇವು, ಈರುಳ್ಳಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಹುರಿಗಡಲೆ. ಅರಿಶಿಣ ಪುಡಿ, ಉಪ್ಪು.
ನರ್ಗಿಸ್ ಮಂಡಕ್ಕಿ ಮಾಡುವ ವಿಧಾನ ಮೊದಲು ಓಲೆ ಹಚ್ಚಿ ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸ್ವಲ್ಪ ಜೀರಿಗೆ ಹಾಕಿಕೊಳ್ಳಬೇಕು, ಬಳಿಕ ಸಾಸಿವೆ, ಕರಿ ಬೇವು, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ಬಳಿಕ ಅದಕ್ಕೆ ಉದ್ದಿನ ಬೇಳೆ ಮತ್ತು ಅರಿಶಿಣ ಪುಡಿ ಹಾಕಿ ಕಲಸಿಕೊಳ್ಳಬೇಕು. ನಂತರ ಉಪ್ಪು ಹಾಕಿ ಕಡಲೆ ಪುಡಿ ಹಾಕಬೇಕು, ಬಳಿಕ ಸಕ್ಕರೆ ಪುಡಿ ಹಾಕಿ ಕಲಸಿ, ಮಂಡಕ್ಕಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ಬಳಿಕ ಕಡಲೆ ಹಿಟ್ಟು ಹಾಕಬೇಕು. ನಂತರ ಅದನ್ನು ಒಂದು ತಟ್ಟೆಗೆ ಹಾಕಿ ಅದರ ಮೇಲೆ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿದರೆ ನರ್ಗಿಸ್ ಮಂಡಕ್ಕಿ ಸವಿಯಲು ಸಿದ್ಧ.
ಇದನ್ನೂ ಓದಿ:
ಉತ್ತರ ಕರ್ನಾಟಕ ಸ್ಪೆಷಲ್ ಝುನಕದ ವಡೆ; ಸರಳವಾದ ವಿಧಾನದ ಜೊತೆಗೆ ಮಾಡಿ ಸವಿಯಿರಿ
ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