AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hunza Community: ಪಾಕಿಸ್ತಾನದ ಈ ಸಮುದಾಯದ ಜನರ ಆಯಸ್ಸು 150 ವರ್ಷ; ಮೂರು ತಿಂಗಳು ಹಸಿದಿರುತ್ತಾರೆ! ಏನಿದರ ರಹಸ್ಯ?

150 ವರ್ಷಗಳ ಕಾಲ ಬದುಕುವ ಹುಂಜಾ ಸಮುದಾಯದ ಜನರ ದೊಡ್ಡ ರಹಸ್ಯವೆಂದರೆ, ಈ ಜನರು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿಲ್ಲ ಮತ್ತು ವೃದ್ಧಾಪ್ಯವು ಅವರನ್ನೂ ಕಾಡುವುದಿಲ್ಲ. ಇದಲ್ಲದೆ, ಈ ಸಮುದಾಯದ ಮಹಿಳೆಯರು ತುಂಬಾ ಸುಂದರವಾಗಿರುತ್ತಾರೆ.

Hunza Community: ಪಾಕಿಸ್ತಾನದ ಈ ಸಮುದಾಯದ ಜನರ ಆಯಸ್ಸು 150 ವರ್ಷ; ಮೂರು ತಿಂಗಳು ಹಸಿದಿರುತ್ತಾರೆ! ಏನಿದರ ರಹಸ್ಯ?
ಪಾಕಿಸ್ತಾನದ ಹುಂಜಾ ಸಮುದಾಯದ ರಹಸ್ಯ
TV9 Web
| Edited By: Rakesh Nayak Manchi|

Updated on: May 13, 2023 | 7:30 AM

Share

ಇಂದಿನ ಕಾಲದಲ್ಲಿ ವ್ಯಕ್ತಿಯ ಜೀವಿತಾವಧಿ 70 ವರ್ಷಗಳು. ಆದರೆ ಪಾಕಿಸ್ತಾನದಲ್ಲಿರುವ ಹುಂಜಾ (Hunza Community) ಎಂಬ ಸಮುದಾಯದ ಜನರು 120 ರಿಂದ 150 ವರ್ಷಗಳ ಕಾಲ ಬದುಕುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಈ ಸಮಯದಾಯದ ಜನರು 70 ವರ್ಷಗಳವರೆಗೆ ಯವ್ವನರಂತೆ ಕಾಣುತ್ತಾರೆ, ಅಷ್ಟೇ ಅಲ್ಲದೆ, ಮಹಿಳೆಯರು 65 ವರ್ಷ ವಯಸ್ಸಿನಲ್ಲೂ ಮಕ್ಕಳಿಗೆ ಜನ್ಮ ನೀಡುತ್ತಾರೆ. ಅರೆ, ಈ ಸಮುದಾಯದ ರಹಸ್ಯವಾದರೂ ಏನು ಅಂತಿರಾ? ಇಲ್ಲಿದೆ ನೋಡಿ ಮಾಹಿತಿ.

150 ವರ್ಷಗಳ ಕಾಲ ಬದುಕುವ ಹುಂಜಾ ಸಮುದಾಯದ ಜನರ ದೊಡ್ಡ ರಹಸ್ಯವೆಂದರೆ, ಈ ಜನರು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿಲ್ಲ ಮತ್ತು ವೃದ್ಧಾಪ್ಯವು ಅವರನ್ನೂ ಕಾಡುವುದಿಲ್ಲ. ಇದಲ್ಲದೆ, ಈ ಸಮುದಾಯದ ಮಹಿಳೆಯರು ತುಂಬಾ ಸುಂದರವಾಗಿರುತ್ತಾರೆ. ಅವರು ಸಾಮಾನ್ಯ ಮನುಷ್ಯರಿಗೆ ಹೋಲಿಸಿದರೆ ದೀರ್ಘಕಾಲದ ವರೆಗೆ ಯವ್ವನರಾಗಿರುತ್ತಾರೆ. ಇದಕ್ಕೆಲ್ಲ ಕಾರಣ ಅವರ ಜೀವನ ಪದ್ಧತಿ.

ವಾಸ್ತವವಾಗಿ, 1984 ರಲ್ಲಿ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅಧಿಕಾರಿಗಳು ಅಬ್ದುಲ್ ಮೊಬಾಟ್ ಎಂಬ ಪ್ರಯಾಣಿಕ 1832 ರಲ್ಲಿ ಜನಿಸಿರುವುದನ್ನು ಕಂಡುಕೊಂಡರು. ಮೊದಲಿಗೆ ಇದು ತಾಂತ್ರಿಕ ದೋಷ ಎಂದು ಅವರು ಭಾವಿಸಿದ್ದರು. ಹೀಗಾಗಿ ಸಂಪೂರ್ಣ ತನಿಖೆ ನಡೆಸಿದಾಗ ಅಬ್ದುಲ್ ಅವರ ವಯಸ್ಸು 152 ವರ್ಷಗಳು ಎಂದು ತಿಳಿದುಬಂದಿದೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅಷ್ಟಕ್ಕು ಈ ಅಬ್ದುಲ್ ಪಾಕಿಸ್ತಾನದ ಹುಂಜಾ ಸಮುದಾಯಕ್ಕೆ ಸೇರಿದವರಾಗಿದ್ದರು.

