ಜೂನ್ ವರ್ಷದ ಆರನೇ ತಿಂಗಳಾಗಿದ್ದು ಈ ಮಾಸಕ್ಕೆ ರೋಮನ್ ದೇವತೆ ಜುನೋ ಹೆಸರನ್ನು ಇಡಲಾಗಿದೆ. ಈ ಭಾರಿ ಯುಪಿಎಸ್ಸಿ, ಎಸ್ಎಸ್ಸಿ, ಎನ್ಡಿಎ, ಸಿಡಿಎಸ್, ಪಿಎಸ್ಸಿ, ಇತ್ಯಾದಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಹಾಯ ಮಾಡುವ ಜೂನ್ ತಿಂಗಳಲ್ಲಿನ ಪ್ರಮುಖ ದಿನಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳನ್ನು ಒಳಗೊಂಡಿದೆ.
ಸುಸ್ಥಿರತೆ, ಆರ್ಥಿಕ ಅಭಿವೃದ್ಧಿ, ಜೀವನೋಪಾಯ ಮತ್ತು ಪೋಷಣೆಗೆ ಹೈನುಗಾರಿಕೆ ಕ್ಷೇತ್ರದ ಪ್ರಮುಖ ಕೊಡುಗೆಗಳನ್ನು ಸ್ಮರಿಸಲು ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಜೂನ್ 1 ರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಮಹಾಧಿವೇಶನವು 2012 ರಲ್ಲಿ ತಮ್ಮ ಮಕ್ಕಳ ಬಗ್ಗೆ ಪೋಷಕರ ನಿರಂತರ ಬೆಂಬಲ, ತ್ಯಾಗ ಮತ್ತು ಬದ್ಧತೆಯನ್ನು ಗೌರವಿಸುವ ನಿರ್ಣಯವನ್ನು ಅಂಗೀಕರಿಸುವ ಮೂಲಕ ಈ ದಿನವನ್ನು ಘೋಷಿಸಿತು.
ಈ ದಿನವನ್ನು ಜೂನ್ 2 ರಂದು ಯುರೋಪ್ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಏಕೆಂದರೆ 1975 ಜೂನ್ 2 ರಂದು ಫ್ರಾನ್ಸ್ನಲ್ಲಿ ಸ್ಯಾಂಟ್-ನಿಜಿಯರ್ ಚರ್ಚ್ನಲ್ಲಿ ಸುಮಾರು 100 ಲೈಂಗಿಕ ಕಾರ್ಯಕರ್ತರು ತಮ್ಮ ಶೋಷಕ ಜೀವನ ಪರಿಸ್ಥಿತಿಗಳು ಮತ್ತು ಕೆಲಸದ ಸಂಸ್ಕೃತಿಯ ಬಗ್ಗೆ ಕೋಪ ವ್ಯಕ್ತಪಡಿಸಿದರು. ಜೊತೆಗೆ ಜೂನ್ 10 ರಂದು ಚರ್ಚ್ ಮೇಲೆ ಪೊಲೀಸ್ ಪಡೆಗಳು ಕ್ರೂರವಾಗಿ ದಾಳಿ ನಡೆಸಿದವು. ಈ ಕ್ರಿಯೆಯು ರಾಷ್ಟ್ರೀಯ ಆಂದೋಲನವಾಯಿತು. ಈಗ ಯುರೋಪ್ ಮತ್ತು ವಿಶ್ವಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ.
ತೆಲಂಗಾಣಕ್ಕೆ ಕನಿಷ್ಠ ಎರಡು ಸಾವಿರದ ಐನೂರು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಭವ್ಯ ಇತಿಹಾಸವಿದೆ. ಪ್ರತಿ ವರ್ಷ ತೆಲಂಗಾಣ ರಾಜ್ಯವು ಜೂನ್ 2ರಂದು ಸಂಸ್ಥಾಪನಾ ದಿನವನ್ನು ಭವ್ಯವಾಗಿ ಆಚರಿಸುತ್ತದೆ ಮತ್ತು ವಿವಿಧ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಇತ್ಯಾದಿಗಳನ್ನು ನಡೆಸುತ್ತದೆ. ಹೊಸ ರಾಜ್ಯವನ್ನು ರಚಿಸಲು ತೆಲಂಗಾಣದ ಹೋರಾಟವು 1950 ರ ದಶಕದಲ್ಲಿ ಪ್ರಾರಂಭವಾಯಿತು.