ಇದನ್ನೂ ಓದಿ: ಸುಗಂಧ ಹೆಚ್ಚಾಗಿರುವ ಸಾಬೂನು ಬಳಸುತ್ತೀರಾ? ಹಾಗದರೆ ಸೊಳ್ಳೆಗಳಿಗೆ ನೀವೇ ಇಷ್ಟ!

ಈ ಸಮುದಾಯವು ಪಾಕಿಸ್ತಾನದ ಕಾರಕೋರಂ ಪರ್ವತ ಪ್ರದೇಶದ ಹುಂಜಾ ಕಣಿವೆಯಲ್ಲಿ ವಾಸಿಸುತ್ತಿದೆ. ಇದನ್ನು ಹಂಜ್‌ಕುಟಾಸ್ ಅಥವಾ ಹುಂಜಾ ಎಂದು ಕರೆಯಲಾಗುತ್ತದೆ. ಅವರ ಜನಸಂಖ್ಯೆಯು ತುಂಬಾ ಚಿಕ್ಕದಾಗಿದ್ದರೂ ವಿಶ್ವದಲ್ಲೇ ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿದ್ದಾರೆ. ಅತ್ಯಂತ ಆರೋಗ್ಯಕರ, ಅತ್ಯಂತ ಸಮೃದ್ಧ ಹಾಗೂ ಸಂತೋಷದ ಸಮುದಾಯ ಎಂದೂ ಕರೆಯಲಾಗುತ್ತದೆ. ಇಲ್ಲಿಯವರೆಗೆ ಈ ಸಮುದಾಯದ ಯಾವುದೇ ವ್ಯಕ್ತಿಗೆ ಕ್ಯಾನ್ಸರ್ ಬಂದಿಲ್ಲ ಎಂದು ಹೇಳಲಾಗುತ್ತದೆ.

ಹುಂಜಾ ಸಮುದಾಯದ ದೀರ್ಘಾಯುಷ್ಯದ ಹಿಂದೆ ಏನಾದರೂ ಪವಾಡವಿರಬಹುದು ಎಂದು ನೀವು ಭಾವಿಸುತ್ತಿದ್ದರೆ, ಅದು ತಪ್ಪು. ವಾಸ್ತವವಾಗಿ, ಈ ಜನರು ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆರೋಗ್ಯವಾಗಿರುತ್ತಾರೆ. ಅವರ ಆಯುಷ್ಯವೂ ದೀರ್ಘವಾಗಿರಲು ಇದೇ ಕಾರಣ. ಅಖ್ರೋಟ್ ಮತ್ತು ಜರ್ದಾಳುಗಳನ್ನು ಅತಿಯಾಗಿ ಸೇವಿಸುವುದರಿಂದ ಈ ಸಮಯದಾಯದ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದಿಲ್ಲ.

ಎರಡರಿಂದ ಮೂರು ತಿಂಗಳು ಉಪವಾಸ

ಹುಂಜಾ ಸಮುದಾಯದ ಜನರು ವರ್ಷದಲ್ಲಿ 2 ರಿಂದ 3 ತಿಂಗಳು ಆಹಾರ ಸೇವಿಸುವುದಿಲ್ಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅವರು ಪಾನೀಯ ಮಾತ್ರ ಕುಡಿಯುತ್ತಾರೆ. ಅವರ ಜೀವನಶೈಲಿಯು ದೀರ್ಘ ನಡಿಗೆ ಮತ್ತು ಹಣ್ಣುಗಳು, ಹಸಿ ತರಕಾರಿಗಳು, ಬೀಜಗಳು, ಹಾಲು ಮತ್ತು ಮೊಟ್ಟೆಗಳ ಆಹಾರಕ್ರಮವನ್ನು ಒಳಗೊಂಡಿದೆ. ಈ ಜನರು 70 ವರ್ಷ ವಯಸ್ಸಿನಲ್ಲೂ ಯುವಕರಾಗಿ ಕಾಣಲು ಮತ್ತು 150 ವರ್ಷಗಳವರೆಗೆ ಬದುಕಲು ಇದು ಕಾರಣವಾಗಿದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’