ಕೈಗೆಟುಕುವ, ಪರಿಸರ ಸ್ನೇಹಿ ಸುಸ್ಥಿರ ಸಾರಿಗೆ ವಿಧಾನಗಳಿಗೆ ಸೂಕ್ತವಾದ ಬೈಸಿಕಲ್ ನ ಅನನ್ಯತೆ, ದೀರ್ಘಾಯುಷ್ಯ ಮತ್ತು ಬಹುಮುಖತೆಯನ್ನು ಗುರುತಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜೂನ್ 3 ಅನ್ನು ಅಂತರಾಷ್ಟ್ರೀಯ ವಿಶ್ವ ಬೈಸಿಕಲ್ ದಿನವೆಂದು ಘೋಷಿಸಿತು.
ಪ್ರತಿ ವರ್ಷ ಜೂನ್ 4 ರಂದು, ವಿಶ್ವಸಂಸ್ಥೆಯು (ಯುಎನ್) ಆಕ್ರಮಣಶೀಲತೆಗೆ ಬಲಿಯಾದ ಮುಗ್ಧ ಮಕ್ಕಳ ಅಂತರಾಷ್ಟ್ರೀಯ ದಿನವನ್ನು ಆಚರಿಸುತ್ತದೆ. ವಿಶ್ವದಾದ್ಯಂತ ಸಾಕಷ್ಟು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ನಿಂದನೆಗೆ ಬಲಿಯಾದ ಮಕ್ಕಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಮತ್ತು ಇದನ್ನು 100 ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ. ಪರಿಸರ ನಮ್ಮ ಉಸಿರು ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಈ ಕಾರಣದಿಂದ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಕಲುಷಿತ ಆಹಾರ ಮತ್ತು ನೀರು ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜಾಗತಿಕವಾಗಿ ಗಮನ ಸೆಳೆಯಲು ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೆ, ಈ ದಿನ ಆಹಾರದಲ್ಲಿ ವಿಷದ ಅಪಾಯವನ್ನು ಕಡಿಮೆ ಮಾಡುವ ಮಾರ್ಗದ ಮೇಲೆ ಕೇಂದ್ರೀಕರಿಸುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಆಹಾರದ ಸುರಕ್ಷತೆ ಮುಖ್ಯವಾಗಿದೆ.
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರ ಬಗ್ಗೆ ಅಂತರರಾಷ್ಟ್ರೀಯ ಸಾರ್ವಜನಿಕ ಗಮನವನ್ನು ಸೆಳೆಯಲು ಮತ್ತು ಹೆಚ್ಚಿನ ಸಂಶೋಧನೆಯ ತುರ್ತು ಅಗತ್ಯವನ್ನು ಹೆಚ್ಚಿಸಲು ಪ್ರತಿವರ್ಷ ಜೂನ್ 8 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಮೆದುಳಿನಲ್ಲಿರುವ ಗೆಡ್ಡೆಗಳ ಬಗ್ಗೆ ಶಿಕ್ಷಣ ನೀಡಲು ಪ್ರಪಂಚದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸಾಗರ ಮತ್ತು ಜಲ ಮೂಲಗಳನ್ನು ಕಲುಷಿತಗೊಳಿಸುವುದನ್ನು ನಿಲ್ಲಿಸಲು ಸಬಲೀಕರಣಗೊಳಿಸಲು ಪ್ರತಿವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಿ ಮತ್ತು ನಿಜವಾದ ಬದಲಾವಣೆಯನ್ನು ತರಲು ಅಗತ್ಯವಾದ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಅರಿವು ಮೂಡಿಸುತ್ತದೆ.
ನಮ್ಮ ಬೆಂಬಲಿಗ ಸ್ನೇಹಿತರನ್ನು ನೆನಪಿಸಲು ಮತ್ತು ಗೌರವಿಸಲು ಜೂನ್ 8 ರಂದು ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೆ, ನೀವು ಅವರನ್ನು ಮತ್ತು ಅವರ ಜೊತೆ ಇರುವುದನ್ನು ಎಷ್ಟು ಗೌರವಿಸುತ್ತೀರಿ ಎಂಬುದನ್ನು ಅವರಿಗೆ ವ್ಯಕ್ತಪಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಗೊಂಬೆ ಪ್ರಿಯರಿಗೆ ಇದು ವಿಶೇಷ ದಿನ. ಈ ದಿನ ಶಾಂತಿ ಮತ್ತು ಸಂತೋಷದ ಸಾರ್ವತ್ರಿಕ ಸಂದೇಶವನ್ನು ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಪ್ರತಿವರ್ಷ ಜೂನ್ ತಿಂಗಳ ಎರಡನೇ ಶನಿವಾರದಂದು ಆಚರಿಸಲಾಗುತ್ತದೆ.
ವಿಶ್ವಾದ್ಯಂತ ಬಾಲ ಕಾರ್ಮಿಕರ ಅಳಿವು, ಪ್ರಯತ್ನಗಳು ಮತ್ತು ಅದನ್ನು ತೊಡೆದುಹಾಕಲು ಅಗತ್ಯವಿರುವ ಕ್ರಮಗಳ ಬಗ್ಗೆ ಗಮನ ಇಡಲು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಈ ದಿನವನ್ನು ಪ್ರಾರಂಭಿಸಿದೆ. 2015 ರಲ್ಲಿ, ವಿಶ್ವ ನಾಯಕರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ಅಳವಡಿಸಿಕೊಂಡರು.
ಪ್ರಪಂಚದಾದ್ಯಂತ ರಕ್ತದಾನದ ತುರ್ತು ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಕ್ತದಾನಿಗಳ ಬೆಂಬಲವನ್ನು ಗುರುತಿಸಿ, ಪ್ರಶಂಸಿಸಲು ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯವೆಂದರೆ “ರಕ್ತದಾನವು ಒಗ್ಗಟ್ಟಿನ ಕ್ರಿಯೆಯಾಗಿದೆ. ಈ ಪ್ರಯತ್ನದಲ್ಲಿ ಕೈಜೋಡಿಸಿ ಮತ್ತು ಜೀವಗಳನ್ನು ಉಳಿಸಿ”.
ಶುದ್ಧ ಇಂಧನವನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 15 ರಂದು ವಿಶ್ವ ಪವನ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಶುದ್ಧ ಪವನ ಶಕ್ತಿಯನ್ನು ಮರುರೂಪಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಕಾಳಜಿಯುಳ್ಳ ಹಿರಿಯರಿಗಾಗಿ ಧ್ವನಿ ಎತ್ತಲು ಈ ದಿನವನ್ನು ಪ್ರತಿವರ್ಷ ಜೂನ್ 15 ರಂದು ಆಚರಿಸಲಾಗುತ್ತದೆ. ಹಿರಿಯರ ನಿಂದನೆಯು ಜಾಗತಿಕ ಸಾಮಾಜಿಕ ಸಮಸ್ಯೆಯಾಗಿದ್ದು, ಇದು ಪ್ರಪಂಚದಾದ್ಯಂತದ ಲಕ್ಷಾಂತರ ವೃದ್ಧರ ಆರೋಗ್ಯ ಮತ್ತು ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಈ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿಕೃತವಾಗಿ ಗುರುತಿಸಿದೆ.
ಮರುಭೂಮೀಕರಣ ಮತ್ತು ಬರದ ಪರಿಣಾಮಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಹಕಾರದ ಬಗ್ಗೆ ಜಾಗೃತಿ ಮೂಡಿಸಲು 1995 ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 17 ಅನ್ನು “ಮರುಭೂಮೀಕರಣ ಮತ್ತು ಬರಗಾಲವನ್ನು ಎದುರಿಸುವ ವಿಶ್ವ ದಿನ” ಎಂದು ಘೋಷಿಸಿತು. ಮರುಭೂಮೀಕರಣವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು, ಪರಿಹಾರಗಳು ಸಾಧ್ಯ ಮತ್ತು ಎಲ್ಲಾ ಹಂತಗಳಲ್ಲಿ ಭಾಗವಹಿಸುವಿಕೆ ಮತ್ತು ಸಹಕಾರ ಮುಖ್ಯ ಎಂದು ಜನರಿಗೆ ನೆನಪಿಸಲು ಇದು ಒಂದು ವಿಶಿಷ್ಟ ಸಂದರ್ಭವಾಗಿದೆ.
ವೈವಿಧ್ಯತೆ ಮತ್ತು ಅನಂತ ಸಾಧ್ಯತೆಗಳನ್ನು ಪ್ರತಿನಿಧಿಸಲು ಪ್ರತಿವರ್ಷ ಜೂನ್ 18 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಆಟಿಸಂನಿಂದ ಬಳಲುತ್ತಿರುವ ರೋಗಿಗಳು ತಮ್ಮ ಅವರ ಕುಟುಂಬಗಳು ಅಥವಾ ಆರೈಕೆದಾರರೊಂದಿಗೆ ಒಟ್ಟಿಗೆ ಸೇರುವ ದಿನ. ಜೊತೆಗೆ ಜಾಗೃತಿ, ಸ್ವೀಕಾರ ಮತ್ತು ಸ್ವಾಯತ್ತತೆಯನ್ನು ಉತ್ತೇಜಿಸುವ ದಿನ.
ಅಂತರರಾಷ್ಟ್ರೀಯ ಪಿಕ್ನಿಕ್ ದಿನವನ್ನು ಪ್ರತಿವರ್ಷ ಜೂನ್ 18 ರಂದು ಆಚರಿಸಲಾಗುತ್ತದೆ. ಇದು ನಿಮ್ಮ ಹತ್ತಿರದ ಮತ್ತು ಪ್ರೀತಿಪಾತ್ರರೊಂದಿಗೆ ಪ್ರಕೃತಿಯನ್ನು ಆನಂದಿಸುವ ದಿನವಾಗಿದೆ.
ಇದನ್ನು ಪ್ರತಿವರ್ಷ ಜೂನ್ ಮೂರನೇ ಭಾನುವಾರದಂದು ಪಿತೃತ್ವದ ನೆನಪಿಗಾಗಿ ಆಚರಿಸಲಾಗುತ್ತದೆ ಮತ್ತು ಸಮಾಜಕ್ಕೆ ನೀಡಿದ ಬೆಂಬಲ ಮತ್ತು ಕೊಡುಗೆಗಾಗಿ ಎಲ್ಲಾ ತಂದೆಯರನ್ನು ಶ್ಲಾಘಿಸುತ್ತದೆ.
ಕುಡಗೋಲು ಕೋಶ ರೋಗ (ಎಸ್ಸಿಡಿ) ಮತ್ತು ರೋಗಿಗಳು ಅಥವಾ ರೋಗಿಯ ಕುಟುಂಬವು ಎದುರಿಸುತ್ತಿರುವ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು 2008 ರಿಂದ ವಿಶ್ವ ಕುಡಗೋಲು ಕೋಶ ಜಾಗೃತಿ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಎಸ್ಸಿಡಿಯನ್ನು ಸಾರ್ವಜನಿಕ ಆರೋಗ್ಯ ಕಾಳಜಿ ಎಂದು ಗುರುತಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಈ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು.
ಯಾವಾಗಲೂ ಅವಸರ ಮಾಡುವ ಬದಲು ನಿಧಾನಗೊಳಿಸಲು ಮತ್ತು ಜೀವನವನ್ನು ಸಾಧ್ಯವಾದಷ್ಟು ಆನಂದಿಸಲು ಜನರಿಗೆ ನೆನಪಿಸಲು ಈ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ.
ಪ್ರಪಂಚದಾದ್ಯಂತ ನಿರಾಶ್ರಿತರು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಪ್ರತಿವರ್ಷ ಜೂನ್ 20 ರಂದು ಆಚರಿಸಲಾಗುತ್ತದೆ.
ಪ್ರತಿ ವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಗೀತವನ್ನು ಉತ್ತೇಜಿಸಲು ಮತ್ತು ಸಂಗೀತದ ಮೂಲಕ ಜಾಗತಿಕ ಸಾಮರಸ್ಯವನ್ನು ಸ್ಥಾಪಿಸುವ ಒಂದು ಮಾರ್ಗವಾಗಿದೆ.
ಜಲ ವಿಜ್ಞಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 21 ರಂದು ವಿಶ್ವ ಜಲ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಅಂತರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆ (ಐಎಚ್ಒ) ಮತ್ತು ಅದರ ಸದಸ್ಯರು ಈ ದಿನವನ್ನು ಆಚರಿಸುತ್ತಾರೆ.
ಜೀವನದಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಯೋಗದ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಜೂನ್ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ, ಆಯುಷ್ ಸಚಿವಾಲಯವು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತದೆ.
ಬೇಸಿಗೆಯ ಅಯನ ಸಂಕ್ರಾಂತಿಯನ್ನು ಜೂನ್ 21 ರಂದು ಆಚರಿಸಲಾಗುತ್ತದೆ. ಇದು ಭಾರತದಲ್ಲಿ ಅತಿ ದೀರ್ಘವಾದ ಹಗಲನ್ನು ಹೊಂದಿರುವ ದಿನವಾಗಿದೆ.
ಇದನ್ನೂ ಓದಿ:Festivals in June 2023: ಜೂನ್ ತಿಂಗಳಲ್ಲಿ ಆಚರಿಸಲಾಗುವ ಭಾರತೀಯ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
ಜೀವನದಲ್ಲಿ ಆಟಗಳ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಜೂನ್ 23 ರಂದು ಅಂತರಾಷ್ಟ್ರೀಯ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವಸಂಸ್ಥೆಯ ಮಹಾಧಿವೇಶನವು ಜೂನ್ 23ನ್ನು ಸಾರ್ವಜನಿಕ ಸೇವಾ ದಿನವನ್ನಾಗಿ ಆಚರಿಸಲು ಈ ದಿನವನ್ನು ಗೊತ್ತು ಪಡಿಸಿದೆ. ಇದು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಸೇವೆಯ ಕೊಡುಗೆಯನ್ನು ತೋರಿಸುತ್ತದೆ. ಸಾರ್ವಜನಿಕರ ಕೆಲಸವನ್ನು ಗುರುತಿಸುತ್ತದೆ ಮತ್ತು ವೃತ್ತಿಜೀವನವನ್ನು ಮುಂದುವರಿಸಲು ಯುವಕರನ್ನು ಪ್ರೋತ್ಸಾಹಿಸುತ್ತದೆ.
ತಮ್ಮ ಸಂಗಾತಿಯ ಮರಣದ ನಂತರ ಹಲವಾರು ದೇಶಗಳಲ್ಲಿ ವಿಧವೆಯರು ಅನುಭವಿಸುವ ಮತ್ತು ಎದುರಿಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್ 23 ರಂದು ಅಂತರಾಷ್ಟ್ರೀಯ ವಿಧವೆಯರ ದಿನವನ್ನು ಆಚರಿಸಲಾಗುತ್ತದೆ.
ಮಾದಕದ್ರವ್ಯಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಮಾದಕದ್ರವ್ಯ ಮುಕ್ತ ಸಮಾಜ ಮಾಡಲು ಪ್ರತಿ ವರ್ಷ ಜೂನ್ 26 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಚಿತ್ರಹಿಂಸೆಯನ್ನು ನಿರ್ಮೂಲನೆ ಮಾಡಲು ಕ್ರೂರ, ಅಮಾನವೀಯ ಅಥವಾ ಕೀಳುಮಟ್ಟದ ಚಿಕಿತ್ಸೆ ಅಥವಾ ಶಿಕ್ಷೆಯ ವಿರುದ್ಧ ಒಡಂಬಡಿಕೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಯನ್ನು ಬೆಂಬಲಿಸಲು ಯುಎನ್ ಜನರಲ್ ಅಸೆಂಬ್ಲಿ 1997 ರ ಡಿಸೆಂಬರ್ 12 ರಂದು ಚಿತ್ರ ಹಿಂಸೆಯಿಂದ ಬಲಿಯಾಗುತ್ತಿರುವವರನ್ನು ಬೆಂಬಲಿಸಲು ಅಂತರಾಷ್ಟ್ರೀಯ ದಿನವೆಂದು ಘೋಷಿಸಿತು.
ದೈನಂದಿನ ಜೀವನದಲ್ಲಿ ಅಂಕಿ ಅಂಶಗಳ ಬಳಕೆಯನ್ನು ಜನಪ್ರಿಯಗೊಳಿಸಲು ಜೂನ್ 29 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನಾಚರಣೆಯನ್ನು ನೆನಪಿಸುತ್ತದೆ.
ಸಂರಕ್ಷಣಾ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಭೂಮಿಯ ಮೇಲಿನ ಉಷ್ಣವಲಯದ ಪ್ರದೇಶಗಳನ್ನು ಉತ್ತೇಜಿಸಲು ಇದನ್ನು ವಾರ್ಷಿಕವಾಗಿ ಜೂನ್ 29 ರಂದು ಆಚರಿಸಲಾಗುತ್ತದೆ.
ಕ್ಷುದ್ರಗ್ರಹದ ಬಗ್ಗೆ ಆನ್ಲೈನ್ ಶಿಕ್ಷಣವನ್ನು ಒದಗಿಸಲು ಜೂನ್ 30 ರಂದು ಕ್ಷುದ್ರಗ್ರಹ ದಿನವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮವನ್ನು 30 ಜೂನ್ 1908 ರಂದು ನಡೆದ ಸೈಬೀರಿಯನ್ ತುಂಗುಸ್ಕಾ ಘಟನೆಯ ವಾರ್ಷಿಕೋತ್ಸವದಂದು ನಡೆಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Thu, 1 June 23